ಗಂಡೆಂದು ಹೆಣ್ಣು ಮಗು ಕೊಟ್ಟ ಸಿಬ್ಬಂದಿ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅದಲು ಬದಲು ಆರೋಪ ಕೇಳಿಬಂದಿದೆ. ತಮ್ಮ ಗಂಡು ಮಗುವನ್ನು ಆಸ್ಪತ್ರೆ ಸಿಬ್ಬಂದಿ ಬದಲಾಯಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ಮೊದಲು ಗಂಡು ಮಗುವನ್ನು ನೀಡಿ ನಂತರ ಹೆಣ್ಣು ಮಗು ಹುಟ್ಟಿರುವುದಾಗಿ ಹೇಳುತ್ತಿದ್ದಾರೆ ಎಂದು ದಂಪತಿಗಳು ದೂರಿದ್ದಾರೆ.

ಗಂಡೆಂದು ಹೆಣ್ಣು ಮಗು ಕೊಟ್ಟ ಸಿಬ್ಬಂದಿ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು
ಸರ್ಕಾರಿ ಆಸ್ಪತ್ರೆ
Edited By:

Updated on: Jul 06, 2025 | 1:27 PM

ರಾಯಚೂರು, ಜುಲೈ 06: ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು (baby) ಅದಲು ಬದಲು ಮಾಡಿರುವ ಆರೋಪ ಕೇಳಿಬಂದಿದೆ. ಗಂಡು ಮಗು ಕೊಟ್ಟು ಬಳಿಕ ಹೆಣ್ಣು ಹುಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಸದ್ಯ ಸಿಂಧನೂರು ನಗರ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

ನಡೆದದ್ದೇನು?

ಸಿಂಧನೂರು ತಾಲ್ಲೂಕಿನ ಗಾಂಧಿನಗರದ ಹುಲ್ಲಪ್ಪ ಹಾಗೂ ರೇವತಿ ದಂಪತಿ ಮಗು ಅದಲು-ಬದಲು ಮಾಡಿರುವ ಆರೋಪ ಕೇಳಿಬಂದಿದೆ. ಹೆರಿಗೆ ಬಳಿಕ ರೇವತಿಗೆ ಗಂಡು ಮಗು ನೀಡಿ ಎದೆ ಹಾಲುಣಿಸಲು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಇದನ್ನೂ ಓದಿ: ಕೃಷಿಯಲ್ಲಿ ಸಾಧನೆಗೈದ ಅಪ್ಪ: ಓದಿನಲ್ಲಿ ಸಾಧನೆ ಮಾಡಿ 6 ಚಿನ್ನದ ಪದಕ ಗಿಟ್ಟಿಸಿಕೊಂಡ ಮಗ

ಆದರೆ ಆ ಬಳಿಕ ತಮ್ಮ ವರಸೆ ಬದಲಾಯಿಸಿದ ಆಸ್ಪತ್ರೆ ಸಿಬ್ಬಂದಿ ರೇವತಿ ಅವರಿಗೆ ನಿಮಗೆ ಹೆಣ್ಣು ಮಗು ‌ಹುಟ್ಟಿದೆ. ಗಂಡು ಮಗು ಅಲ್ಲ ತಪ್ಪಾಗಿದೆ ಎಂದಿದ್ದಾರೆ. ನಿಮಗೆ ಸಿಸೇರಿಯನ್ ಆಗಿ ಹೆಣ್ಣು ‌ಮಗು ಹುಟ್ಟಿದೆ ಎಂದು ನರ್ಸ್​ಗಳು ಹೇಳಿದ್ದಾರೆ. ಹೀಗಾಗಿ ಆಸ್ಪತ್ರೆ ನಡೆ ಬಗ್ಗೆ ರೇವತಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಕೆರೆಯಲ್ಲಿ ಮುಳುಗಿ ಅವಳಿ-ಜವಳಿ ಮಕ್ಕಳು ಸಾವು

ಕೆರೆಯಲ್ಲಿ ಮುಳುಗಿ ಅವಳಿ-ಜವಳಿ ಮಕ್ಕಳು ಮೃತಪಟ್ಟಿರುವಂತಹ ಘಟನೆ ಇತ್ತೀಚೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಮೂರುವರೆ ವರ್ಷದ ಮುದಸ್ಸೀರ್ ಮತ್ತು ಮುಜಮ್ಮಿಲ್ ಮೃತ ಮಕ್ಕಳು.

ಇದನ್ನೂ ಓದಿ: ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ಅನುಮೋದನೆ ತರಲಿ: ಡಿಕೆ ಸುರೇಶ್

ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರೆ, ಇತ್ತ ತಂದೆ ಮನೆಯಲ್ಲಿಯೇ ಇದ್ದರು. ಅಂಗನವಾಡಿಗೆ ಹೋಗೋದಾಗಿ ಹೇಳಿ ಮನೆಯಿಂದ ಹೋಗಿದ್ದ ಮಕ್ಕಳು, ಮನೆ ಬಳಿಯೇ ಇರುವ ಕೆರೆ ಬಳಿ ಆಟವಾಡಲು ಹೋಗಿದ್ದರು. ಆದರೆ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದರಿಂದ ಮಕ್ಕಳಿಬ್ಬರು ಮೃತಪಟ್ಟಿದ್ದರು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.