AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಉಳಿದ ಆಹಾರ ಸೇವಿಸಿ 7 ಹಸುಗಳ ಸಾವು, 8 ಹಸುಗಳು ಅಸ್ವಸ್ಥ

ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ತ್ಯಾಜ್ಯ ಆಹಾರ ಸೇವಿಸಿ ಹಸುಗಳು ಬಲಿಯಾಗಿವೆ.

ರಾಯಚೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಉಳಿದ ಆಹಾರ ಸೇವಿಸಿ 7 ಹಸುಗಳ ಸಾವು, 8 ಹಸುಗಳು ಅಸ್ವಸ್ಥ
ರಾಯಚೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ
ಆಯೇಷಾ ಬಾನು
|

Updated on:Mar 16, 2023 | 9:49 AM

Share

ರಾಯಚೂರು: ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಪಂಚರತ್ನ ಯಾತ್ರೆ, ಪ್ರಜಾಧ್ವನಿ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುವ ಯತ್ನ ನಡೆಯುತ್ತಿದೆ. ಆದ್ರೆ ರಾಜಕೀಯ ಪಕ್ಷಗಳ ಈ ಯಾತ್ರೆ ಹಸುಗಳ ಜೀವಕ್ಕೆ ಕುತ್ತು ತರುತ್ತಿದೆ. ಕಳೆದ ತಿಂಗಳ ಫೆಬ್ರವರಿಯಲ್ಲಿ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದ ಜೆಡಿಎಸ್​ನ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ಎಸೆಯಲಾಗಿತ್ತು. ಪ್ಲಾಸ್ಟಿಕ್ ಸಮೇತ ಉಳಿದ ಆಹಾರ ತಿಂದು ಎರಡು ಹಸುಗಳು ಸಾವನ್ನಪ್ಪಿದ್ದವು. ಆದ್ರೆ ಈಗ ಮತ್ತೆ ಇದೇ ರೀತಿಯ ಘಟನೆ ಮರು ಕಳಿಸಿದೆ. ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ(VIjaya Sankalpa Yatre) ತ್ಯಾಜ್ಯ ಆಹಾರ ಸೇವಿಸಿ ಹಸುಗಳು ಬಲಿಯಾಗಿವೆ. ಗೋ ರಕ್ಷಣೆ ಕಾಯ್ದೆ ತಂದ ಸರ್ಕಾರವೇ ಹಸುಗಳ ಮರಣಕ್ಕೆ ಕಾರಣವಾಗಿದೆ.

ಇದೇ ಮಾರ್ಚ್ 10 ರಂದು ಗುಂಜಳ್ಳಿ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಹಿನ್ನೆಲೆ ಕಾರ್ಯಕರ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಕಾರ್ಯಕರ್ತರು ಭೋಜನ ಸವಿದ ಬಳಿಕ ಉಳಿದ ಆಹಾರವನ್ನು ಒಂದೆಡೆ ರಾಶಿ ಹಾಕಲಾಗಿತ್ತು. ಆದ್ರೆ ಈ ರಾಶಿ ಹಾಕಿದ್ದ ಉಳಿದ ಆಹಾರ ತಿಂದು ಗುಂಜಳ್ಳಿ ಗ್ರಾಮದ ಬಹುತೇಕ ಹಸುಗಳು, ಎಮ್ಮೆಗಳು ಅಸ್ವಸ್ಥಗೊಂಡಿವೆ. ಅನಾರೋಗ್ಯದಿಂದ ಬಳಲಿ 7 ಹಸುಗಳು ಸಾವನ್ನಪ್ಪಿವೆ. 8 ಹಸುಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟ್ಟೆ ಉಬ್ಬರಿಸಿಕೊಂಡು ಹಸುಗಳು ಸರಣಿ ಸಾವನ್ನಪ್ಪಿವೆ.

ಇದನ್ನೂ ಓದಿ: ಶೃಂಗೇರಿ ತಾಲೂಕಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಬಳಿಕ ಪ್ಲಾಸ್ಟಿಕ್ ಸಮೇತ ಉಳಿದ ಆಹಾರ ತಿಂದು ಎರಡು ಹಸು ಸಾವು!

ಹೈನುಗಾರಿಕೆ ಮಾಡುತ್ತಿದ್ದ ರೈತರು ವಿಜಯ ಸಂಕಲ್ಪ ಯಾತ್ರೆ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಬಿಜೆಪಿ ಯಾತ್ರೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರೊಬ್ಬರೂ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ. ಇನ್ನೊಂದೆಡೆ ಪಶುವೈದ್ಯರು ಕೂಡ ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ರೈತರು ಕಣ್ಣೀರು ಹಾಕಿದ್ದಾರೆ. ಇನ್ನು ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿ ಶ್ರೀರಾಮುಲು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Thu, 16 March 23