ರಾಯಚೂರು: ಹೆಂಡ್ತಿ ತಂಟೆಗೆ ಬಂದಿದ್ದವನ ಬರ್ಬರ ಹತ್ಯೆ; ಪತಿ-ಪತ್ನಿ ಸೇರಿ ಐದು ಜನ ಅರೆಸ್ಟ್!

ಇದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ. ಅಲ್ಲಿ ಹೆಣ್ಣಿನ ವಿಚಾರಕ್ಕೆ ನೆತ್ತರು ಹರಿದಿತ್ತು. ಪತ್ನಿಗೆ ಬ್ಲಾಕ್​ಮೇಲ್ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಮಹಿಳೆಯ ಪತಿಯೇ ಆ ವ್ಯಕ್ತಿಯನ್ನು ಕೊಲೆ ಮಾಡಿ ಪೊಲೀಸರಿಗೆ ನಾನೇ ಹತ್ಯೆ ಮಾಡಿರುವುದಾಗಿ ಫೋನ್ ಮೂಲಕ ತಿಳಿಸಿದ್ದ.

ರಾಯಚೂರು: ಹೆಂಡ್ತಿ ತಂಟೆಗೆ ಬಂದಿದ್ದವನ ಬರ್ಬರ ಹತ್ಯೆ; ಪತಿ-ಪತ್ನಿ ಸೇರಿ ಐದು ಜನ ಅರೆಸ್ಟ್!
ಮೃತ ವ್ಯಕ್ತಿ, ಆರೋಪಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 24, 2024 | 6:00 PM

ರಾಯಚೂರು, ಏ.24: ನಿನ್ನೆ(ಏ.23) ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ರಾಯಚೂರು(Raichur) ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದ ಹೊರ ಭಾಗದಲ್ಲಿ ನೆತ್ತರು ಹರಿದಿತ್ತು. ಹಳ್ಳದ ಪಕ್ಕದ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಗುರುತು ಪತ್ತೆಯಾಗದ ರೀತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜೊತೆಗೆ ಕೊಲೆಗೈದಿದ್ದ ಆರೋಪಿ ಮಾರುತಿ ಎಂಬಾತ ಬಳಗಾನೂರು ಪೊಲೀಸರಿಗೆ ಫೋನ್ ಮಾಡಿ, ನಾನು ಊರ ಹೊರಭಾಗದಲ್ಲಿ ಕೊಲೆ ಮಾಡಿದ್ದಿನಿ ಎಂದು ಹೇಳಿದ್ದನು. ಅಷ್ಟಕ್ಕೂ ಅಲ್ಲಿ ಹತ್ಯೆಯಾಗಿದ್ದು ಇದೇ ಬಳಗಾನೂರು ಗ್ರಾಮದ ಖಾದರ್ ಪಾಷಾ.

ವೃತ್ತಿಯಲ್ಲಿ ಚಾಲಕನಾಗಿದ್ದ ಮೃತ ವ್ಯಕ್ತಿ. ಕ್ರೂಸರ್ ವಾಹನವನ್ನ ಓಡಿಸುತ್ತಿದ್ದ. ಹೀಗಿರುವಾಗ ಇದೇ ಬಳಗಾನೂರು ಗ್ರಾಮದವರಾಗಿದ್ದ ಆರೋಪಿ ಪತ್ನಿ ಪುಷ್ಪವತಿ ಅವರಿಗೆ ಮೃತ ಖಾದರ್ ಪಾಷಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನಂತೆ. ಇದೇ ಕಾರಣಕ್ಕೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆರೋಪಿ ಮಾರುತಿ ಕಡೆಯ ವ್ಯಕ್ತಿಯೊಬ್ಬ, ಹತ್ಯೆಯಾದ ಖಾದರ್ ಪಾಷಾ ತಮ್ಮ ರಫಿಗೆ ಫೋನ್ ಮಾಡಿ, ನಿಮ್ಮಣ್ಣನಿಗೆ ಹೇಳು, ನಮ್ಮಕ್ಕನ ತಂಟೆಗೆ ಬರಬೇಡ ಎಂದು ಆತನ ವಿಷ್ಯ ಭಾವನಿಗೆ ಗೊತ್ತಾಗಿದೆ ಅಂತ ವಾರ್ನ್ ಮಾಡಿದ್ದನಂತೆ. ಇದಾದ ಬಳಿಕ ನಿನ್ನೆ(ಏ.23) ಖಾದರ್ ಪಾಷಾ ಹತ್ಯೆಯಾಗಿದೆ. ಇತ್ತ ಮೃತನ ಕುಟುಂಬಸ್ಥರು ಎರಡು ಕೈ ಸೇರಿದರೆ ಚಪ್ಪಾಳೆ, ಆತನನ್ನ ಹೊಡೆಯಬೇಕಿತ್ತು. ಅದು ಬಿಟ್ಟು ಕೊಲೆಯಾಕೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ನೇಹಾ ಕೊಲೆ ಪ್ರಕರಣ; ಫಯಾಜ್ ವಿರುದ್ದ ವಕಾಲತ್ತು ವಹಿಸಬಾರದೆಂದು ವಕೀಲರ ಸಂಘಕ್ಕೆ ಮನವಿ

ಐದು ಜನ ಆರೋಪಿಗಳು ಅರೆಸ್ಟ್​

ಖಾದರ್ ಪಾಷಾ ಹತ್ಯೆ ಪ್ರಕರಣದ ಐದು ಜನ ಆರೋಪಿಗಳನ್ನ ಬಳಗಾನೂರು ಪೊಲೀಸರು ಬಂಧಿಸಿದ್ದಾರೆ. ಮಾರುತಿ, ಮಧು, ಪಾಂಡು, ಗೋವಿಂದಪ್ಪ ಹಾಗೂ ಮಾರುತಿ ಪತ್ನಿ ಪುಷ್ಪಾವತಿ ಬಂಧಿತರು. ಇನ್ನು ಪೊಲೀಸರ ತನಿಖೆ ವೇಳೆ ಬೆಚ್ಚಿ ಬೀಳಿಸುವ ವಿಷಯಗಳು ಬೆಳಕಿಗೆ ಬಂದಿದ್ದು, ಅಷ್ಟಕ್ಕೂ ಹತ್ಯೆಯಾದ ಖಾದರ್ ಪಾಷಾಗೆ ಕಳೆದ 12 ವರ್ಷಗಳ ಹಿಂದೆ ತಬುಸುಮ್ ಎನ್ನುವ ಮಹಿಳೆ ಜೊತೆ ಮದುವೆಯಾಗಿದ್ದು, ಮೂರು ಜನ ಮಕ್ಕಳಿದ್ದಾರೆ. ಇಷ್ಟಿದ್ರು ಇತ ಆರೋಪಿ ಮಾರುತಿ ಪತ್ನಿ ತಂಟೆಗೆ ಹೋಗಿದ್ದನಂತೆ. ಮಾರುತಿ ಜೊತೆ ಮದುವೆಗೂ ಮುನ್ನ ಅಂದ್ರೆ ಎರಡು ವರ್ಷಗಳ ಹಿಂದೆ ಪುಷ್ಪಾವತಿ ಮಸ್ಕಿ ಪಟ್ಟಣದ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿರುವಾಗ ಕ್ರೂಸರ್ ಓಡಿಸ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿತ್ತು.

ನಂತರ ಖಾದರ್ ಪಾಷಾ ಆಕೆಯನ್ನ ಬ್ಲಾಕ್​ಮೇಲ್ ಮಾಡಿ ಆಕೆಯನ್ನ ಬಳಸಿಕೊಂಡಿದ್ದನಂತೆ. ಬಳಿಕ ಮಾರುತಿ ಜೊತೆ ಮದುವೆಯಾದ ಬಳಿಕ ಖಾದರ್ ಪಾಷಾನ ಸಂಪರ್ಕ ತಪ್ಪಿತ್ತು. ಆದ್ರೆ, ಅಷ್ಟಕ್ಕೆ ಸುಮ್ಮನಾಗದ ಖಾದರ್ ಪಾಷಾ ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯನ್ನ ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡಿದ್ದ. ಪತಿ ಜೊತೆ ಬೆಂಗಳೂರಿನಲ್ಲಿದ್ದ ಪುಷ್ಪಾವತಿಗೆ ಕಳೆದ 10 ದಿನಗಳ ಅವಧಿಯಲ್ಲಿ ಹತ್ತಾರು ಬಾರಿ ಖಾದರ್ ಪಾಷಾ ಫೋನ್ ಮಾಡಿದ್ದನಂತೆ. ಆದ್ರೆ, ಆಕೆ ಫೋನ್ ಪಿಕ್ ಮಾಡಿಲ್ಲ. ಆಕೆ ಫೋನ್​ನಲ್ಲಿ ಮಿಸ್​ ಕಾಲ್​ಗಳು ಸಂಖ್ಯೆ ಹೆಚ್ಚಿರೋದನ್ನ ಪತಿ ಮಾರುತಿ ಗಮನಿಸಿದ್ದ. ಆ ಬಗ್ಗೆ ಪ್ರಶ್ನಿಸಿದಾಗ ಪತ್ನಿ ಪುಷ್ಪಾವತಿ ಖಾದರ್ ಪಾಷಾ ಬ್ಲಾಕ್​ ಮೇಲ್ ಮಾಡುತ್ತಿದ್ದ ಹಾಗೂ ಆತ ತನ್ನನ್ನ ಬಳಸಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಳಂತೆ. ಇದರಿಂದ ಕೆರಳಿದ್ದ ಪತಿ ಮಾರುತಿ, ಖಾದರ್ ಪಾಷಾ ಬಳಗಾನೂರಿಗೆ ಬಂದು ಖಾದರ್ ಪಾಷಾನನ್ನ ಮಾತುಕತೆಗೆ ಕರೆದಿದ್ದ. ಅಲ್ಲಿ ಸುತ್ತಿಗೆ, ಕುಡಗೋಲು, ಹಗ್ಗದ ಸಮೇತ ಬಂದಿದ್ದ ಮಾರುತಿ, ಉಳಿದ ಆರೋಪಿಗಳ ಸಹಾಯದಿಂದ ಖಾದರ್ ಪಾಷಾನ ಹತ್ಯೆಗೈದಿದ್ದಾನೆ ಎನ್ನುವ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 24 April 24

ತಾಜಾ ಸುದ್ದಿ