ಜೈಶ್ರೀರಾಮ ಹೇಳಿದ್ದಕ್ಕೆ ಹಲ್ಲೆ: ಘಟನೆ ಹೇಗಾಯ್ತು? ದೂರಿನಲ್ಲಿ ಘಟನೆ ಬಗ್ಗೆ ವಿವರಿಸಿದ ಹಲ್ಲೆಗೊಳಗಾದ ಯವಕ
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಜೈ ಶ್ರೀರಾಮ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಅನ್ಯಕೋಮಿನ 20 ಯುವಕರ ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಕುಮಾರ್ ರಾಠೋಡ್ ಎಂಬಾತ ಘಟನೆ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕೊಪ್ಪಳ, ಏ.24: ಜೈ ಶ್ರೀರಾಮ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಅನ್ಯಕೋಮಿನ 20 ಯುವಕರ ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೊಳಗಾದ ಕುಮಾರ್ ರಾಠೋಡ್ ಎಂಬಾತ ಘಟನೆ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ದೂರಿನಲ್ಲೇನಿದೆ?
ಕಳೆದ ರಾತ್ರಿ(ಏ.23) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ‘ನಾನು ಮತ್ತು ನಮ್ಮೂರಿನ ನಿವಾಸಿ ಪಿರೋಜಖಾನ್ ಎನ್ನುವವ ಸೇರಿ ಕಳೆದ ರಾತ್ರಿ ಸನಶೈನ್ ಬಾರ್ನಲ್ಲಿ ಒಂದೇ ಟೇಬಲ್ನಲ್ಲಿ ಕುಡಿಯುತ್ತಾ ಕೂತಿದ್ದೇವು. ಪಿರೋಜಖಾನ್ ತನ್ನ ಗ್ಲಾಸಿಗೆ ನೀರು ಹಾಕು ಎಂದು ಹೇಳಿದ. ನಾನು ಜೈ ಶ್ರೀರಾಮ ಎಂದು ಹೇಳಿ ವಿಸ್ಕಿಗ್ಲಾಸ್ಗೆ ನೀರು ಹಾಕಿದೆ. ಯಾಕೆ ಜೈ ಶ್ರೀರಾಮ ಅಂತ ಹೇಳಿದೆ ಎಂದು ಪಿರೋಜ್ ಖಾನ್ ಕೇಳಿದ, ನಾನು ಇಂದು ಹನುಮ ಜಯಂತಿ ಇದೆ ಅದಕ್ಕೆ ಜೈ ಶ್ರೀರಾಮ ಎಂದು ಹೇಳಿದೆ.
ಇದನ್ನೂ ಓದಿ:ಕೊಪ್ಪಳ: ಗಂಗಾವತಿಯ ಶ್ರೀರಾಮನಗರದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ
ಈ ವೇಳೆ ಸಮಯದಲ್ಲಿ ನನ್ನ ಮತ್ತು ಪಿರೋಜಖಾನ್ ನಡುವೆ ವಾದ ವಿವಾದವಾಯ್ತು, ಬಾರ್ನಿಂದ ಹೊರ ಬಂದ ನಂತರ ಪಿರೋಜ್ ಖಾನ್ ಮತ್ತು ಆತನ ಕಡೆಯವರು ಜಾತಿ ನಿಂದನೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಕುಮಾರ್ ರಾಠೋಡ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ