ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರಿನ ಯೋಧ ಸಾವು

| Updated By: ವಿವೇಕ ಬಿರಾದಾರ

Updated on: May 21, 2024 | 2:33 PM

ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರ್​ಜಿ ಕ್ಯಾಂಪ್‌ ಸಿಐಎಸ್​ಎಫ್ ಯೋಧ ರವಿಕಿರಣ್ (37) ಮೃತಪಟ್ಟಿದ್ದಾರೆ. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು.

ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರಿನ ಯೋಧ ಸಾವು
ಯೋಧ ರವಿಕಿರಣ್​
Follow us on

ರಾಯಚೂರು, ಮೇ 21: ಆಕಸ್ಮಿಕವಾಗಿ ಗುಂಡು ತಗುಲಿ ಮಾನ್ವಿ (Manvi) ತಾಲೂಕಿನ ಆರ್​ಜಿ ಕ್ಯಾಂಪ್‌ ಸಿಐಎಸ್​ಎಫ್ ಯೋಧ (Soldier) ರವಿಕಿರಣ್ (37) ಮೃತಪಟ್ಟಿದ್ದಾರೆ. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು. ಸೋಮವಾರ (ಮೇ 20) ರಂದು ಚೆನ್ನೈ (Channai) ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್​ನಿಂದ ಸಿಡಿದ ಗುಂಡು ತಾಗಿ ರವಿಕಿರಣ್ ತೀವ್ರವಾಗಿ​ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ.

ಯೋಧ ರವಿಕಿರಣ್​ ಪಾರ ಪಾರ್ಥಿವ ಶರೀರ ಇಂದು (ಮೇ 21) ಆರ್​ಜಿ ಕ್ಯಾಂಪ್​ಗೆ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್​ಜಿ ಕ್ಯಾಂಪ್​ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ. ಯೋಧ ರವಿಕಿರಣ್​ ಅಂತ್ಯಕ್ರಿಯೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಮತ್ತು ಗ್ರಾಮಸ್ಥರು ಯೋಧನಿಗೆ ಅಂತಿಮ‌ ನಮನ ಸಮರ್ಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ