ರಾಯಚೂರು, ಫೆಬ್ರವರಿ 21: ಪ್ರಿಯತಮೆ ಕೈಕೊಟ್ಟಳು ಅಂತ ಪ್ರಿಯಕರ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ನಮ್ಮಿಬ್ಬರನ್ನು ಒಂದು ಮಾಡಿ ಎಂದು ರಾಯಚೂರು (Raichur) ನಗರದ ಮಾರ್ಕೆಟ್ ಯಾರ್ಡ್ ಪೊಲೀಸರಿಗೆ (Police) ಮನವಿ ಮಾಡಿದ್ದಾನೆ. ಯುವಕ ಅಜಿತ್ (ಹೆಸರು ಬದಲಾಯಿಸಲಾಗಿದೆ) ಲ್ಯಾಬ್ ಟೆಕ್ನಿನಿಷಿಯನ್ ಆಗಿ ಮತ್ತು ಯುವತಿ ಸ್ವಪ್ನ (ಹೆಸರು ಬದಲಾಯಿಸಲಾಗಿದೆ) ನರ್ಸ್ ಆಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಅಜಿತ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಸಮಯದಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತಿ ಇರಲಿಲ್ಲ. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನ ಅವರು ಲ್ಯಾಬ್ ಟೆಕ್ನಿಷಿಯನ್ ಆದ ಅಜಿತ್ ಅವರೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದ್ದಾರೆ. ಕಾಲ ಕಳೆದಂತೆ “ನಿನ್ನನು (ಅಜಿತ್) ಪ್ರೀತಿಸಿ ಮದುವೆ ಮಾಡಿಕೊಳ್ಳುವೆ” ಎಂದು ಸ್ವಪ್ನ ಹೇಳಿದ್ದಾರೆ. ಆಗ ಅಜಿತ್ “ನಾನು ಎಸ್.ಸಿ. ಮಾದಿಗ ಜಾತಿಯವ. ನೀನು (ಸ್ವಪ್ನ) ಬಿಲ್ವ ಪೂಜಾರಿ ಜಾತಿಗೆ ಸೇರಿದಳು. ನಿನ್ನ ಕುಟುಂಬದವರು ಒಪ್ಪಿಕೊಳ್ಳದಿದ್ದಲ್ಲಿ ನಮ್ಮ ಪ್ರೀತಿ, ವಿಶ್ವಾಸಕ್ಕೆ ತೊಂದರೆ ಬಂದಲ್ಲಿ ಜೀವನಕ್ಕೆ ಘಾಷಿ ಆಗಬಹುದು” ಅಜಿತ್ ಸ್ವಪ್ನಗೆ ಬುದ್ದಿವಾದ ಹೇಳಿದ್ದಾರೆ.
ಆಗ ಸ್ವಪ್ನ “ನಮ್ಮ ಮನೆಯಲ್ಲಿ ಹಿರಿಯರು ಒಪ್ಪದಿದ್ದಲ್ಲಿ ಕುಟುಂಬಸ್ಥರನ್ನು ಬಿಟ್ಟು ಬಂದು ನಿನ್ನೊಡನೆ ಪ್ರೀತಿಯಿಂದ, ಪ್ರೇಮದಿಂದ ಹೊಂದಾಣಿಕೆಯಿಂದ ನನ್ನ ಜೀವನವನ್ನು ಮುಡುಪಾಗಿ ಇಡುತ್ತೇನೆ. ಮುಂದೆ ಯಾವುದೇ ತೊಂದರೆಗಳು ಬಾರದಂತೆ ನಾನು ನಡೆದುಕೊಳ್ಳುತ್ತೇನೆಂದು” ಅಜಿತ್ಗೆ ಹೇಳಿದ್ದಾರೆ. ಸ್ವಪ್ನಾರ ಪ್ರೀತಿಯ, ಮುದ್ದಾದ ಮಾತಿಗೆ ಸೋತ ಅಜಿತ್ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಲವ್ ಸೆಕ್ಸ್ ದೋಖಾ; ಪ್ರೀತಿ ಹೆಸರಿನಲ್ಲಿ ಯುವತಿಗೆ ವಂಚಿಸಿದ ಕಾನ್ಸ್ಟೇಬಲ್
ಕಾಲಕ್ರಮೇಣ, ಸ್ವಪ್ನರವರು ಅಜಿತ್ ಜೊತೆ ಲೈಂಗಿಕ ಸಂಬಂಧ ಬೆಳಸಿ, ಪ್ರಿಯಕರನಿಂದ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿಸಿದ್ದಾರೆ. ದಿನಗಳು ಕಳೆದಂತೆ ಸ್ವಪ್ನ ಅವರು ಅಜಿತ್ರಿಂದ ದೂರವಾಗಲು ಆರಂಭಿಸಿದ್ದು, ಬೇರೊಬ್ಬ ಯುವಕ ರವಿಯೊಂದಿಗೆ (ಹೆಸರು ಬದಲಾಯಿಸಲಾಗಿದೆ) ಸಲುಗೆಯಿಂದ ಇರಲು ಆರಂಭಿಸಿದ್ದಾರೆ. ಕೊನೆಗೆ ಒಂದು ದಿನ ಅಜಿತ್ ಅವರಿಗೆ ಕೈಕೊಟ್ಟು ಸ್ವಪ್ನರವರು ರವಿಯನ್ನು ಪ್ರೀತಿಸಲು ಆರಂಭಿಸಿದ್ದಾರೆ. ಅಲ್ಲದೆ ಸ್ವಪ್ನ ರವಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ.
ಇದರಿಂದ ಮನನೊಂದ ಅಜಿತ್ ಅವರು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಬಂಧು-ಮಿತ್ರರು ತಡೆದಿದ್ದಾರೆ. ಇನ್ನು ನಮ್ಮಿಬ್ಬರನ್ನು ಒಂದು ಮಾಡುವಂತೆ ಅಜಿತ್ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ವೇಳೆ ನಾನೇನಾದರು ಅನಾಹುತ ಮಾಡಿಕೊಂಡರೆ ಅದಕ್ಕೆ ನೇರ ಕಾರಣ ಸ್ವಪ್ನ ಮತ್ತು ರವಿ ಕಾರಣ ಎಂದು ಅಜಿತ್ ದೂರಿನಲ್ಲಿ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 am, Wed, 21 February 24