ರಾಯಚೂರಿನಲ್ಲಿ ಸರಣಿ ಲವ್ ಜಿಹಾದ್! ಆ ಎರಡೂ ಕೇಸ್ಗೆ ಇದೆಯಾ ಹೈದ್ರಾಬಾದ್ ನೆಟವರ್ಕ್ ಲಿಂಕ್?
ಶಿಕ್ಷಕಿ ಸುಹಾಸಿನಿ ಕೇಸ್ನಲ್ಲಿ ಹೈದ್ರಾಬಾದ್ನ ಲಿಂಕ್ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ನಂತರ ಪೊಲೀಸರು ಶಿಕ್ಷಕಿಯನ್ನ ಆಂಧ್ರದ ಮಂತ್ರಾಲಯದಲ್ಲಿ ಪತ್ತೆ ಹಚ್ಚಿದ್ದರು. ಇದಾದ ಬಳಿಕ ಈಗಿನ ಭಾರತಿ ಕೇಸ್ನಲ್ಲೂ ಹೈದ್ರಾಬಾದ್ ನೆಟ್ವರ್ಕ್ನ ಲಿಂಕ್ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ.
ರಾಯಚೂರಿನಲ್ಲಿ ಲವ್ ಜಿಹಾದ್ ಪ್ರಕರಣ ಸಂಚಲನ ಸೃಷ್ಟಿಸುತ್ತಿದೆ.. ಗಡಿ ಜಿಲ್ಲೆಯ ಲವ್ ಜಿಹಾದ್ ಕೇಸ್ಗಳಲ್ಲಿ ಹೈದ್ರಾಬಾದ್ ನೆಟ್ವರ್ಕ್ ಲಿಂಕ್ (hyderabad gang) ಇರುವ ಶಂಕೆ ವ್ಯಕ್ತವಾಗ್ತಿದೆ.. ಜಿಲ್ಲಾ ಪೊಲೀಸರ ತನಿಖೆ ವೇಳೆ ಭಾರತಿ ಹಾಗೂ ರೆಹಾನ್ ಎಸ್ಕೇಪ್ ಆದ ಬಳಿಕ ಹೈದ್ರಾಬಾದ್ನಲ್ಲೇ ಇದ್ದರು ಅನ್ನುವ ಸ್ಪೋಟಕ ಸತ್ಯ ಬೆಳಕಿಗೆ ಬಂದಿದೆ.
ಹೌದು.. ಗಡಿ ಜಿಲ್ಲೆ ರಾಯಚೂರು ಜಿಲ್ಲೆಯಲ್ಲಿ ಸದ್ದಿಲ್ಲದೇ ಲವ್ ಜಿಹಾದ್ (Love jihad) ಆರೋಪ ಪ್ರಕರಣಗಳು ಹೆಚ್ಚಾಗುತ್ತಿವೆ.. ಕಳೆದ ತಿಂಗಳಷ್ಟೇ ರಾಯಚೂರಿನ ಯರಮರಸ್ ಕ್ಯಾಂಪ್ನ ಶಿಕ್ಷಕಿಯೊಬ್ಬರನ್ನ ಅನ್ಯಕೋಮಿನ ವ್ಯಕ್ತಿ ಕರೆದೊಯ್ದಿರೊ ಆರೋಪ ಕೇಳಿಬಂದಿತ್ತು.. ಆಕೆಯನ್ನ ಮತಾಂತರ ಮಾಡಿ, ಲವ್ ಜಿಹಾದ್ ಮಾಡಿಸೊ ಹುನ್ನಾರದ ಬಗ್ಗೆ ಆ ಶಿಕ್ಷಕಿ ಸುಹಾಸಿನಿ ಅವರ ಪೋಷಕರು ಹೇಳಿಕೊಂಡಿದ್ರು.. ಈ ಕೇಸ್ ಕ್ಲೋಸ್ ಆಯ್ತು ಅನ್ನೊವಾಗ್ಲೆ ಈಗ ಇದೇ ರಾಯಚೂರು ನಗರದಲ್ಲಿ ಭಾರತಿ ಅನ್ನೋ ಯುವತಿಯನ್ನ ಅನ್ಯ ಕೋಮಿನ ರೆಹಾನ್ ಕರೆದೊಯ್ದಿರೊ ಬಗ್ಗೆ ದೂರು ನೀಡಲಾಗಿದೆ.. ಈ ಕೇಸ್ ತನಿಖೆ ನಡೆಸಿರೊ ನೇತಾಜಿ ನಗರ ಪೊಲೀಸರು ಕೆಲ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ನವೆಂಬರ್ 5 ರಂದು ಆಕೆ ನಾಪತ್ತೆಯಾದ ಬಳಿಕ ನವೆಂಬರ್ 9 ರಂದು ಭಾರತಿ ಮಿಸ್ಸಿಂಗ್ ಆಗಿರೊ ಕೇಸ್ ದಾಖಲಾಗಿತ್ತು. ನಂತರ ಆಕೆಯನ್ನ ರೆಹಾನ್ ಮತಾಂತರ ಮಾಡಿ, ಮದುವೆಯಾಗಿರೊ ಸತ್ಯವನ್ನ ಪೊಲೀಸರು (Raichur police) ಬಯಲಿಗೆಳೆದಿದ್ದಾರೆ.
ಇನ್ನು, ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಭಾರತಿ ಪೋಷಕರು ಮತ್ತೆ ನೇತಾಜಿ ಠಾಣೆಯಲ್ಲಿ ರೆಹಾನ್ ವಿರುದ್ಧ ಕಿಡ್ನಾಪ್ ಕೇಸ್ ಸಂಬಂಧ ದೂರು ನೀಡಿದ್ದಾರೆ. ಆದ್ರೆ ಭಾರತಿ ಮಾತ್ರ ಹೆತ್ತವರನ್ನ ತಿರುಗಿ ನೋಡ್ತಿಲ್ಲ. ಅವರ ಸಂಪರ್ಕ ಮಾಡಿಲ್ಲ. ಆಕೆಯ ಮೈಂಡ್ ವಾಷ್ ಮಾಡಿ, ಈ ರೀತಿ ಕುತಂತ್ರ ನಡೆಸಲಾಗಿದೆ. ಇದರ ಹಿಂದೆ ತಂಡವೊಂದು ಕೆಲಸ ಮಾಡುತ್ತಿರೊ ಅನುಮಾನವಿದೆ ಅನ್ನುತ್ತಾರೆ ನಾಗರಾಜ್, ಭಾರತಿ ಸಮುದಾಯದ ಮುಖಂಡ.
ಹೌದು.. ಶಿಕ್ಷಕಿ ಸುಹಾಸಿನಿ ಕೇಸ್ನಲ್ಲಿ ಹೈದ್ರಾಬಾದ್ನ ಲಿಂಕ್ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ನಂತರ ಪೊಲೀಸರು ಶಿಕ್ಷಕಿಯನ್ನ ಆಂಧ್ರದ ಮಂತ್ರಾಲಯದಲ್ಲಿ ಪತ್ತೆ ಹಚ್ಚಿದ್ದರು. ಇದಾದ ಬಳಿಕ ಈಗಿನ ಭಾರತಿ ಕೇಸ್ನಲ್ಲೂ ಹೈದ್ರಾಬಾದ್ ನೆಟ್ವರ್ಕ್ನ ಲಿಂಕ್ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ. ಯಾಕಂದ್ರೆ ಭಾರತಿ ಹಾಗೂ ರೆಹಾನ್ ಎಸ್ಕೇಪ್ ಆದ ಬಳಿಕ ಹೈದ್ರಾಬಾದ್ನಲ್ಲೇ ಉಳಿದು ಕೊಂಡಿದ್ರು. ಕೆಲ ದಿನಗಳ ಕಾಲ ಹೈದ್ರಾಬಾದ್ನಲ್ಲೇ ಇದ್ದುಕೊಂಡು ಭಾರತಿಯನ್ನ ಮತಾಂತರಗೊಳಿಸಿ, ಭಾರತಿಯನ್ನ ಈಗ ಶಹನಾಜ್ ಬೇಗಂ ಅಂತ ಕನ್ವರ್ಟ್ ಮಾಡಲಾಗಿದೆ.
ಅಷ್ಟೇ ಅಲ್ಲ ಇದೇ ಹೈದ್ರಾಬಾದ್ನಲ್ಲೇ ಭಾರತಿ @ ಶಹನಾಜ್ ಬೇಗಂ ಹಾಗೂ ರೆಹಾನ್ ಅವರಿಬ್ಬರ ರಿಜಿಸ್ಟರ್ ಮ್ಯಾರೇಜ್ ಆಗಿದೆ. ಈ ಎಲ್ಲಾ ವಿಚಾರ ನೇತಾಜಿ ನಗರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರಿಬ್ಬರ ನೆಟ್ವರ್ಕ್ ಲೊಕೇಶನ್, ಕಾಲ್ ರೆಕಾರ್ಡ್ಗಳ ಬಗ್ಗೆ ಟೆಕ್ನಿಕಲ್ ಎವಿಡನ್ಸ್ ಕೂಡ ಕಲೆಹಾಕಲಾಗಿದೆ. ಇತ್ತ ಪ್ರಕರಣ ದಾಖಲಾದ ಬಳಿಕ ನೇತಾಜಿ ನಗರ ಪೊಲೀಸರು, ಭಾರತಿ @ ಶಹನಾಜ್ ಬೇಗಂ ಹಾಗೂ ರೆಹಾನ್ ಇಬ್ಬರನ್ನೂ ಠಾಣೆಗೆ ಕರೆಸಿದ್ರು.
ಆಗ ವಿಡಿಯೋ ಚಿತ್ರೀಕರಣ ಮಾಡೋ ಮೂಲಕ ಭಾರತಿ @ ಶಹನಾಜ್ ಬೇಗಂ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಹೀಗೆ ಮತಾಂತರ ಹಾಗೂ ರಿಜಿಸ್ಟರ್ ಮ್ಯಾರೇಜ್ ಆಗೋಕೆ ಸಾಕಷ್ಟು ಓಡಾಟ, ರಿಸ್ಕ್ ಇರತ್ತೆ. ಆದ್ರೆ ರೆಹಾನ್ ಒಬ್ಬನೇ ಇದನ್ನ ಮಾಡೋದಕ್ಕೆ ಸಾಧ್ಯವಿಲ್ಲ. ಹೈದ್ರಾಬಾದ್ನಲ್ಲಿರೊ ಯಾವುದೋ ಒಂದು ಟೀಂ ಇದನ್ನ ಆಪರೇಟ್ ಮಾಡಿರೊ ಅನುಮಾನವಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಅಂತ ಭಜರಂಗ ದಳ ಸಂಚಾಲಕ ಶರಣಬಸವ ಆಗ್ರಹಿಸಿದ್ದಾರೆ.
ಇತ್ತ ಭಾರತಿ ಲವ್ ಜಿಹಾದ್ ಕೇಸ್ ಚರ್ಚೆಗೆ ಗ್ರಾಸವಾಗ್ತಿದ್ದಂತೆಯೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾರತಿ ಕುಟುಂಬಸ್ಥರನ್ನ ಭೇಟಿ ಮಾಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು, ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲ, ಕಾನೂನು ರೀತಿ ಹೋರಾಟ ನಡೆಸಿ ಭಾರತಿಯನ್ನ ಮರಳಿ ಮನೆಗೆ ಕರೆತರುತ್ತೀವಿ ಅಂತ ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ನೇತಾಜಿ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. (ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು)