AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳ ಹೊಗೆಯಿಂದ ಅಕ್ಕ-ಪಕ್ಕದ ಜನರಿಗೆ ನರಕ

ಗಡಿ ಜಿಲ್ಲೆಯ ಆ ವಿದ್ಯುತ್ ಉತ್ಪಾದನಾ ಘಟಕ ಇಡೀ ರಾಜ್ಯಕ್ಕೆ‌ ಬೆಳಕು ಕೊಡುತ್ತಿದೆ. ಆದರೆ, ಆ ಘಟಕ, ಅಕ್ಕ ಪಕ್ಕದಲ್ಲಿರುವ ಗ್ರಾಮಗಳಿಗೆ ದೂಳಿನ ಕೊಡುಗೆ ನೀಡುವ ಮೂಲಕ ಅಲ್ಲಿನ ಜನರಿಗೆ ಬಾಳಲ್ಲಿ‌ ಕತ್ತಲು ಆವರಿಸುವಂತೆ ಮಾಡುತ್ತಿದೆ. ಮಳೆ ರೀತಿ ಧೂಳು ಬಂದು ಬೀಳ್ತಿದ್ದು, ಮನೆ-ಮಠ ರಸ್ತೆಗಳೆಲ್ಲಾ ಧೂಳಿನಲ್ಲೇ ಅಲ್ಲಿನ ಜನ ನರಕ ಅನುಭವಿಸುತ್ತಿದ್ದಾರೆ‌.

ರಾಯಚೂರು: ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳ ಹೊಗೆಯಿಂದ ಅಕ್ಕ-ಪಕ್ಕದ ಜನರಿಗೆ ನರಕ
ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ
ಭೀಮೇಶ್​​ ಪೂಜಾರ್
| Edited By: |

Updated on: Aug 29, 2024 | 2:48 PM

Share

ರಾಯಚೂರು, ಆಗಸ್ಟ್ 29: ರಾಯಚೂರು ತಾಲ್ಲೂಕಿನ ಯದ್ಲಾಪುರ ಗ್ರಾಮದಲ್ಲಿ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳ ಹೊಗೆಯಿಂದ ಅಕ್ಕಪಕ್ಕದ ಜನ ಕಂಗಾಲಾಗುವಂತಾಗಿದೆ. ರಾಯಚೂರು ತಾಲ್ಲೂಕಿನ ಶಕ್ತಿನಗರ ಬಳಿ ಇರುವ ಆರ್​​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವ ಕೇಂದ್ರ. ಕಲ್ಲಿದ್ದಲು ಮೂಲಕ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ವೇಳೆ ಇಲ್ಲಿನ ಘಟಕಗಳ ಚಿಮಣಿಗಳಿಂದ ದೂಳು ಮಿಶ್ರಿತ ಹೊಗೆ ಹೊರ ಸೂಸುತ್ತದೆ. ಈ ಹೊಗೆ ಮಳೆಯ ರೀತಿ ಅಕ್ಕ ಪಕ್ಕ ಬಂದು ಬೀಳತ್ತದೆ. ಈ ಹಾರುವ ಬೂದಿಗೂ ಬಂಗಾರ ಬೆಲೆ ಇದೆ! ಟೆಂಡರ್ ಮೂಲಕ ಈ ಬೂದಿಯಲ್ಲಿ ವಿವಿಧ ಫ್ಯಾಕ್ಟರಿಗಳಿಗೆ ರವಾನೆ ಮಾಡಲಾಗುತ್ತದೆ. ಆದರೆ, ಅಕ್ಕ ಪಕ್ಕದ ಗ್ರಾಮಗಳಲ್ಲಿ ಬಂದು ಬೀಳುವ ಹೊಗೆಯೊಂದ ಯದ್ಲಾಪುರ, ವಡ್ಲೂರು ಸೇರಿ ವಿವಿಧ ಗ್ರಾಮಗಳ ಜನ ಅಕ್ಷರಶಃ ನರಕ ಅನುಭವಿಸುತ್ತಿದ್ದಾರೆ.

ಆರ್​ಟಿಪಿಎಸ್ ಘಟಕದಿಂದ ಹೊರ‌ ಸೂಸುವ ಹೊಗೆ ಇಲ್ಲಿನ ಗ್ರಾಮಸ್ಥರನ್ನು ದಿಕ್ಕೆಡುವಂತೆ ಮಾಡಿದೆ. ಈ ಹೊಗೆ ಮನೆಗಳು ಮೇಲೆ, ಒಳಗೆ ಬಂದು ಬೀಳತ್ತದೆ. ಪಾತ್ರೆ ಪಗಡೆಗಳು, ನೀರಲ್ಲೂ ಹೊಗೆ ಆವರಿಸುತ್ತದೆ. ಮನೆ ಹೊರಗಡೆಯಲ್ಲಿನ ವಾಹನಗಳು, ರಸ್ತೆಗಳಲ್ಲೂ ಹಾರುವ ಬೂದಿ ಬಂದು ಬೀಳತ್ತದೆ. ನಿತ್ಯ ಇಲ್ಲಿನ ಜನರಿಗೆ ಇದೇ ದೂಳಲ್ಲೇ‌ ಓಡಾಡುವ ದುಸ್ಥಿತಿ ಇದೆ‌.‌ ನಿತ್ಯ ಬರೀ ಸ್ವಚ್ಛತೆಯನ್ನೇ ಮಾಡಬೇಕಿರೋದು ದುರಂತ.

Raichur: The smoke from the RTPS power generation units creating problems to neighboring areas, Kannada news

ಆರ್​ಟಿಪಿಎಸ್ ಘಟಕದ ದೂಳುಮಿಶ್ರಿತ ಹೊಗೆ ಜನರ ಮೇಲೂ ಬೀಳುತ್ತಿರುವುದು

ಇದಿಷ್ಟೇ ಅಲ್ಲ ಇಲ್ಲಿನ ವೃದ್ಧರು, ಮಕ್ಕಳು ಧೂಳಿನಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗೆ ವರ್ಷಗಳ ಕಾಲ ಇದೇ ವಾತಾವರಣದಲ್ಲಿ ವಾಸವಿರುವುದರಿಂದ ಇಲ್ಲಿನ ಜನರಿಗೆ ಅಸ್ತಮಾ, ಹೃದ್ರೋಗ ಸೇರಿ ಇತರೆ ರೋಗ-ರುಜನೆಗಳಿಗೆ ತುತ್ತಾಗ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಹುಲಿಗೆಮ್ಮಾ ಎಂಬವರು ಕೂಡ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಪೆನ್ಸಿಲ್​ನಲ್ಲಿ ಮೂಡಿಬಂದ ಬಾಲ ಕೃಷ್ಣ; ಇಲ್ಲಿವೆ ಫೋಟೋಸ್​

ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಆರ್​​ಟಿಪಿಎಸ್ ವಿರುದ್ಧ ಹೋರಾಟ ನಡೆಸಿದ್ದರೂ ಕ್ರಮವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿನ ಜನರ ಪರ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ