Rama Navami 2022: ಪರಸ್ಪರ ರಾಮ ನವಮಿ, ರಂಜಾನ್ ಹಬ್ಬದ ಶುಭಕೋರಿ ಭಾವೈಕ್ಯತೆ ಸಾರಿದ ಯುವಕರು

ಮುಸ್ಲೀಂ ಯುವಕರು ರಾಮನವಮಿ ಬಗ್ಗೆ ಹಾರೈಸಿದರೆ, ಹಿಂದು ಯುವಕರು ರಂಜಾನ್ ಬಗ್ಗೆ ಶುಭಾಶಯ ಕೋರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳು ಇಲ್ಲಿಗೆ ನಿಲ್ಲಲಿ. ಎಲ್ಲರೂ ಒಟ್ಟಾಗಿ ಬಾಳೋಣ ಎಂದು ಯುವಕರು ಕರೆ ನೀಡಿದ್ದಾರೆ.

Rama Navami 2022: ಪರಸ್ಪರ ರಾಮ ನವಮಿ, ರಂಜಾನ್ ಹಬ್ಬದ ಶುಭಕೋರಿ ಭಾವೈಕ್ಯತೆ ಸಾರಿದ ಯುವಕರು
ಭಾವೈಕ್ಯತೆ ಸಾರಿದ ಯುವಕರು
Follow us
TV9 Web
| Updated By: ganapathi bhat

Updated on: Apr 10, 2022 | 7:55 PM

ರಾಯಚೂರು: ಶ್ರೀ ರಾಮನವಮಿ ಉತ್ಸವ ಹಿನ್ನೆಲೆ ರಾಯಚೂರು ನಗರದಲ್ಲಿ ಹಿಂದು- ಮುಸ್ಲೀಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ. ಹಿಂದೂ ಕಾರ್ಯಕರ್ತರಿಗೆ ಪಾನಕ ಹಾಗೂ ಲಸ್ಸಿ ನೀಡಿ ಮುಸ್ಲಿಂ ಯುವಕರು ಶುಭಹಾರೈಸಿದ್ದಾರೆ. ಪರಸ್ಪರ ತಬ್ಬಿಕೊಂಡು ಉಭಯ ಧರ್ಮದ ಯುವಕರು ಶುಭ ಹಾರೈಸಿದ್ದಾರೆ. ಮುಸ್ಲೀಂ ಯುವಕರು ರಾಮನವಮಿ ಬಗ್ಗೆ ಹಾರೈಸಿದರೆ, ಹಿಂದು ಯುವಕರು ರಂಜಾನ್ ಬಗ್ಗೆ ಶುಭಾಶಯ ಕೋರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳು ಇಲ್ಲಿಗೆ ನಿಲ್ಲಲಿ. ಎಲ್ಲರೂ ಒಟ್ಟಾಗಿ ಬಾಳೋಣ ಎಂದು ಯುವಕರು ಕರೆ ನೀಡಿದ್ದಾರೆ.

ರಾಜ್ಯದಲ್ಲಿಂದು ಶ್ರೀರಾಮನವಮಿ ಸಂಭ್ರಮ ಜೋರಾಗಿದೆ. ಧರ್ಮಗಳನ್ನು ಮರೆತು ಹಿಂದೂ ಮುಸ್ಲಿಮರು ಪಾನಕ, ಮಜ್ಜಿಗೆ ನೀಡಿ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ತುಮಕೂರಿನ ಭದ್ರಮ್ಮ ಸರ್ಕಲ್ನಲ್ಲೂ ಇದೇ ರೀತಿಯ ದೃಶ್ಯಗಳು ಕಂಡು ಬಂದಿವೆ. ರಾಮನವಮಿ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಎಂದು‌ ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸುತ್ತಿದ್ದಾರೆ. ಇದೇ ವೇಳೆ ಮುಸ್ಲಿಂ ಯುವಕರೂ ಸಹ ಅವರೊಂದಿಗೆ ಕೈ ಜೋಡಿಸಿದ್ದಾರೆ.

ಹಿಂದೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀರಾಮನವಮಿ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟರೆ ಮುಸ್ಲಿಮರು ಟೋಪಿ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕರಿಗೆ ಪಾನಕ ಹಂಚಿ ಸಂಭ್ರಮಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಎಲ್ಲರೂ ಒಂದೆ. ನಮ್ಮಲ್ಲಿ ಭೇದ-ಭಾವವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ರಾಮನವಮಿಗೆ ಮುಸ್ಲಿಂ ವ್ಯಕ್ತಿಯ ನಿಸ್ವಾರ್ಥ ಸೇವೆ

ಇನ್ನು ಮತ್ತೊಂದೆಡೆ ಬೆಂಗಳೂರಿನ ರಾಜಾಜಿನಗರದ ರಾಮಮಂದಿರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮುಸ್ಲಿಂ ವ್ಯಕ್ತಿ ನಿಸ್ವಾರ್ಥ ಸೇವೆ ಮಾಡಿ ಮಾದರಿಯಾಗಿದ್ದಾರೆ. 52 ವರ್ಷ ವಯಸ್ಸಿನ ಹುಸೇನ್ ಎಂಬ ಮುಸ್ಲಿಂ ವ್ಯಕ್ತಿ ಹಲವು ವರ್ಷಗಳಿಂದ ರಾಮನವಮಿಯಂದು ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಪ್ರತಿ ರಾಮನವಮಿಯ ಹಿಂದಿನ ದಿನ ದೇವಸ್ಥಾನದಲ್ಲಿ ಕೆಲಸ ಮಾಡಲು ಹಾಜರಾಗುತ್ತಾರೆ. ಧೂಳು, ಕ್ಲೀನ್ ಮಾಡುವುದು, ರಥ ತೊಳೆಯುವ ಕಾಯಕ ಈ ರೀತಿ ಸೇವೆ ಮಾಡಿ ಯಾವುದೇ ಹಣ ಪಡೆಯದೆ ಹಲವು ವರ್ಷಗಳಿಂದ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷದಂತೆ ನಿನ್ನೆಯೂ ಸಿದ್ಧತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ

ಇದನ್ನೂ ಓದಿ: ರಾಮನವಮಿ ವಿಶೇಷ: ರಾಮನ ಕಥೆ ಹೇಳುವ ರಾಮಾಯಣದಲ್ಲಿ ಅದೆಷ್ಟು ವೈವಿಧ್ಯ? ಕನ್ನಡದ ಪ್ರಮುಖ ರಾಮಾಯಣಗಳಿವು