ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರ ಸಾವು

| Updated By: ವಿವೇಕ ಬಿರಾದಾರ

Updated on: Aug 02, 2024 | 11:05 AM

ರಾತ್ರಿ ಮಟನ್​ ಊಟ ಮಾಡಿ ಮಲಗಿದ್ದ ಕುಟುಂಬದ ನಾಲ್ವರು ಬೆಳಗ್ಗೆ ಏಳಲೆ ಇಲ್ಲ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇದೇ ಕುಟುಂಬ ಓರ್ವ ಬಾಲಕಿ ಸ್ಥಿತಿ ಗಂಭಿರವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರ ಸಾವು
ಭೀಮಣ್ಣ, ಈರಮ್ಮ, ಮಲ್ಲೇಶ್, ಪಾರ್ವತಿ ಮೃತರು
Follow us on

ರಾಯಚೂರು, ಆಗಸ್ಟ್​ 02: ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಸಿರವಾರ (Sirwar) ತಾಲೂಕಿನ ಕಲ್ಲೂರು ಗ್ರಾಮ ನಡೆದಿದೆ. ಭೀಮಣ್ಣ (60), ಪತ್ನಿ ಈರಮ್ಮ (54), ಮಗ ಮಲ್ಲೇಶ್ (19), ಪುತ್ರಿ ಪಾರ್ವತಿ (17) ಮೃತರು. ಭೀಮಣ್ಣ ಮತ್ತು ಈರಮ್ಮ ಮತ್ತೊಬ್ಬ ಪುತ್ರಿ ಮಲ್ಲಮ್ಮ (18) ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ (Raichur) ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೀಮಾ ನದಿಯಲ್ಲಿ‌ ಮುಳುಗಿ ವ್ಯಕ್ತಿ ಸಾವು

ಕಲಬುರಗಿ: ಸ್ನೇಹಿತನನ್ನು ಉಳಿಸಲು ಹೋಗಿ ಭೀಮಾ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟಿರುವ ಘಟನೆ ಅಫಜಲಪುರ್ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ. ಶಶಿಕಾಂತ್ (42) ಮೃತ ದುರ್ದೈವಿ. ಶಶಿಕಾಂತ್ ಸ್ನೇಹಿತರ ಜೊತೆ ಭೀಮಾ‌ ನದಿ ತೀರಕ್ಕೆ ಹೋಗಿದ್ದನು. ಈ ವೇಳೆ ಆತನ ಸ್ನೇಹಿತ ಕಾಲು ಜಾರಿ ಭೀಮಾ‌ ನದಿಯಲ್ಲಿ ಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಶಶಿಕಾಂತ್ ಸ್ನೇಹಿತನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಸ್ನೇಹಿತನನ್ನು ಕಾಪಾಡಲು ಹೋಗಿ ಶಶಿಕಾಂತ್ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:44 am, Fri, 2 August 24