ರಾಯಚೂರು: ಹಿಂದುಳಿದ ವರ್ಗದ ಸಮಾವೇಶ ಮಾಡಲು ಸಿದ್ದರಾಮಯ್ಯಗೆ (Siddaramaiah) ಸ್ವಾತಂತ್ರ್ಯ ಇಲ್ಲ. ಸಮಾವೇಶ ಮಾಡಬೇಡಿ ಅಂತ ಡಿಕೆಶಿ, ಸಿದ್ದರಾಮಯ್ಯ (DK Sivakumar) ಕಾಲು ಕತ್ತರಿಸಿದ್ದಾರೆ. ಪ್ರತ್ಯೇಕ ಸಭೆ ಮಾಡಬೇಡಿ ಅಂತ ಸಿದ್ದು, ಡಿಕೆಶಿಗೆ ಹೇಳ್ತಾರೆ. ಇದು ಕಾಂಗ್ರೆಸ್ನ (Congress) ಪರಿಸ್ಥಿತಿ. ತಮ್ಮ ಕ್ಯಾಬಿನೇಟ್ನಲ್ಲಿ ಒಬ್ಬ ಕುರುಬನ್ನು ಇಟ್ಕೊಳಿಲ್ಲ. ಮೇಟಿ, ಸರ್ವಾಧಿಕಾರಿ ಧೋರಣೆಯಿಂದ ಚಾಮುಂಡೇಶ್ವರಿಯಲ್ಲಿ ಸೋತರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಹಿಂದುಳಿದವರಿಗೆ ದ್ರೋಹ ಮಾಡಿದ್ದು ಸಿದ್ದರಾಮಯ್ಯ: ಸಚಿವ ಕೆ.ಎಸ್.ಈಶ್ವರಪ್ಪ
ಹಿಂದುಳಿದೋರಿಗೆ ದ್ರೋಹ ಮಾಡಿದ್ದು ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ ಅಷ್ಟೇ. ಇನ್ನೂ ಮುಸ್ಲಿಂ ನಾಯಕ ಇಬ್ರಾಹಿಂರನ್ನು ಉಳಿಸಿಕೊಳ್ತೀನಿ ಅಂದ್ರು. ಆದರೆ ಒಬ್ಬರೇ ಮುಸ್ಲಿಂ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿಲ್ಲ. ಸಿಎಂ ಆಗಿ ಮಾಡಿಲ್ಲ, ಇದು ನಾನು ಹೇಳಿದ್ದಲ್ಲ. ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಕೊನೆ ಇಬ್ರಾಹಿಂ ಹೇಳಿದ್ರು, ಚಡ್ಡಿ ಕೊಟ್ರು,ಪ್ಯಾಂಟ್ ಕೊಡ್ಲಿಲ್ಲ ಅಂತ ಇದರಲ್ಲೇ ಎಲ್ಲವೂ ಗೊತ್ತಾಗುತ್ತದೆ ಎಂದು ಮಂತ್ರಾಲಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಸ್ವರ್ಗ, ಕಾಂಗ್ರೆಸ್ ನರಕ: ಸಚಿವ ಕೆ.ಎಸ್.ಈಶ್ವರಪ್ಪ
ಹಿರಿಯರು ಸಚಿವ ಸ್ಥಾನ ಬಿಡಬೇಕು, ಅದರಲ್ಲಿ ತಪ್ಪೇನಿದೆ. ನಾವೇನು ಗೂಟ ಹೊಡೆದುಕೊಂಡು ಕೂತಿದ್ದೀವಾ. ಸಚಿವ ಸಂಪುಟದಲ್ಲಿ ಯುವಕರಿಗೆ ಅವಕಾಶ ಕೊಡಬೇಕು. ಬಿಜೆಪಿ ಜತೆ ಕಾಂಗ್ರೆಸ್ ಪಕ್ಷವನ್ನು ಹೋಲಿಕೆ ಮಾಡಬೇಡಿ. ಭಾರತೀಯ ಜನತಾ ಪಾರ್ಟಿ ಸ್ವರ್ಗ, ಕಾಂಗ್ರೆಸ್ ನರಕ. ಪುಣ್ಯಕ್ಷೇತ್ರದಲ್ಲಿ ಸಭೆ ಬೇಡ, ಕೂತು ಹೋದ್ರೂ ಒಳ್ಳೇದಾಗುತ್ತದೆ ಎಂದು ಮಂತ್ರಾಲಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಇದನ್ನೂ ಓದಿ:
ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಕಾರ್ಯಕರ್ತರಿಗೆ ಗಿಫ್ಟ್; ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್!
ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್
Published On - 2:55 pm, Sun, 13 March 22