ಗಾಂಧಿ ಹೇಳಿದ ಧರ್ಮದ ಮಾರ್ಗದಲ್ಲಿದೆ ಬಿಜೆಪಿ, ಗಾಂಧಿ ಆಶಯ ನನಸು ಮಾಡ್ತಿದ್ದಾರೆ ಮೋದಿ: ಈಶ್ವರಪ್ಪ

ಧರ್ಮ ಅಂದರೆ ಏನು? ಮಾನವೀಯತೆ ಅಂತ ತಾನೆ. ಆದರೆ ಕಾಂಗ್ರೆಸ್​ನವರು ಧರ್ಮವನ್ನು ಮುಸ್ಲಿಮ್, ಕ್ರಿಶ್ಚಿಯನ್ ಎಂದೆಲ್ಲಾ ವಿಭಜಿಸಿ ಸಮಾಜವನ್ನು ಒಡೆದರು ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧಿ ಹೇಳಿದ ಧರ್ಮದ ಮಾರ್ಗದಲ್ಲಿದೆ ಬಿಜೆಪಿ, ಗಾಂಧಿ ಆಶಯ ನನಸು ಮಾಡ್ತಿದ್ದಾರೆ ಮೋದಿ: ಈಶ್ವರಪ್ಪ
ಸಚಿವ ಈಶ್ವರಪ್ಪ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 12, 2022 | 2:21 PM

ಯಾದಗಿರಿ: ಮಹಾತ್ಮ ಗಾಂಧಿ ಹೇಳಿರುವ ಧರ್ಮ ಇಟ್ಟುಕೊಂಡು ಬಿಜೆಪಿ ಹೊರಟಿದೆ. ಮಹಾತ್ಮ ಗಾಂಧಿ ಅವರು ಬಹು ಹಿಂದೆಯೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು. ಅಂದು ಗಾಂಧಿ ಹೇಳಿದ್ದನ್ನೇ ಇಂದು ಮೋದಿ ಜಾರಿ ಮಾಡಿದ್ದಾರೆ. ಧರ್ಮ ಅಂದರೆ ಏನು? ಮಾನವೀಯತೆ ಅಂತ ತಾನೆ. ಆದರೆ ಕಾಂಗ್ರೆಸ್​ನವರು ಧರ್ಮವನ್ನು ಮುಸ್ಲಿಮ್, ಕ್ರಿಶ್ಚಿಯನ್ ಎಂದೆಲ್ಲಾ ವಿಭಜಿಸಿ ಸಮಾಜವನ್ನು ಒಡೆದರು ಎಂದು ಬೇಸರ ವ್ಯಕ್ತಪಡಿಸಿದರು. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಧರ್ಮದ ಆಧಾರದ ಮೇಲೆ, ಗಲಭೆಗಳನ್ನು ನಡೆಸಿ, ಸಮಾಜದಲ್ಲಿ ಒಡಕು ಉಂಟು ಮಾಡುವ ಮೂಲಕ ಗೆದ್ದಿದೆ ಎಂಬ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.

ಕಾಂಗ್ರೆಸ್ ಪಕ್ಷವು ಭಯೋತ್ಪಾದಕ ಮತ್ತು ಮತಾಂಧ ಮುಸ್ಲಿಮರಿ​ಗೆ ಬೆಂಬಲ ನೀಡುತ್ತಿದೆ. ಹೀಗಾಗಿಯೇ ದೇಶದಲ್ಲಿ ಪಕ್ಷವು ನಿರ್ನಾಮವಾಗುವ ಸ್ಥಿತಿ ತಲುಪಿದೆ. ತಾಕತ್ತೇ ಇಲ್ಲದ ಕಾಂಗ್ರೆಸ್​ನವರು ತಾಕತ್ತಿನ ಮಾತನಾಡುವುದು ಶೋಚನೀಯ ಸಂಗತಿ. ತಾಕತ್ತಿರುವ ಕಾಂಗ್ರೆಸ್​ನ ಸಿದ್ದರಾಮಯ್ಯ ಸೋಲು ಅನುಭವಿಸಿದರು. ತಾಕತ್ತಿರುವ ಕಾಂಗ್ರೆಸ್ ಬೈ ಎಲೆಕ್ಷನ್​ನಲ್ಲಿ ಸೋತರು.

ಪಂಚರಾಜ್ಯಗಳಲ್ಲಿ ಸೋತಿರುವ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪಕ್ಷವು ಸೋಲಲಿದೆ. ಗಾಂಧೀಜಿಯವರು ಅವತ್ತೇ ಮರ್ಯಾದೆಯಿಂದ ಕಾಂಗ್ರೆಸ್ಸ್ ವಿಸರ್ಜಿಸಿ ಎಂದು ಹೇಳಿದ್ದರು. ಅವತ್ತು ಗಾಂಧೀಜಿಯವರ ಮಾತನ್ನು ಕಾಂಗ್ರೆಸ್ ಕೇಳಲಿಲ್ಲ. ಇವತ್ತು ನರೇಂದ್ರ ಮೋದಿಯವರು ಬಂದ ನಂತರ ಕಾಂಗ್ರೆಸ್ ವಿಸರ್ಜನೆ ಆಗ್ತಿದೆ. ಅಂದು ಗಾಂಧೀಜಿ ಹೇಳಿದ ಮಾತು ಇವತ್ತು ಮೋದಿ ಜಾರಿಗೆ ತರುತ್ತಿದ್ದಾರೆ ಎಂದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿದ್ದರೇ ಪಾಕಿಸ್ತಾನಕ್ಕೆ ಹೋಗಬೇಕಿತ್ತು. ಕೆಲವು ಮತಾಂಧ ಮುಸಲ್ಮಾನರು ದೇಶದಲ್ಲಿ ಗಲಭೆ, ಗುಂಡಾಗಿರಿ ಮಾಡುವ ಪ್ರಯತ್ನ ನಡೆಸ್ತಿದ್ದಾರೆ. ಇಂತಹ ಭಯೋತ್ಪಾದಕ, ಗುಂಡಾಗಿರಿ, ಮತಾಂಧ ಮುಸಲ್ಮಾನರಿಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಇದರಿಂದಾಗಿ ದೇಶದಲ್ಲಿ ಕಾಂಗ್ರೇಸ್ ನಿರ್ನಾಮ ಆಗ್ತಿದೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ 270 ಸಭೆ ಮಾಡಿ ಎಷ್ಟು ಸೀಟ್ ತಗೊಂಡ್ರು ಎಂದು ಪ್ರಶ್ನಿಸಿದರು.

4 ರಾಜ್ಯಗಳ ಫಲಿತಾಂಶದಂತೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಲೋಕಸಭೆ, ವಿಧಾನಸಭೆ, ಕಾರ್ಪೊರೇಷನ್ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ, ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಶಕ್ತಿಶಾಲಿ ಕಾಂಗ್ರೆಸ್ ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ. ಚುನಾವಣೆ ನಡೆದರೆ ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗುತ್ತದೆ. ಸಂಪುಟ ವಿಸ್ತರಣೆ, ಪುನಾರಚನೆ ಎನ್ನುವುದು ಪಕ್ಷದ ಆಂತರಿಕ ವಿಚಾರ. ನಾನು ಬಿಜೆಪಿ ಕಾರ್ಯಕರ್ತ ಎಂಬುದನ್ನು ಜೀವನಪರ್ಯಂತ ತೆಗೆಯಲಾಗಲ್ಲ. ಮಂತ್ರಿ, ಮುಖ್ಯಮಂತ್ರಿ ಇವೆಲ್ಲ ತಾತ್ಕಾಲಿಕ ಬರುತ್ತೆ ಹೋಗುತ್ತೆ. ಬಿಜೆಪಿ ಕಾರ್ಯಕರ್ತನಾಗಿ ಸಾಯೋವರೆಗೆ ಇರುತ್ತೇನೆ ಎಂದರು.

ಇದನ್ನೂ ಓದಿಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ -ಸಿ.ಎಂ.ಇಬ್ರಾಹಿಂ

ಇದನ್ನೂ ಓದಿ: ನನ್ನನ್ನು ಶ್ವಾನಕ್ಕೆ ಹೋಲಿಸುವ ಇಬ್ರಾಹಿಂ ತಮ್ಮನ್ನು ವಿಧಾನ ಪರಿಷತ್ ಸದಸ್ಯ ಮಾಡಿದವರಿಗೆ ನಿಷ್ಠರಾಗಿದ್ದಾರೆಯೇ? ವಿಎಸ್ ಉಗ್ರಪ್ಪ

Published On - 2:04 pm, Sat, 12 March 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್