ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ -ಸಿ.ಎಂ.ಇಬ್ರಾಹಿಂ
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್‌ಗೆ 2 ಸ್ಥಾನ ಸಿಕ್ಕಿದೆ. ಮುಂದೆ ಇದು ರಾಜ್ಯಕ್ಕೂ ಅನ್ವಯವಾಗುತ್ತೆ ಎಂದು ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರ: ನಾನು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ನಾಳೆ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಘೋಷಿಸ್ತೇನೆ ಎಂದು ಕೋಲಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಇನ್ನು ಇದೇ ವೇಳೆ ನಿನ್ನೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋತ ಬಗ್ಗೆಯು ಮಾತನಾಡಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್‌ಗೆ 2 ಸ್ಥಾನ ಸಿಕ್ಕಿದೆ. ಮುಂದೆ ಇದು ರಾಜ್ಯಕ್ಕೂ ಅನ್ವಯವಾಗುತ್ತೆ ಎಂದು ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬರೋದಿಲ್ಲ. ಹೀಗಿರುವಾಗ ಸಿಎಂ ಕುರ್ಚಿಗಾಗಿ ಕಿತ್ತಾಡಲೇಬೇಕೆಂದು ವ್ಯಂಗ್ಯ ಮಾಡಿದ್ದಾರೆ.
ನಾವು ಮೂಲ ಕಾಂಗ್ರೆಸಿಗರು. ನಮ್ಮ ತಂದೆ ತಾಯಿ ಅಜ್ಜ ಎಲ್ಲರೂ ಸ್ವತಂತ್ರ ಹೋರಾಟಗಾರರು. ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಯಾರು ಇಲ್ಲ. 1970 ರಿಂದ ಈಚೆಗೆ ಬಂದವರು ಮೂಲ ಕಾಂಗ್ರೆಸಿಗರೇ ಅಲ್ಲ. ಪಂಚ ರಾಜ್ಯದ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಸೋಲುಂಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೆ ಸ್ಥಾನ ಕಾಯ್ದುಕೊಳ್ಳಲಿದೆ. ನಮ್ಮ ನಿರ್ಧಾರದಂತೆ ಮುಂದಿನ ಸರ್ಕಾರ ರಚನೆಯಾಗಲಿದೆ. ನಾನು ಇರುವ ಪಕ್ಷ ಯಾವತ್ತಿಗೂ ನಂ1 ಸ್ಥಾನದಲ್ಲಿರುತ್ತೆ. ಪಕ್ಷಕ್ಕಿಂತ ನಮ್ಮ ರಾಜ್ಯದ ಪ್ರಧಾನಿಯಾಗಿದ್ದ ದೇವೇಗೌಡರೇ ಮುಖ್ಯ. ಈಗಾಗಲೇ ನಮ್ಮ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ. ಅದರಂತೆ ನಾಳೆ ಅಧಿಕೃತವಾಗಿ ನಾನು ಯಾವ ಪಕ್ಷ ಸೇರುತ್ತೇನೆ ಎಂಬ ಬಗ್ಗೆ ಘೋಷಣೆ ಮಾಡುವೆ ಎಂದು ಜಿಡಿಎಸ್ ಪಕ್ಷ ಸೇರುವ ಇಂಗಿತವನ್ನು ಸಿ.ಎಂ ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಗೆ ಸಿ.ಎಂ.ಇಬ್ರಾಹಿಂ ರಾಜೀನಾಮೆ ಪರಿಷತ್ ವಿಪಕ್ಷ ನಾಯಕ ಸ್ಥಾನ ಕೈತಪ್ಪಿ ಬಿ.ಕೆ. ಹರಿಪ್ರಸಾದ್ರಿಗೆ ಸಿಕ್ಕ ಹಿನ್ನೆಲೆ ರಾಜ್ಯ ನಾಯಕರ ನಡೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇಸರದಿಂದ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು. ಕಾಂಗ್ರೆಸ್ಗೂ ನನಗೂ ಮುಗಿದ ಅಧ್ಯಾಯ. ಸಿದ್ದರಾಮಯ್ಯರಿಂದ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೆ. ಅದಕ್ಕಾಗಿಯೇ ದೇವೇಗೌಡರನ್ನು ಬಿಟ್ಟು ಬಂದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನಾನು ವಿದಾಯದ ಪಂದ್ಯ ಆಡಲು ಬಯಸಿದ್ದೆ.. ಆದರೆ ಮಂಡಳಿ ಇದನ್ನು ನಿರಾಕರಿಸಿತು! ಶ್ರೀಶಾಂತ್ ನೋವಿನ ಮಾತು
ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ, ಹೈಕಮಾಂಡ್ನಿಂದ ಬುಲಾವ್ ಬಂದಿದೆ: ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಯುಟರ್ನ್
Published On - 7:23 pm, Fri, 11 March 22