AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ವಿದಾಯದ ಪಂದ್ಯ ಆಡಲು ಬಯಸಿದ್ದೆ.. ಆದರೆ ಮಂಡಳಿ ಇದನ್ನು ನಿರಾಕರಿಸಿತು! ಶ್ರೀಶಾಂತ್ ನೋವಿನ ಮಾತು

Sreesanth: ಅಕಾಡೆಮಿಯನ್ನು ಸ್ಥಾಪಿಸುವ ಕುರಿತು ಮಾತನಾಡಿದ ಶ್ರೀಶಾಂತ್, ಹೌದು, ನನ್ನ ಮೊದಲ ಅಕಾಡೆಮಿ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ಮೂಕಾಂಬಿಕಾದಲ್ಲಿ ತೆರೆಯಲಾಗುವುದು ಎಂದಿದ್ದಾರೆ.

ನಾನು ವಿದಾಯದ ಪಂದ್ಯ ಆಡಲು ಬಯಸಿದ್ದೆ.. ಆದರೆ ಮಂಡಳಿ ಇದನ್ನು ನಿರಾಕರಿಸಿತು! ಶ್ರೀಶಾಂತ್ ನೋವಿನ ಮಾತು
ಶ್ರೀಶಾಂತ್
TV9 Web
| Updated By: ಪೃಥ್ವಿಶಂಕರ|

Updated on:Mar 11, 2022 | 6:45 PM

Share

ಭಾರತದ (Indian Cricket Team) ಅತ್ಯುತ್ತಮ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಎಸ್. ಶ್ರೀಶಾಂತ್ (S Sreesanth) ಇತ್ತೀಚೆಗೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿವೃತ್ತಿ ಬಳಿಕ ಈ ಬೌಲರ್‌ ತಮ್ಮ ವಿದಾಯದ ಪಂದ್ಯದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ. ವಿದಾಯ ಪಂದ್ಯಕ್ಕಾಗಿ ತನ್ನ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್ ​​ಅಂದರೆ ಕೇರಳ ಕ್ರಿಕೆಟ್ ಅಸೋಸಿಯೇಷನ್‌ಗೆ ಮನವಿ ಮಾಡಿದ್ದೆ. ಆದರೆ ಮಂಡಳಿಯು ನನ್ನ ಪ್ರಸ್ತಾಪವನ್ನು ನಿರಾಕರಿಸಿತು ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಕೇರಳ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಶ್ರೀಶಾಂತ್ ಆಡಲು ಬಯಸಿದ್ದರು. ಜೊತೆಗೆ ಇದು ಅವರ ಕೊನೆಯ ಪಂದ್ಯವಾಗಿತ್ತು ಎಂದು ವರದಿಗಳು ಬಹಿರಂಗಗೊಳಿಸಿವೆ.

ಆದರೆ ತಂಡದ ಮ್ಯಾನೇಜ್‌ಮೆಂಟ್ 39 ವರ್ಷದ ವೇಗದ ಬೌಲರ್‌ನ ಮಾತನ್ನು ಕೇಳಲು ನಿರಾಕರಿಸಿತು. ಒಂಬತ್ತು ವರ್ಷಗಳ ನಂತರ ಈ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಿದರು. ಅವರು ಈ ಋತುವಿನ ತಂಡದ ಆರಂಭಿಕ ಪಂದ್ಯದಲ್ಲಿ ಆಡಿದರು. ಮೇಘಾಲಯ ವಿರುದ್ಧ ಆಡಿದ ಪಂದ್ಯದಲ್ಲೂ ಅವರು ವಿಕೆಟ್ ಪಡೆದರು, ಆದರೆ ನಂತರ ಅವರನ್ನು ಮುಂದಿನ ಪಂದ್ಯಗಳಿಂದ ಕೈಬಿಡಲಾಯಿತು.

ನಾನು ವಿದಾಯ ಪಂದ್ಯಕ್ಕೆ ಅರ್ಹನಾಗಿದ್ದೆ ಮನೋರಮಾಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಗುಜರಾತ್ ವಿರುದ್ಧದ ಪಂದ್ಯವನ್ನು ಆಡಲು ನಾನು ಸಿದ್ಧನಾಗಿದ್ದೆ. ಪಂದ್ಯಕ್ಕೂ ಮುನ್ನ ನಡೆದ ಟೀಂ ಮೀಟಿಂಗ್​ನಲ್ಲಿ ಕೇರಳಕ್ಕೆ ಇದೇ ನನ್ನ ಕೊನೆಯ ಪಂದ್ಯ ಎಂದು ಸ್ಪಷ್ಟಪಡಿಸಿದ್ದೆ. ಆದರೆ ಮಂಡಳಿ ನನಗೆ ಆಡಲು ಅವಕಾಶ ಕೊಡಲಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

ಭವಿಷ್ಯದ ಬಗ್ಗೆ ಶ್ರೀಶಾಂತ್ ಹೇಳಿದ್ದಿದು ಶ್ರೀಶಾಂತ್ ಅವರ ಭವಿಷ್ಯದ ಬಗ್ಗೆ ಕೇಳಿದಾಗ, ನಾನು ಪ್ರಪಂಚದಾದ್ಯಂತ ನಡೆಯುವ ಇತರ ಫ್ರಾಂಚೈಸ್ ಲೀಗ್‌ಗಳಲ್ಲಿ ಆಡಲು ಸಿದ್ಧನಿದ್ದೇನೆ. ನನಗೆ ಕೆಲವು ಕೋಚಿಂಗ್ ಆಫರ್‌ಗಳು ಸಹ ಬಂದಿವೆ. ಅದೇ ಸಮಯದಲ್ಲಿ ನಾನು ನನ್ನ ಚಲನಚಿತ್ರ ವೃತ್ತಿಜೀವನದತ್ತ ಗಮನ ಹರಿಸಲು ಬಯಸುತ್ತೇನೆ. ನನ್ನ ತಮಿಳು ಭಾಷೆಯಲ್ಲಿ ಮೊದಲ ಚಿತ್ರ ಏಪ್ರಿಲ್‌ನಲ್ಲಿ ಬರಲಿದೆ, ನಾನು ಕೆಂಪೇಗೌಡ 2 ಎಂಬ ಕನ್ನಡ ಚಿತ್ರದಲ್ಲೂ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಅಕಾಡೆಮಿಯನ್ನು ಸ್ಥಾಪಿಸುವ ಕುರಿತು ಮಾತನಾಡಿದ ಶ್ರೀಶಾಂತ್, ಹೌದು, ನನ್ನ ಮೊದಲ ಅಕಾಡೆಮಿ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ಮೂಕಾಂಬಿಕಾದಲ್ಲಿ ತೆರೆಯಲಾಗುವುದು ಎಂದಿದ್ದಾರೆ.

ವೃತ್ತಿ ಬದುಕು ಹೀಗಿತ್ತು ಶ್ರೀಶಾಂತ್ ಭಾರತದ ಎರಡು ವಿಶ್ವಕಪ್ ವಿಜಯಗಳಲ್ಲಿ ಭಾಗವಾಗಿದ್ದರು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೊದಲ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದಾಗ ಶ್ರೀಶಾಂತ್ ತಂಡದ ಭಾಗವಾಗಿದ್ದರು. ಇದಾದ ಬಳಿಕ 2011ರಲ್ಲಿಯೂ ಅವರು ಏಕದಿನ ವಿಶ್ವಕಪ್ ಗೆಲುವಿನಲ್ಲಿ ಟೀಮ್ ಇಂಡಿಯಾ ಜತೆಗಿದ್ದರು. ಅವರು ಭಾರತಕ್ಕಾಗಿ 27 ಟೆಸ್ಟ್ ಪಂದ್ಯಗಳನ್ನು ಆಡಿ 87 ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ಪರ ಈ ಬೌಲರ್ 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ ಅವರು 10 ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ:IND vs SL: ಮೊಹಾಲಿಯಲ್ಲಿ ಕಪಿಲ್ ದಾಖಲೆ ಬ್ರೇಕ್; ಬೆಂಗಳೂರಿನಲ್ಲಿ ಕುಂಬ್ಳೆ ದಾಖಲೆ ಮುರಿಯುವ ತವಕದಲ್ಲಿ ಅಶ್ವಿನ್!

Published On - 6:40 pm, Fri, 11 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ