AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಹಗಲು- ರಾತ್ರಿ ಟೆಸ್ಟ್ ಪಂದ್ಯಗಳಿಗೆ ಪಿಂಕ್​ ಬಾಲ್​ಗಳನ್ನೇ ಬಳಸುವುದ್ಯಾಕೆ? ಈ ಚೆಂಡಿನ ವಿಶೇಷತೆ ಏನು?

Pink Ball Test: ವೈಜ್ಞಾನಿಕವಾಗಿ, ಗುಲಾಬಿ ಒಂದು ಸ್ವತಂತ್ರ ಬಣ್ಣವೇ ಅಲ್ಲ. ಇದು ಕೇವಲ ಕೆಂಪು ಮತ್ತು ನೀಲಿ ಬಣ್ಣಗಳ ಒಂದು ನಿರ್ದಿಷ್ಟ ಹದದ ಮಿಶ್ರಣವಾಗಿದೆ. ಇದು ಮಾನವನ ಕಣ್ಣಿನ ಗ್ರಹಿಕೆಯ ಮೂಲಕ ಮಾತ್ರ ಕಂಡುಬರುತ್ತದೆ.

IND vs SL: ಹಗಲು- ರಾತ್ರಿ ಟೆಸ್ಟ್ ಪಂದ್ಯಗಳಿಗೆ ಪಿಂಕ್​ ಬಾಲ್​ಗಳನ್ನೇ ಬಳಸುವುದ್ಯಾಕೆ? ಈ ಚೆಂಡಿನ ವಿಶೇಷತೆ ಏನು?
ಪಿಂಕ್ ಬಾಲ್ ಟೆಸ್ಟ್
TV9 Web
| Updated By: ಪೃಥ್ವಿಶಂಕರ|

Updated on: Mar 11, 2022 | 4:43 PM

Share

ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswami Stadium) ನಡೆಯಲಿರುವ ಈ ಪಂದ್ಯ ಹೊನಲು ಬೆಳಕಿನ ಟೆಸ್ಟ್‌ ಆಗಿದ್ದು ಇದೇ ಮಾರ್ಚ್ 12ರಿಂದ ಶುರುವಾಗಲಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಡೇ-ನೈಟ್ ಟೆಸ್ಟ್ ಪಂದ್ಯವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂದ್ಯ ವೀಕ್ಷಿಸಲು ಶೇ. 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ್ದು, ಹೀಗಾಗಿ ತುಂಬಿದ ಕ್ರೀಡಾಂಗಣದಲ್ಲಿ ಇಂಡೋ-ಲಂಕಾ ಕದನ ನಡೆಯಲಿದೆ. ಈ ಪಂದ್ಯ ಹಗಲು-ರಾತ್ರಿ ಪಂದ್ಯವಾಗಿದ್ದು, ಗುಲಾಬಿ ಬಣ್ಣದ ಚೆಂಡಿನೊಂದಿಗೆ ಆಡಲಾಗುತ್ತಿದೆ. ಅಷ್ಟಕ್ಕೂ ಈ ಡೇ- ನೈಟ್ ಟೆಸ್ಟ್ ಪಂದ್ಯಗಳಲ್ಲಿ ಪಿಂಕ್​ ಬಾಲ್​ಗಳನ್ನೇ ಬಳಸುವುದೇಕೆ? ಇಲ್ಲಿದೆ ಮಾಹಿತಿ.

ಯಾವ ಮಾದರಿಯ ಕ್ರಿಕೆಟ್​ನಲ್ಲಿ ಯಾವ ಬಾಲ್ ಬಳಕೆ? ಪ್ರಪಂಚದಾದ್ಯಂತದ ಪ್ರತಿಯೊಂದು ಕ್ರೀಡೆಯಲ್ಲೂ ವೈಜ್ಞಾನಿಕ ಆಲೋಚನೆ ಕೆಲಸ ಮಾಡುತ್ತದೆ. ಕ್ರಿಕೆಟ್‌ನಲ್ಲಿ, ಆಟಗಾರರ ಉಡುಪನ್ನು ವೈಜ್ಞಾನಿಕ ಕಾರಣಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಆಟಗಾರರು ಬಣ್ಣದ ಬಟ್ಟೆಗಳನ್ನು ಧರಿಸಿ ಬಿಳಿ ಚೆಂಡಿನೊಂದಿಗೆ ಆಡುತ್ತಾರೆ. ಈ ಸಂಯೋಜನೆಯ ಹಿಂದಿನ ಕಾರಣವೆಂದರೆ ಚೆಂಡು ಆಟಗಾರರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಎಂಬುದು. ಅದೇ ರೀತಿಯಲ್ಲಿ, ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸಿ ಟೆಸ್ಟ್​ ಪಂದ್ಯಗಳಲ್ಲಿ ಕೆಂಪು ಚೆಂಡಿನೊಂದಿಗೆ ಆಡುತ್ತಾರೆ. ಇದರಿಂದ ಚೆಂಡು ಸ್ಪಷ್ಟವಾಗಿ ಗೋಚರಿಸುತ್ತದೆ. ಟೆಸ್ಟ್​ ಪಂದ್ಯಗಳನ್ನು ಸೂರ್ಯನ ಬೆಳಕಿನಲ್ಲಿ ದಿನವಿಡಿ ಆಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಬಿಳಿಬಟ್ಟೆಗಳನ್ನು ಬಳಸುವ ಮತ್ತೊಂದು ಉಪಯೋಗವೆಂದರೆ ಇವು ಶಾಖವನ್ನು ಹೀರಿಕೊಳ್ಳುವುದಿಲ್ಲ, ಪ್ರತಿಫಲಿಸುತ್ತದೆ. ಹೀಗಾಗಿಯೇ ಇಂದಿಗೂ ಟೆಸ್ಟ್​ನಲ್ಲಿ ಎಲ್ಲಾ ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡಿನ ಬಳಕೆ.. ಟೆಸ್ಟ್ ಪಂದ್ಯಗಳಲ್ಲಿ 3 ರೀತಿಯ ಚೆಂಡುಗಳನ್ನು ಬಳಸಲಾಗುತ್ತದೆ. ಅವುಗಳ ಹೆಸರುಗಳೆಂದರೆ ಕೂಕಬುರಾ, ಎಸ್‌ಜಿ, ಮತ್ತು ಡ್ಯೂಕ್. ವಿವಿಧ ಬಣ್ಣಗಳ ಚೆಂಡುಗಳನ್ನು ಕ್ರಿಕೆಟ್‌ನಲ್ಲಿ ವಿವಿಧ ಸ್ವರೂಪಗಳಲ್ಲಿ ಬಳಸಲಾಗುತ್ತದೆ. ಇಲ್ಲಿಯವರೆಗೆ, ಕೆಂಪು ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಗುಲಾಬಿ ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿದೆ. 22ನೇ ನವೆಂಬರ್ 2019ರಂದು ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಗುಲಾಬಿ ಚೆಂಡಿನೊಂದಿಗೆ ಭಾರತ ತಂಡವು ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿ ಜಯಗಳಿಸಿತ್ತು. ಇದು ಭಾರತೀಯ ನೆಲದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್​ ಪಂದ್ಯವೂ ಹೌದು.

ಹಗಲು ರಾತ್ರಿ ಟೆಸ್ಟ್​ನಲ್ಲಿ ಕಿತ್ತಳೆ ಅಥವಾ ಹಳದಿ ಬಣ್ಣದ ಚೆಂಡು ಯಾಕಿಲ್ಲ? ಮೊದಲ ಗುಲಾಬಿ ಬಣ್ಣದ ಚೆಂಡನ್ನು ಆಸ್ಟ್ರೇಲಿಯಾದ ಚೆಂಡು ಉತ್ಪಾದನಾ ಕಂಪನಿ ‘ಕೂಕಬುರಾ’ ತಯಾರಿಸಿತು. ಆರಂಭದಲ್ಲಿ, ಈ ಚೆಂಡಿನ ಬಣ್ಣವು ಬೇಗನೆ ಮಾಸಿ ಹೋಗುತ್ತಿತ್ತು. ಆದರೆ ಕಂಪನಿಯ ಹಲವು ವರ್ಷಗಳ ಸತತ ಪ್ರಯತ್ನದಿಂದ ಆ ಸಮಸ್ಯೆಗೆ ಪರಿಹಾರ ಹುಡುಕಲಾಯಿತು. ಈಗ ಚೆಂಡಿನ ಮೇಲಿರುವ ಗುಲಾಬಿ ಬಣ್ಣವು, ಕೆಂಪು ಬಣ್ಣದ ಚೆಂಡಿನಂತೆ ಹೆಚ್ಚು ಕಾಲ ಉಳಿಯಲಿದೆ.

ಪಿಂಕ್ ಬಾಲ್ ಆರಂಭದಲ್ಲಿ, ಕೂಕಬುರಾ ಕಂಪನಿಯು ಚೆಂಡು ತಯಾರಿಸಲು ಕಿತ್ತಳೆ ಮತ್ತು ಹಳದಿ ಬಣ್ಣಗಳನ್ನು ಬಳಸಿತು. ಆ ಚೆಂಡುಗಳ ಪ್ರಯೋಗದ ಸಮಯದಲ್ಲಿ, ಕ್ಯಾಮೆರಾಮೆನ್‌ಗಳಿಗೆ ತಮ್ಮ ಕ್ಯಾಮೆರದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡನ್ನು ಸರಿಯಾಗಿ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಿತ್ತಳೆ ಮತ್ತು ಹಳದಿ ಬಣ್ಣಗಳ ಚೆಂಡಿನ ಬಳಕೆ ಮುಂದಿನ ದಿನಗಳಲ್ಲಿ ನಿಂತುಹೋಯಿತು. ಇದರ ಬದಲು ಪಿಂಕ್​ ಬಣ್ಣದ ಚೆಂಡಿನ ಬಳಕೆ ಆರಂಭವಾಯಿತು. ಇದಕ್ಕೆ ಮುಖ್ಯ ಕಾರಣ ಇದು ಸಾಂಪ್ರದಾಯಿಕ ಕೆಂಪು ಬಣ್ಣದ ಚೆಂಡಿಗೆ ಹತ್ತಿರದಲ್ಲಿದೆ ಮತ್ತು ಲೈವ್ ಸ್ಟ್ರೀಮಿಂಗ್‌ಗಾಗಿ ಕ್ಯಾಮೆರಾದಲ್ಲಿ ಚೆಂಡನ್ನು ಸೆರೆಹಿಡಿಯುವಾಗ ದೀಪಗಳ ಅಡಿಯಲ್ಲಿ ಬಾಲ್​ನ ಚಲನೆಯನ್ನು ಸೆರೆಹಿಡಿಯುವುದು ಸುಲಭ ಎನ್ನುವುದು.

ಗುಲಾಬಿ ಬಣ್ಣದ ಚೆಂಡಿನ ಮೇಲೆ ಕಪ್ಪುದಾರದಿಂದ ಹೊಲಿಗೆ ಹಾಕಲಾಗುತ್ತದೆ. ಕೆಲವೊಮ್ಮೆ ಹಸಿರು ಮತ್ತು ಬಿಳಿ ಬಣ್ಣದ ದಾರವನ್ನು ಸಹ ಬಳಸಲಾಗುತ್ತಿದೆ. ಈ ಮೊದಲು ಕಪ್ಪುದಾರದಿಂದ ಹೊಲಿದ ಗುಲಾಬಿ ಬಣ್ಣದ ಚೆಂಡಿನೊಂದಿಗೆ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಆಡಿತ್ತು.

ವೈಜ್ಞಾನಿಕವಾಗಿ, ಗುಲಾಬಿ ಒಂದು ಸ್ವತಂತ್ರ ಬಣ್ಣವೇ ಅಲ್ಲ. ಇದು ಕೇವಲ ಕೆಂಪು ಮತ್ತು ನೀಲಿ ಬಣ್ಣಗಳ ಒಂದು ನಿರ್ದಿಷ್ಟ ಹದದ ಮಿಶ್ರಣವಾಗಿದೆ. ಇದು ಮಾನವನ ಕಣ್ಣಿನ ಗ್ರಹಿಕೆಯ ಮೂಲಕ ಮಾತ್ರ ಕಂಡುಬರುತ್ತದೆ. ಈಗ ಬಳಕೆಯಲ್ಲಿರುವ ಕೂಕಬುರಾ ಕಂಪನಿಯ ಪಿಂಕ್ ಚೆಂಡುಗಳು ಮೂಲದಲ್ಲಿ ಕೆಂಪು ಬಣ್ಣವನ್ನೇ ಹೊಂದಿವೆ. ಚೆಂಡಿನ ಮೇಲೆ ಗುಲಾಬಿ ಬಣ್ಣದ ಒಂದು ಪದರವನ್ನು ಡೈ ಮೂಲಕ ಲೇಪಿಸಲಾಗಿದೆ. ಇದು ಚೆಂಡಿನ ರಕ್ಷಣಾತ್ಮಕ ಪದರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ:IPL 2022: ಲಕ್ನೋ ತಂಡಕ್ಕೆ 7.5 ಕೋಟಿ ರೂ, ನಷ್ಟ! ಆರ್ಚರ್‌ನಂತೆ ಮತ್ತೊಬ್ಬ ಇಂಗ್ಲೆಂಡ್ ವೇಗಿಗೆ ಇಂಜುರಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ