ರಾಯಚೂರು ಸರ್ಕಾರಿ ಶಾಲೆಯಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳ ಪರದಾಟ: ಊಟದ ತಟ್ಟೆ ತೊಳೆಯಲು ನಾಲೆಗೆ ಹೋಗುತ್ತಿರೋ ಮಕ್ಕಳು
ಮಕ್ಕಳು ನಿತ್ಯ ಕಾಲುವೆಗೆ ಹೋಗೊದರ ಬಗ್ಗೆ ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಸರ್ಕಾರಿ ಶಾಲಾ ಮಂಡಳಿ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ಕೂಡಲೇ ಶಾಲೆಯಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹ ಮಾಡಲಾಗಿದೆ.
ರಾಯಚೂರು: ಸರ್ಕಾರಿ ಶಾಲೆ (Government School) ಯಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಊಟದ ತಟ್ಟೆ ತೊಳೆಯಲು ನಾಲೆಗೆ ಹೋಗುತ್ತಿರುವಂತಹ ಪರಿಸ್ಥಿತಿ ತಾಲ್ಲೂಕಿನ ಪಂಚಮುಖಿ ಗಾಣದಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದುಸ್ಥಿತಿ ಕಂಡುಬಂದಿದೆ. ಶಾಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಈ ಹಿನ್ನೆಲೆ ಮಧ್ಯಾಹ್ನ ಊಟದ ತಟ್ಟೆ ತೊಳೆಯಲು ದಂಡು ದಂಡಾಗಿ ಮಕ್ಕಳು ನಾಲೆಗೆ ಹೋಗುತ್ತಿದ್ದಾರೆ. ತುಂಬಿ ಹರಿಯುತ್ತಿರೋ ನಾಲೆಯಲ್ಲಿ ತಟ್ಟೆ ತೊಳೆಯುವುದರ ಜೊತೆ ಮಕ್ಕಳು ಆಟ ಮಾಡುತ್ತಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾದರು ಅನಾಹುತ ತಪ್ಪಿದಲ್ಲ. ಮಕ್ಕಳು ನಿತ್ಯ ಕಾಲುವೆಗೆ ಹೋಗೊದರ ಬಗ್ಗೆ ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಸರ್ಕಾರಿ ಶಾಲಾ ಮಂಡಳಿ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ಇನ್ನೂ ಇದಕ್ಕೆ ಸಂಬಂಧ ಪಟ್ಟವರು ಕೂಡಲೇ ಶಾಲೆಯಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹ ಮಾಡಲಾಗಿದೆ.
ಇದನ್ನೂ ಓದಿ: ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಬಾಲಕನನ್ನು ತಾಯಿ ಮಡಿಲಿಗೆ ಸೇರಿಸಿದ ಯುವಕರು
ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ: ರಸ್ತೆ ತಡೆದು ಪ್ರತಿಭಟನೆ
ಕೊಪ್ಪಳ: ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು, ರಸ್ತೆಯಲ್ಲೇ ಓದಲು ಕುಳಿತು ರಸ್ತೆ ತಡೆ ಹಿಡಿದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕು ಬಾದಿಮನಾಳ ಕ್ರಾಸ್ ಬಳಿ ನಡೆದಿದೆ. ಪ್ರತಿದಿನ 3 ಕಿ.ಮೀ. ನಡೆದು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿರುವ ಪರಿಸ್ಥತಿ ನಿರ್ಮಾಣವಾಗಿದ್ದು, ಸಮಯಕ್ಕೆ ಸರಿಯಾಗಿ ಬಸ್ ಕೂಡ ಬರುವುದಿಲ್ಲ ಎಂದು ಆರೋಪಿಸಿದರು. ಕುಷ್ಟಗಿ ತಾಲೂಕು ಕೋನಾಪೂರ ಗ್ರಾಮದ ವಿದ್ಯಾರ್ಥಿಗಳಿಂದ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡಲಾಗಿದೆ. ಕೊನಾಪೂರ, ಪರಮನಟ್ಟಿ ಗ್ರಾಮದಿಂದ ಬಾದಿಮನಾಳ ಗ್ರಾಮದ ಶಾಲೆ ಬರುವ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಚಾಲಕ ನಿರ್ವಾಹಕರ ಮಾತಿಗೂ ವಿದ್ಯಾರ್ಥಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಈ ಕುರಿತಾಗಿ ವಿದ್ಯಾರ್ಥಿಯೊಬ್ಬಳು ಮಾತನಾಡಿದ್ದು, ಮಾರ್ಗ ಮಧ್ಯೆ ಸಾಕಷ್ಟು ಮರಗಳ ಕೊಂಬೆಗಳಿದ್ದು, ಅದರಿಂದ ಬಸ್ಸಿನ ಗಾಜು ಒಡೆಯುವ ಸಾಧ್ಯತೆ ಇದೆ ಹಾಗಾಗಿ ನಾವು ಬರಲ್ಲ ಎಂದು ಬಸ್ ಚಾಲಕ ನಿರ್ವಾಹಕರು ಹೇಳುತ್ತಾರೆಂದು ವಿದ್ಯಾರ್ಥಿನಿ ಹೇಳಿದಳು. ಪ್ರತಿ ಭಾರಿಯೂ ಸಂಬಂಧಪಟ್ಟವರಿಗೆ ಹೇಳಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿದಿನ 3 ಕಿ.ಮೀ. ನಡೆದುಕೊಂಡು ಹೋಗಬೇಕು. ನಡೆದುಕೊಂಡು ಹೋದರು ಸಹ ಶಾಲೆಗೆ ಸರಿಯಾದ ಸಮಕ್ಕೆ ತಲುಪಲಾಗುತ್ತಿಲ್ಲ. ಶಿಕ್ಷಕರು ಪ್ರತಿನಿತ್ಯ ನಮ್ಮನ್ನ ಬೈಯುತ್ತಾರೆ. ಹಾಗಾಗಿ ಈ ಸಲ ಎರಡು ಹೊತ್ತು ಬಸ್ ಬಿಡುವವರೆಗೂ ನಾವು ಪ್ರತಿಭಟಿಸುತ್ತೇವೆ ಎಂದು ವಿದ್ಯಾರ್ಥಿನಿ ಹೇಳಿದಳು.
ಇದನ್ನೂ ಓದಿ: Rishabh Pant: ತಾನು ಔಟಾದಾಗ ಎದುರಾಳಿ ಆಟಗಾರರ ಜೊತೆ ಸಂಭ್ರಮಿಸಿದ ರಿಷಭ್ ಪಂತ್: ವೈರಲ್ ವಿಡಿಯೋ