ಚುನಾವಣೆ ಹತ್ತಿರದಲ್ಲೇ ಇರೋದರಿಂದ ಸಿಎಂ ಬದಲಾವಣೆ ಇಲ್ಲ: ಮಂತ್ರಾಲಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ
ಕಾಂಗ್ರೆಸ್ ಸಿಎಂ ಆಗುವ ಕನಸು ನನಸಾಗದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಆಗಸ್ಟ್ 21 ರಿಂದ ರಾಜ್ಯದೆಲ್ಲೆಡೆ ಪ್ರವಾಸ ಮಾಡುವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ. ರಾಯರ ಕ್ಷೇತ್ರದಲ್ಲಿ ಈ ಮಾತು ಹೇಳಿರೋದರಿಂದ ಗೆಲವು ಶತಸಿದ್ಧ.
ರಾಯಚೂರು: ಮಂತ್ರಾಲಯದಲ್ಲಿ(Mantralayam) ಇಂದಿನಿಂದ ಒಟ್ಟು ಏಳು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ(Sri Raghavendra Swamiji) 351ನೇ ಆರಾಧನಾ ಮಹೋತ್ಸವ ಶುರುವಾಗಿದೆ. ಈ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಬಿಎಸ್ ವೈ ಜೊತೆ ಸಂಸದ ರಾಘವೇಂದ್ರ ದಂಪತಿ, ವಿಜಯೇಂದ್ರ ದಂಪತಿ ಆಗಮಿಸಿದ್ದಾರೆ.
ಇನ್ನು ರಾಯರ ಸನ್ನಿಧಿಯಲ್ಲಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆಗೆ ಅವಕಾಶ ಸಿಗಲಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪ ಶುದ್ಧ ಸುಳ್ಳು. ಕೆಲವೊಂದು ಸಮಸ್ಯೆಗಳಿದ್ದು ಪರಿಹರಿಸಿಕೊಂಡು ಮುಂದುವರಿಯಲಿದ್ದೇವೆ. ಕೇಂದ್ರ ನಾಯಕರ ತೀರ್ಮಾನದಿಂದಲೇ ಆಯಾ ಜಿಲ್ಲೆಯ ಸಚಿವರನ್ನು ಆಯಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಿಸಿಲ್ಲ.
ರಾಯರ ಕ್ಷೇತ್ರದಲ್ಲಿ ಈ ಮಾತು ಹೇಳಿರೋದರಿಂದ ಗೆಲವು ಶತಸಿದ್ಧ
ಕಾಂಗ್ರೆಸ್ ಸಿಎಂ ಆಗುವ ಕನಸು ನನಸಾಗದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಆಗಸ್ಟ್ 21 ರಿಂದ ರಾಜ್ಯದೆಲ್ಲೆಡೆ ಪ್ರವಾಸ ಮಾಡುವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ. ರಾಯರ ಕ್ಷೇತ್ರದಲ್ಲಿ ಈ ಮಾತು ಹೇಳಿರೋದರಿಂದ ಗೆಲವು ಶತಸಿದ್ಧ. ಗೆಲ್ಲುವ ಅಭ್ಯರ್ಥಿ ಹುಡುಕಿ ಕೆಲಸ ಮಾಡಲು ಸೂಚನೆ ನೀಡಿದ್ದೇವೆ. ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುವೆ. ಸಿಎಂ ಸ್ಥಾನ ಬಿಟ್ಟಿದ್ದರೂ ಜನರ ಒಲವು ನನ್ನ ಮೇಲೆ ಇದೆ. ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಪರವಿದೆ. ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರೋದೇ ನಮ್ಮ ಗುರಿ. ಕಾರ್ಯಕರ್ತರು ಗೊಂದಲಕ್ಕೆ ಸಿಲುಕೋದು ಬೇಡ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಮ್ಮ ಪಕ್ಷಕ್ಕೆ ಶಕ್ತಿ ಎಂದು ಹೇಳುವ ಮೂಲಕ ಬಿಎಸ್ವೈ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊರ ಹಾಕಿದ್ದಾರೆ.
ಇನ್ನು ಅಮಿತ್ ಶಾ ರಾಜ್ಯ ಭೇಟಿ ವೇಳೆ ಸಿಕ್ರೀಟ್ ಮಾತುಕತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ ಆ ವೇಳೆ ರಾಜ್ಯ ರಾಜಕೀಯ ವಿದ್ಯಮಾನದ ಕುರಿತು ಚರ್ಚೆ ಆಗಿದೆ. ನಾವು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಕೇಂದ್ರ ನಾಯಕರಿಂದ ಯಾವುದೇ ಅಡ್ಡಿ ಆತಂಕವಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ವಿಧಾನಸಭಾ ಚುನಾವಣೆ ಎದುರಿಸ್ತೇವೆ ಎಂದರು. ಚುನಾವಣೆ ಹತ್ತಿರದಲ್ಲೇ ಇರೋದರಿಂದ ಬೊಮ್ಮಾಯಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಊಹಾಪೋಹ ಬೇಡ. ಚುನಾವಣೆ ಹತ್ತಿರದಲ್ಲಿರುವುದರಿಂದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾನು ರಾಜೀನಾಮೆ ಕೊಟ್ಟ ನಂತರವೇ ಸಿಎಂ ಆಯ್ಕೆ ಆಗಿದೆ. ನನಗೆ ಪಕ್ಷ ಎಲ್ಲಾ ರೀತಿಯ ಗೌರವ ನೀಡಿದೆ. ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ. ಪಕ್ಷದ ಆ ಋಣ ತೀರಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವೆ ಎಂದರು.
ಬಿಹಾರದ ಸಿಎಂ ಅನೇಕ ಸಲ ಮೈತ್ರಿ ಮಾಡಿಕೊಂಡು ಕೈ ಬಿಟ್ಟಿದ್ದಾರೆ
ಇದೇ ವೇಳೆ ಬಿಹಾರ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೂ ಬಿಎಸ್ವೈ ಪ್ರತಿಕ್ರಿಯಿಸಿದ್ದು ಬಿಹಾರದ ಸಿಎಂ ನಿತೀಶ್ ಕುಮಾರ್ ಅನೇಕ ಸಲ ಮೈತ್ರಿ ಮಾಡಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಈ ರೀತಿಯ ವಿದ್ಯಮಾನಗಳಿಂದ ಪಕ್ಷಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗದು. ಮುಂದೆಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಇಡಿ ಸಿಐಡಿ ಸೇರಿ ಯಾವುದೇ ತನಿಖಾ ಸಂಸ್ಥೆಯ ಬಗ್ಗೆ ಕಾಂಗ್ರೆಸ್ ನವರು ಭಯ ಬೀಳಬೇಕಿಲ್ಲ. ತಪ್ಪು ಮಾಡಿರದಿದ್ದರೆ ಕಾಂಗ್ರೆಸ್ ನವರು ಆತಂಕಪಡಬೇಕಿಲ್ಲ. ಸಂಪುಟ ವಿಸ್ತರಣೆಯ ಮೂಲಕ ಸಿಎಂ ಎಲ್ಲ ಪ್ರದೇಶಕ್ಕೆ ಪ್ರಾಶಸ್ತ್ಯ ನೀಡಲಿದ್ದಾರೆ. ಮನೆ ಮನೆ ರಾಷ್ಟ್ರಧ್ವಜ ಕಾರ್ಯಕ್ರಮಕ್ಕೆ ಟೀಕೆ ಸಲ್ಲದು ಎಂದರು.
Published On - 10:36 pm, Wed, 10 August 22