ಮಾಸ್ಕ್​ ಇಲ್ಲದೇ ರೈಲ್ವೆ ಸ್ಟೇಷನ್​ಗೆ ಕಾಲಿಟ್ಟರೆ ಹುಷಾರ್​; ಬೀಳಲಿದೆ ಭಾರೀ ದಂಡ

|

Updated on: Apr 17, 2021 | 1:31 PM

ಕೊರೊನಾ ವೈರಸ್​ ನಿಯಂತ್ರಿಸಲು ಎಲ್ಲ ಆಯಾಮದಿಂದಲೂ ಸರ್ಕಾರ ಪ್ರಯತ್ನಿಸುತ್ತಿದೆ. ರೈಲಿನಲ್ಲಿ ಪ್ರಯಾಣ ಮಾಡುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಮಾಸ್ಕ್​ ಇಲ್ಲದಿದ್ದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಮಾಸ್ಕ್​ ಇಲ್ಲದೇ ರೈಲ್ವೆ ಸ್ಟೇಷನ್​ಗೆ ಕಾಲಿಟ್ಟರೆ ಹುಷಾರ್​; ಬೀಳಲಿದೆ ಭಾರೀ ದಂಡ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಾಸ್ಕ್​ ಇಲ್ಲದೇ ತಿರುಗಾಡಿದರೆ ಸದ್ಯ 250 ರೂ. ದಂಡ ಬೀಳುತ್ತದೆ. ಆದರೆ ರೈಲ್ವೆ ನಿಲ್ದಾಣಗಳಲ್ಲಿ ಮಾಸ್ಕ್​ ಧರಿಸದೇ ಇರುವವರಿಗೆ ದುಪ್ಪಟ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ರೈಲುಗಳಲ್ಲಿ ಪ್ರಯಾಣ ಮಾಡುವವರು ಮತ್ತು ನಿಲ್ದಾಣದ ಆವರಣದಲ್ಲಿ ಓಡಾಡುವವರು ಮಾಸ್ಕ್​ ಧರಿಸದೇ ಇದ್ದರೆ 500 ರೂಪಾಯಿ ದಂಡ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಜೊತೆಗೆ ಪ್ಲಾಟ್​ಫಾರ್ಮ್​ ಟಿಕೆಟ್​ ಬೆಲೆಯನ್ನೂ ಏರಿಸಲಾಗಿದೆ. ಇದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಅತಿ ವೇಗದಲ್ಲಿ ಹಬ್ಬುತ್ತಿರುವ ಈ ಮಹಾಮಾರಿಯನ್ನು ನಿಯಂತ್ರಿಸಲು ಹಲವು ಬಗೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಅತಿ ಹೆಚ್ಚು ಜನರು ಸೇರುವ ಪ್ರದೇಶಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಸಾಧ್ಯವಾದಷ್ಟು ಜನದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈಲು ನಿಲ್ದಾಣಗಳಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ಲಾಟ್‌ಫಾರ್ಮ್​ ಟಿಕೆಟ್​ ದರ ಏರಿಸಲಾಗಿದೆ. ಇಂದಿನಿಂದ (ಏ.17) ರೈಲ್ವೆ ಪ್ಲಾಟ್‌ಫಾರ್ಮ್​ ಟಿಕೆಟ್​ ದರ 50 ರೂಪಾಯಿ ಆಗಿದೆ.

ಈ ಮೊದಲು ರೈಲ್ವೆ ಪ್ಲಾಟ್​ಫಾರ್ಮ್​ ಟಿಕೆಟ್​ ದರ ಕೇವಲ 10 ರೂಪಾಯಿ ಆಗಿತ್ತು. ಆದರೆ ಈಗ ಏಕಾಏಕಿ 50 ರೂಪಾಯಿ ಆಗಿರುವುದರಿಂದ ಜನರ ಜೇಬಿಗೆ ಹೊರೆಯಾಗಲಿದೆ. ಆದರೂ ಕೊರೊನಾ ವೈರಸ್​ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ದರ ನಿಗದಿ ಮಾಡಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಅನಗತ್ಯವಾಗಿ ಜನರು ಸೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ ಯಶವಂತಪುರ, ಕೆ.ಆರ್. ಪುರ ನಿಲ್ದಾಣಗಳಲ್ಲಿ ದರ ಹೆಚ್ಚಳ ಆಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಅತಿ ವೇಗದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 9 ಸಾವಿರಕ್ಕೂ ಅಧಿಕ ಜನರಿಗೆ ಪ್ರತಿದಿನ ಕೊರೊನಾ ಪಾಸಿಟಿವ್​ ಆಗುತ್ತಿದೆ. ಸದ್ಯ ರಾಜ್ಯದ ಅನೇಕ ಕಡೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಕೊವಿಡ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಹೆಚ್ಚಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಶುಕ್ರವಾರ ತಜ್ಞರ ಜೊತೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ರೈಲ್ವೆ ಪ್ಲಾಟ್ಫಾರ್ಮ್​ ಟಿಕೆಟ್​ ದರ ಏರಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕು ತಡೆ ಕುರಿತು ಚರ್ಚಿಸಲು ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ

ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರ್ವಾನಿ ಅಖಾಡದ ನಾಯಕ ಕೊವಿಡ್​ನಿಂದ ಸಾವು; ಮೇಳದಿಂದ ನಿರ್ಗಮಿಸಲು ಎರಡು ಅಖಾಡ ನಿರ್ಧಾರ

(Railway platform ticket price hike to 50 rupees to prevent overcrowding in railway stations)

Published On - 7:59 am, Sat, 17 April 21