ಬೆಂಗಳೂರಿನ ನಾರ್ತ್ ವುಡ್ ವಿಲ್ಲಾಗೆ ತಪ್ಪದ ಜಲಕಂಟಕ: ರಾಜಕಾಲುವೆ ನೀರು ನುಗ್ಗಿ ಅವಾಂತರ
ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದ್ರೆ ಸಾಕು ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತದೆ. ಯಲಹಂಕದ ನಾರ್ತ್ ಹುಡ್ ವಿಲ್ಲಾ, ರಮಣಶ್ರೀ ಅಪಾರ್ಟ್ ಮೆಂಟ್ ಸುತ್ತಮುತ್ತಲಿನ ಜನರಿಗೆ ಮಳೆ ಕಡಿಮೆ ಬಂದ್ದರೂ ಪ್ರವಾಹದ ಭೀತಿ ಎದುರಾಗ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ರಾಜಕಾಲುವೆ ನೀರು ನುಗ್ಗಿ ಜಲಾವೃತವಾಗಿದ್ದ ನಾರ್ತ್ ಹುಡ್ ವಿಲ್ಲಾದಲ್ಲಿ ನಿನ್ನೆ ರಾತ್ರಿ ಸುರಿದ ಸ್ವಲ್ಪ ಮಳೆಗೆ ರಾಜಕಾಲುವೆ ನೀರು ಉಕ್ಕಿ ರಸ್ತೆ ಜಲಾವೃತವಾಗಿದೆ.
ಬೆಂಗಳೂರು, ಅಕ್ಟೋಬರ್ 11: ಕೋಟಿ ಕೋಟಿ ರೂ. ಹಣ ಕೊಟ್ಟು ವಿಲ್ಲಾ ಖರೀದಿಸಿರುವ ಜನರಿಗೆ ಇದೀಗ ನೆಮ್ಮದಿ ಇಲ್ಲದಂತಾಗಿದೆ. ಸ್ವಲ್ಪ ಮಳೆ (rain) ಬಂದ್ದರೂ ಸಾಕು ಎಲ್ಲಿ ಮನೆಗೆ ನೀರು ನುಗ್ಗುತ್ತದೆ ಅಂತಾ ನಿವಾಸಿಗಳು ಕಂಗಾಲಾಗಿದ್ದರೆ, ಇತ್ತ ರಾಜಕಾಲುವೆ ಕೆಲಸವನ್ನ ಅರ್ಧಕ್ಕೆ ನಿಲ್ಲಿಸಿರುವ ಪಾಲಿಕೆ ಸಮಸ್ಯೆ ಹೇಗೆ ಬಗೆಹರಿಸಬೇಕು ತಿಳಿಯದೇ ಸೈಲೆಂಟ್ ಆಗಿದೆ. ಇತ್ತೀಚೆಗಷ್ಟೇ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರೂ ಜನರಿಗೆ ಸಂಕಷ್ಟ ತಪ್ಪದಾಗಿದೆ.
ರಾಜಕಾಲುವೆ ನೀರು ನುಗ್ಗಿ ನಾರ್ತ್ ಹುಡ್ ವಿಲ್ಲಾ ಜಲಾವೃತ
ಸಿಲಿಕಾನ್ ಸಿಟಿಯಲ್ಲಿ ಸ್ವಲ್ಪ ಮಳೆ ಬಂದ್ರೆ ಸಾಕು ಸಾಕಷ್ಟು ಅವಾಂತರ ಸೃಷ್ಟಿಯಾಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆದರೆ ಯಲಹಂಕದ ನಾರ್ತ್ ಹುಡ್ ವಿಲ್ಲಾ, ರಮಣಶ್ರೀ ಅಪಾರ್ಟ್ ಮೆಂಟ್ ಸುತ್ತಮುತ್ತಲಿನ ಜನರಿಗೆ ಮಳೆ ಕಡಿಮೆ ಬಂದ್ದರೂ ಪ್ರವಾಹದ ಭೀತಿ ಎದುರಾಗ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ರಾಜಕಾಲುವೆ ನೀರು ನುಗ್ಗಿ ಜಲಾವೃತವಾಗಿದ್ದ ನಾರ್ತ್ ಹುಡ್ ವಿಲ್ಲಾದಲ್ಲಿ ನಿನ್ನೆ ರಾತ್ರಿ ಸುರಿದ ಸ್ವಲ್ಪ ಮಳೆಗೆ ರಾಜಕಾಲುವೆ ನೀರು ಉಕ್ಕಿ ರಸ್ತೆ ಜಲಾವೃತವಾಗಿದೆ.
ಇದನ್ನೂ ಓದಿ: ಎಚ್ಚರ…ಎಚ್ಚರ! ಮುಂದಿನ 6 ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಸದ್ಯ ಎರಡ್ಮೂರು ತಿಂಗಳ ಹಿಂದೆ ವಿಲ್ಲಾಗಳಿಗೆ ನೀರು ನುಗ್ಗಿದಾಗ ಡಿಸಿಎಂ ಡಿಕೆ ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ರು, ಅದಾದ ಬಳಿಕ ತಾತ್ಕಾಲಿಕವಾಗಿ ನೀರು ಹೊರಹಾಕಿಸುವ ಕೆಲಸ ಮಾಡಿದ್ದರು. ಆದರೆ ಇದೀಗ ವಿಲ್ಲಾಗಳ ಪಕ್ಕದಲ್ಲಿ ಬಿಬಿಎಂಪಿ ನಿರ್ಮಿಸಿರುವ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ಬಂದ್ ಆಗಿದೆ.
ರಾಜಕಾಲುವೆ ಹಾದುಹೋಗೋ ಜಾಗದಲ್ಲಿ ಸ್ಥಳೀಯರು ಕಾಮಗಾರಿ ನಡೆಸದಂತೆ ಕೋರ್ಟ್ ಮೊರೆಹೋಗಿರೋದು ಇದೀಗ ನಿವಾಸಿಗಳಿಗೆ ಪೀಕಲಾಟ ತಂದಿಟ್ಟಿದೆ. ಮಂಡಿತನಕ ನಿಂತ ಕೊಳಚೆ ನೀರಲ್ಲೇ ಪರದಾಡಿದ ನಿವಾಸಿಗಳು ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ, ಆದಷ್ಟು ಬೇಗ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಿ ಎಂದು ವಿಲ್ಲಾ ನಿವಾಸಿ ಅರುಣ್ ಎಂಬುವವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸದ್ಯ ಬೆಳಗ್ಗೆ ತನಕ ನಿಂತಿದ್ದ ರಾಜಕಾಲುವೆ ನೀರಲ್ಲೇ ಸಂಚಾರ ನಡೆಸಿದ್ದ ನಿವಾಸಿಗಳು, ಹಲವು ಭಾರೀ ಕರೆ ಮಾಡಿದ ಬಳಿಕ ಬಿಬಿಎಂಪಿಯ ಸಿಬ್ಬಂದಿ ಮೋಟಾರ್ ಮೂಲಕ ನೀರು ಹೊರಹಾಕಿದ್ದಾರೆ. ಇತ್ತ ಪ್ರತಿಬಾರಿ ಮಳೆ ಬಂದ್ರೂ ಇದೇ ಸಮಸ್ಯೆ ಆಗ್ತಿರೋದು ಕೋಟಿ ಕೋಟಿ ರೂ. ದುಡ್ಡು ಕೊಟ್ಟು ವಿಲ್ಲಾಗಳನ್ನ ಖರೀದಿಸಿದವರಿಗೆ ಸಂಕಷ್ಟ ತಂದಿಟ್ಟಿದೆ. ಸದ್ಯ ಟ್ರಾಫಿಕ್ ಕಿರಿಕಿರಿಯಿಲ್ಲ, ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಗಳ ಸಮಸ್ಯೆಯಿಲ್ಲ ಅಂತಾ ವಿಲ್ಲಾ ಖರೀದಿಸಿದವರಿಗೆ ಇದೀಗ ರಾಜಕಾಲುವೆಯಿಂದ ಕಂಟಕ ಎದುರಾಗಿದ್ದು, ಸಮಸ್ಯೆಗೆ ಯಾವಾಗ ಪರಿಹಾರಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Fri, 11 October 24