
ಬೆಂಗಳೂರು, ಜನವರಿ 22: ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ (Ramlalla pran pratishtha) ಅದ್ಧೂರಿಯಾಗಿ ನೆರವೇರಿದೆ. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ಈಡೇರಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಶುಭ ಗಳಿಗೆಯಲ್ಲಿ ತಮ್ಮ ಕಂದಮ್ಮಗಳನ್ನು ಹೆರಲು ನಿರ್ಧರಿಸಿದಂತಿದೆ. ಹೀಗಿರುವಾಗ ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಸಿಲಿಕಾನ್ ಸಿಟಿಯಲ್ಲಿ ಜ. 22 ಡೆಲಿವರಿ ಡಿಮ್ಯಾಂಡ್ ಕ್ರೇಜ್ ಶುರುವಾಗಿದೆ. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾನೆ ದಿನ ಕಂದಮ್ಮಗಳನ್ನು ಪಡೆಯಲು ಕೆಲ ಪೋಷಕರು ಆಸಕ್ತಿ ವಹಿಸಿದ್ದಾರೆ.
ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಸಿಟಿ ಪೋಷಕರು ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಇದುವರೆಗೂ ರಾಜ್ಯದಲ್ಲಿ 40ಕ್ಕೂ ಹೆಚ್ಚು ಶಿಶುಗಳು ಜನಿಸಿವೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗದಗದ ಮಸೀದಿಯಲ್ಲಿ ಪೂಜೆ, ಹೋಮ
ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದ ಸಮಯಕ್ಕೇ ಮಗು ಜನಿಸುವಂತಾಗಲಿ ಎಂದು ಪೋಷಕರು ನಿರ್ಧರಿಸಿರುವಂತಹ ಸಾಕಷ್ಟು ಉದಾಹರಣೆಗಳು ಕಂಡುಬಂದಿವೆ. ತಮ್ಮ ಹೆರಿಗೆ ದಿನಾಂಕವನ್ನು ಜನವರಿ 22 ರ ಮೊದಲು ಅಥವಾ ನಂತರ ಕೆಲವು ದಿನಗಳಲ್ಲಿ ಮಾಡುವಂತೆ ಸಹ ವೈದ್ಯರಿಗೆ ವಿನಂತಿ ಮಾಡಿಕೊಂಡಿದ್ದಾರೆ.
ವಿಜಯಪುರದಲ್ಲೊಂದು ವಿಶಿಷ್ಟ ಕಾರ್ಯಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಆಸ್ಪತ್ರೆ ಸಾಕ್ಷಿಯಾಗಿದೆ. ಮೂರು ಗಂಡು ಮಕ್ಕಳಿಗೆ ರಾಮ ಎಂದು ನಾಮಕರಣ ಮಾಡಲಾಗಿದ್ದು, ಒಂದು ಹೆಣ್ಣು ಮಗುವಿಗೆ ಸೀತಾ ಎಂದು ಹೆಸರಿಡಲಾಗಿದೆ. ಶಾಸಕ ಯತ್ನಾಳ ಪುತ್ರ ರಾಮನಗೌಡ ಪಾಟೀಲ್, ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ. ಆಸ್ಪತ್ರೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:36 pm, Mon, 22 January 24