ರಥಯಾತ್ರೆ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದ ಸಾವು

| Updated By: Rakesh Nayak Manchi

Updated on: Nov 03, 2022 | 3:40 PM

ಮೃತ್ತಿಕೆ ಸಂಗ್ರಹದ ರಥಯಾತ್ರೆ ವಾಹನದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ನಡೆಸಲಾಗುತ್ತಿರುವ ಮೃತ್ತಿಕೆ ಸಂಗ್ರಹದ ರಥಯಾತ್ರೆ ಇದಾಗಿದೆ.

ರಥಯಾತ್ರೆ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದ ಸಾವು
ಮೃತ್ತಿಕೆ ಸಂಗ್ರಹದ ರಥಯಾತ್ರೆ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದ ಸಾವು
Follow us on

ರಾಮನಗರ: ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನೆಲೆ ಆಯೋಜಿಸಿದ ಮೃತ್ತಿಕೆ ಸಂಗ್ರಹದ ರಥಯಾತ್ರೆ ವೇಳೆ ಅವಘಡ ಸಂಭವಿಸಿದೆ. ಮೃತ್ತಿಕೆ ಸಂಗ್ರಹದ ರಥಯಾತ್ರೆ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದರೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ. ಪೂಜಾ ಕುಣಿತದ ಕಲಾವಿದರೂ ಆಗಿರುವ ಮಾಗಡಿ ತಾಲೂಕಿನ ಬ್ಯಾಡರಹಳ್ಳಿ ನಿವಾಸಿ ಶ್ರೀನಿವಾಸ್(21) ಮೃತ ದುರ್ದೈವಿಯಾಗಿದ್ದಾರೆ.

ನ.11ರಂದು ಕೆಐಎಬಿ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ರಥಗಳ ಮೂಲಕ ಮೃತ್ತಿಕೆ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಅದರಂತೆ ಮಾಗಡಿ ತಾಲ್ಲೂಕಿನ ಗ್ರಾಮದಲ್ಲಿ ಮೃತ್ತಿಕೆ ಸಂಗ್ರಹ ಮಾಡುತ್ತಿದ್ದಾಗ ರಥದಿಂದ ಬಿದ್ದು‌ ಶ್ರೀನಿವಾಸ್ ಸಾವನ್ನಪ್ಪಿದ್ದಾರೆ.

ನ.11ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ಮೃತ್ತಿಕೆ ಸಂಗ್ರಹ ಅಭಿಯಾನದ ರಥಗಳಿಗೆ ಅಕ್ಟೋಬರ್​ 21ರಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಅಭಿಯಾನ ಯಶಸ್ವಿ ಆಗುವಂತೆ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಭಿಯಾನದ ಯಶಸ್ಸಿಗೆ ಎಲ್ಲರೂ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು.

108 ಅಡಿ ಎತ್ತರದ ಪ್ರತಿಮೆ

ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ನವೆಂಬರ್ 11ರಂದು ಉದ್ಘಾಟನೆಗೊಳ್ಳಲಿದೆ. ಈ ಪ್ರತಿಮೆ ನಿರ್ಮಾಣದ ಮೂಲಕ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ, 108 ಅಡಿ ಎತ್ತರದ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಅಲ್ಲಿಯ ಸಂಸ್ಥಾಪಕರ ಪ್ರತಿಮೆ ಇಲ್ಲ. ಇನ್ನುಮುಂದೆ, ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Thu, 3 November 22