ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್

| Updated By: ಆಯೇಷಾ ಬಾನು

Updated on: Mar 11, 2024 | 2:31 PM

ರಾಮನಗರದ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವ ತಡ ರಾತ್ರಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ತೋಟದ ಮನೆಯಲ್ಲಿ ಮನುಷ್ಯರ ತಲೆ ಬುರಡೆಗಳು ಪತ್ತೆಯಾಗಿವೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್
ಮನುಷ್ಯರ ತಲೆಬುರುಡೆ
Follow us on

ರಾಮನಗರ, ಮಾರ್ಚ್​.11: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಮಹಾ ಶಿವರಾತ್ರಿಯ ಅಮಾವಸ್ಯೆ ಮುಗಿದಿದೆ. ರಾಮನಗರದ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬ ವ್ಯಕ್ತಿ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿ ಬಲರಾಮ್​ನನ್ನು ವಶಕ್ಕೆ ಪಡೆದಿದ್ದಾರೆ. ಬಲರಾಮ್ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರಡೆಗಳು ಪತ್ತೆಯಾಗಿವೆ. ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್​ಗೆ ಜಲಕಂಟಕ; ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹ

ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಅರಶಿನ, ಕುಂಕುಮ ಹಾಗೂ ಬಿಳಿಯ ಪಟ್ಟಿಗಳನ್ನು ಈ ಬುರುಡೆಗಳಿಗೆ ಬಳಿಯಲಾಗಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಬಿಡದಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್ಪಿ ಟಿ.ವಿ.ಸುರೇಶ್, ಬಿಡದಿ ಇನ್ಸ್‌ಪೆಕ್ಟರ್ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್​ಎಸ್​ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಳೆದ 4-5 ವರ್ಷದಿಂದ ತಲೆ‌ಬುರಡೆ, ಕೈ ಕಾಲು ಮೂಳೆ ಸಂಗ್ರಹ ಮಾಡಲಾಗಿರುವ ಶಂಕೆ ವ್ಯಕ್ತವಾಗಿದೆ.

ಅರೆಸ್ಟ್ ಆಗಿರುವ ಬಲರಾಮ ಕೋಟ್ಯಾಧೀಶ. ಬಿಡದಿ‌ ಇಂಡಸ್ಟ್ರೀಯಲ್ ಏರಿಯಾದಲ್ಲಿ ಜಮೀನು ಹೊಂದಿದ್ದಾರೆ. ಖಾಸಗಿ ಕಂಪನಿಗಳಿಗೆ ಭೂಮಿ ಲೀಸ್​ಗೆ ಕೊಟ್ಟಿದ್ದಾರೆ. ತನ್ನದೇ ಜಮೀನನಲ್ಲಿ ಶೇಡ್ ನಿರ್ಮಾಣ ಮಾಡಿ ಶೆಡ್​ಗೆ ಶ್ರೀ ಸ್ಮಶಾನ ಪೀಠ ಎಂದು ನಾಮಕರಣ ಮಾಡಿ ಸ್ಮಶಾನದಿಂದ ತಲೆಬುರಡೆ ತಂದು ಪೂಜೆ ಮಾಡುತ್ತಿದ್ದು ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೋಣೆಯಲ್ಲಿ ಮೂಟೆ ಮೂಟೆ ಮೂಳೆ, ವಾಸನೆ ತಾಳಲಾಗದೆ ಹೊರ ಬಂದ ಪೊಲೀಸ್

ಇನ್ನು ತನಿಖೆಗೆ ಇಳಿದಿದ್ದ ಪೊಲೀಸರು ಬಾಗಿಲು ಮುಚ್ಚಿದ್ದ ಮತ್ತೊಂದು ಕೋಣೆಗೆ ಎಂಟ್ರಿ ಕೊಟ್ಟಿದ್ದು ಅಲ್ಲಿ ಎರಡು ಮೂಟೆಗೂ ಹೆಚ್ಚು ಮುನುಷ್ಯರ ಮೂಳೆಗಳು ಪತ್ತೆಯಾಗಿವೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದು ವಾಸನೆ ತಾಳಲಾಗದೆ ಹೊರ ಬಂದ್ರು. ಬಳಿಕ ಸುಧಾರಿಸಿಕೊಂಡು ಮತ್ತೊಮ್ಮೆ ಕೋಣೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ. ಇಡೀ ಮನೆಯಲ್ಲಿ ಕೊಳೆತ ವಾಸನೆ ಹಬ್ಬಿದೆ. ಆರೋಪಿ ಬಲರಾಮ ಕುಳಿತುಕೊಳ್ಳಲು, ಮಲಗಲು ಮಾನವರ ದೇಹದ ಮೂಳೆಗಳ ಮಂಚವನ್ನೇ ಮಾಡಿಕೊಂಡಿದ್ದಾನೆ.

ಇನ್ನು ಮೂಳೆಗಳು ಅತಿ ಹೆಚ್ಚು ಇರುವ ಹಿನ್ನೆಲೆ ಜೋಗರದೊಡ್ಡಿ ಬಳಿ ತೋಟದ ಮನೆಗೆ ಮತ್ತೊಂದು FSL ತಂಡ
ಭೇಟಿ ನೀಡಿದೆ. RR ಆಸ್ಪತ್ರೆಯಿಂದ ಇನ್ನೊಂದು FSL ಟೀಮ್​ ಬಂದಿದೆ. ಶೇಡ್​ನಲ್ಲಿರುವ 50ಕ್ಕೂ ಹೆಚ್ಚು ಮೂಳೆಗಳಿರುವ ಹಿನ್ನೆಲೆ
ಇಡೀ ಪ್ರದೇಶ ಸೀಜ್ ಮಾಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 10ಕ್ಕೂ ಹೆಚ್ಚು ಎಫ್​ಎಸ್​ಎಲ್​​ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:44 am, Mon, 11 March 24