ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್​ಗೆ ಜಲಕಂಟಕ; ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹ

ಬೆಂಗಳೂರಿನಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಜೀವಜಲಕ್ಕಾಗಿ ಜನ ಪ್ರತಿ ದಿನ ಹೋರಾಡುವಂತಾಗಿದೆ.‌ ಸಿಲಿಕಾನ್ ಸಿಟಿಗೆ ಎದುರಾಗಿರುವ ಭೀಕರ ಬರದ ಪರಿಣಾಮ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಮೇಲೆಯೂ ತಟ್ಟುವ ಆತಂಕ ಮೂಡಿದೆ. ಇತ್ತ ಐಟಿ ಉದ್ಯೋಗಿಗಳು ನೀರಿನ ಸಮಸ್ಯೆ ಮುಗಿಯುವವರೆಗೂ ನಾವು ನಮ್ಮೂರಿಗೆ ಹೋಗುತ್ತೇವೆ, ವರ್ಕ್ ಫ್ರಂ ಹೊಂ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ಎಂದಿನಂತೆ ತಮ್ಮ ವಿಭಿನ್ನ ರೀತಿಯಲ್ಲಿ ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್​ಗೆ ಜಲಕಂಟಕ; ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: Ganapathi Sharma

Updated on:Mar 11, 2024 | 12:23 PM

ಬೆಂಗಳೂರು, ಮಾರ್ಚ್.11: ಕ್ರಿಕೆಟ್ ಹಬ್ಬ ಐಪಿಎಲ್​ಗೆ (IPL) ದಿನಗಣನೆ ಆರಂಭವಾಗಿದೆ. ಆರ್​ಸಿಬಿ ಆಟ ನೋಡಲು ಅಭಿಮಾನಿಗಳು ಕಾತರದಿಂದಿದ್ದಾರೆ. ಹೈವೋಲ್ಟೆಜ್ ಕದನದ ರೋಚಕತೆಯನ್ನು ಸ್ಟೇಡಿಯಂನಲ್ಲಿ ಕೂತು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಎದುರಾಗಿರುವ ಭಾರಿ ನೀರಿನ ಬಿಕ್ಕಟ್ಟಿನ (Drinking Water Crisis) ಪರಿಣಾಮ ಐಪಿಎಲ್ ಮೇಲೆಯೂ ಉಂಟಾಗುವ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಕ್ಕೂ ಎದುರಾಗುತ್ತಾ ಜಲಕಂಟಕ ಎಂಬ ಪ್ರಶ್ನೆ ಮೂಡಿದೆ.‌ ಮಾರ್ಚ್ 22ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಗಲಿದೆ . ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮ್ಯಾಚ್ ನೋಡಲು ಜನ ಕಾತರರಾಗಿದ್ದಾರೆ.‌ ಇದೇ ವೇಳೆ ಟ್ವಿಟರ್​​ನಲ್ಲಿ ಅಭಿಯಾನವೊಂದು ಶುರುವಾಗಿದೆ‌. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಮ್ಯಾಚ್ ರದ್ದು ಮಾಡಿ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವರಿಗೆ ಟ್ಯಾಗ್ ಮಾಡಿ ಈ ಮನವಿ ಮಾಡಲಾಗಿದೆ.

ಐಪಿಎಲ್​ಗೆ ಜಲಕಂಟಕ

ಒಂದು ಮ್ಯಾಚ್ ನಡೆಸಲು ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ.‌ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಆಯೋಜನೆ ಆಗಿರುವ ಪಂದ್ಯ ರದ್ದು ಮಾಡಿ ಬೇರೆ ಕಡೆಗೆ ಸ್ಥಳಾಂತರ ಮಾಡುವ ಆಗ್ರಹ ಕೇಳಿ ಬಂದಿದೆ. 2016ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಇದ್ದ ಕಾರಣ ಪಂದ್ಯ ಸ್ಥಳಾಂತರಗೊಳಿಸಲಾಗಿತ್ತು. ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಬೆಂಗಳೂರಿಗೆ 7 ಪಂದ್ಯ ಸ್ಥಳಾಂತರಗೊಳಿಸಲಾಗಿತ್ತು.‌ ಈಗ ಬೆಂಗಳೂರಿಗೆ ಬರಗಾಲ ಬಂದಿದೆ, ಬೇರೆ ಕಡೆಗೆ ಸ್ಥಳಾಂತರಗೊಳಿಸಿ ಅಂತ ಅಭಿಯಾನ ಶುರುವಾಗಿದೆ. ಅಲ್ಲದೆ ಹೈಕೋರ್ಟ್​​ಗೆ ಪಿಎಎಲ್ ಸಲ್ಲಿಕೆಗೂ ಸಿದ್ದತೆ ನಡೆದಿದೆ.

ಇನ್ನು ಇತ್ತ ಬೆಂಗಳೂರಿನಲ್ಲಿ‌ ದಿನೆದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂಗೆ ಟೆಕ್ಕಿಗಳು ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಹಲವು ಭಾಗದಲ್ಲಿ‌ ನೀರಿನ‌ ಸಮಸ್ಯೆ ಶುರುವಾಗಿದೆ. ಹೀಗಾಗಿ ಅಪಾರ್ಟ್ಮೆಂಟ್​​ನಲ್ಲಿರುವ ಟೆಕ್ಕಿಗಳಿಂದ ವರ್ಕ್ ಫ್ರಂ ಹೋಂಗೆ ಬೇಡಿಕೆ ಆರಂಭವಾಗಿದ್ದು, ಸಿಎಂಗೂ ಮನವಿ ಮಾಡಿದ್ದಾರೆ. ಬೇಸಿಗೆ ಮುಗಿಯುವವರೆಗೂ ಊರಿಗೆ ತೆರಳಲು ಯೋಜನೆ ಹೂಡಿದ್ದು, ಸದ್ಯ ಮಕ್ಕಳ ಪರೀಕ್ಷೆ ನಡೆಯುತ್ತಿರುವುದರಿಂದ ಅವುಗಳು ಮುಗಿದ‌ ನಂತರ ಏಪ್ರಿಲ್ ನಿಂದ ಬಹುತೇಕ ಐಟಿ ಉದ್ಯೋಗಿಗಳು ಊರಿನಿಂದಲೇ ಕೆಲಸ ನಿರ್ವಹಿಸಲು ನಿರ್ಧಾರಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವ ಬಗ್ಗೆ ಬೋರ್ಡ್ ಮೀಟಿಂಗ್ ನಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಹೇಳಿವೆ.

ಇದನ್ನೂ ಓದಿ: ನಮ್ಮ ಜನರಿಗೆ ನೀರು ಕೊಡುವುದೇ ಕಷ್ಟವಾಗಿದೆ, ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ -ಡಿಕೆ ಶಿವಕುಮಾರ್

ಇತ್ತ ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಮೆಜೆಸ್ಟಿಕ್ ನಲ್ಲಿ ಖಾಲಿ ಬಿಂದಿಗೆ, ಕೊಡಪಾನ, ಖಾಲಿ ಚಂಬು ಹಿಡಿದು ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬಾರದು. ರಾಜಧಾನಿಯ ನಿವಾಸಿಗಳಿಗೆ ಕುಡಿಯಲು ನೀರು ಕೊಡಬೇಕು ಎಂದು ಒತ್ತಾಯಿಸಿ ಭಿನ್ನವಾಗಿ ಆಗಿ ಪ್ರತಿಭಟನೆ ಮಾಡಿದ್ದಾರೆ.‌ ಈ ಬಗ್ಗೆ ಮಾತಾನಾಡಿದ ವಾಟಾಳ್ ನಾಗರಾಜ್, ಬೆಂಗಳೂರಿನಲ್ಲಿ ಮಹಿಳೆಯರು ಕೊಡ ಹಿಡಿದು ಬೀದಿಗೆ ಇಳಿದಿದ್ದಾರೆ. ಜಲಮಂಡಳಿ ವ್ಯವಸ್ಥೆ ಎಲ್ಲಿಗೆ ಬಂದಿದೆ. ನೀರಿನ ನಿರ್ವಹಣೆ ಸರಿಯಿಲ್ಲ. ಕುಡಿಯಲು ಸ್ನಾನಕ್ಕೆ, ಊಟಕ್ಕೆ ಯಾವುದಕ್ಕೂನೀರಿಲ್ಲ ನಾವು ನೀರು ಬಿಡಬೇಡಿ ಅಂತ ಕೇಳಿದ್ರು ಕೇಳಾದೆ ನೀರನ್ನ ಬಿಡಲಾಯ್ತು. ನೀರಿನ ಸಮಸ್ಯೆಗೆ ನಿರ್ವಹಣಾ ಪ್ರಾಧಿಕಾರ ಕಾರಣ ಈ ತಿಂಗಳ 20ನೇ ತಾರೀಖು ನೀರಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ರಾಜಧಾನಿ ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ಐಪಿಎಲ್ ಸ್ಥಳಾಂತರ ಮಾಡಬೇಕೆಂದು ಅಭಿಯಾನ ಆರಂಭವಾಗಿದೆ. ಆದರೆ ರಾಜ್ಯ ‌ಸರ್ಕಾರ ಈ ಎಲ್ಲವನ್ನೂ ಹೇಗೆ ಪರಿಗಣಿಸುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:20 am, Mon, 11 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ