ರಾಮನಗರ: ನೇಣು ಬಿಗಿದುಕೊಂಡು ದಂಪತಿಗಳು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ರಾಮನಗರದ ಬಾಲಗೇರಿ ಬಡಾವಣೆಯಲ್ಲಿ ನಡೆದಿದೆ. ಕಿರಣ್ (29) ಹಾಗೂ ಗಾಯತ್ರಿ(28) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು. ಖಾಸಗಿ ಕಂಪನಿಯಲ್ಲಿ ಕಿರಣ್ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಕಳೆದ ಒಂದು ವರ್ಷದ ಹಿಂದೆ ದಂಪತಿಯ ಮಗು ತೊಟ್ಟಿಗೆ ಬಿದ್ದು ಮೃತಪಟ್ಟಿತ್ತು. ಇಂದು ಬೆಳಗ್ಗೆ 9:00 ಆದರೂ ಮನೆಯಿಂದ ಹೊರಬಾರದ ಹಿನ್ನಲೆ ಸ್ಥಳೀಯರಿಂದ ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಗಳು ಪತ್ತೆಯಾಗಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಹಿಮ್ಸ್ ಸಿಬ್ಬಂದಿಗಳ ನಡುವೆ ಹೊಡೆದಾಟ
ಹಾಸನ: ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಹಿಮ್ಸ್ ಸಿಬ್ಬಂದಿಗಳ ನಡುವೆ ಹೊಡೆದಾಟ ನಡೆದಿರುವಂತಹ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹಿಮ್ಸ್ ಸಿಬ್ಬಂದಿ ಮೇಲೆ ಪೊಲೀಸ್ ಕಾನ್ಸ್ ಟೇಬಲ್ರಿಂದ ಹಲ್ಲೆ ಆರೋಪ ಮಾಡಲಾಗಿದೆ.
ಹಿಮ್ಸ್ನ ಡಿ ದರ್ಜೆ ನೌಕರ ಪ್ರಸಾದ್ ಎಂಬುವವರ ಮೇಲೆ ಹಲ್ಲೆ ಆರೋಪ ಮಾಡಿದ್ದು, ಹಿಮ್ಸ್ ಸಿಬ್ಬಂದಿಗಳು ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಬೆಳಗ್ಗೆ ಆಸ್ಪತ್ರೆಗೆ ಎಂಟ್ರಿ ಆಗೋ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗುತ್ತಿದೆ. ಡಿ ದರ್ಜೆ ನೌಕರ ಹಾಗೂ ಪೊಲೀಸ್ ಕಾನ್ಸ್ ಟೇನಲ್ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಇಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮಹಿಳಾ ಪೊಲೀಸ್ ಠಾಣೆಯ ಸಂಜಯ್ ಮೇಲೂ ಹಲ್ಲೆ ಆರೋಪ ಕೇಳಿಬಂದಿದೆ.
ಹೃದಯಾಘಾತ ಹೆಡ್ ಕಾನೇಸ್ಟೇಬಲ್ ಸಾವು
ಮಂಗಳೂರು: ಹೆಡ್ ಕಾನೇಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಗನ್ನಾಥ್.ಪಿ(44) ಸಾವನ್ನಪ್ಪಿದ ಹೆಡ್ ಕಾನೇಸ್ಟೇಬಲ್. ಕೊಣಾಜೆ ಠಾಣೆಯಲ್ಲಿ ಹಲವು ತಿಂಗಳಿನಿಂದ ಎಸ್ಬಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇಂದು ಬೆಳಗ್ಗೆ ಜಗನ್ನಾಥ್ ಅಸ್ಪಸ್ಧರಾಗಿದ್ದು, ಕಣಚೂರು ಆಸ್ಫತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೆಡ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಗನಂತೆ ಇದ್ದುಕೊಂಡು ವೃದ್ಧೆಗೆ ಕೋಟ್ಯಾಂತರ ರೂಪಾಯಿ ಮೋಸ; ಮುಂದೇನಾಯ್ತು?
ಓಮಿನಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ
ತುಮಕೂರು: ಓಮಿನಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಜಿಲ್ಲೆಯ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ವ್ಯಕ್ತಿ ಕೊಚ್ಚಿ ಹೋಗಿದ್ದ. ಕುಮಾರಸ್ವಾಮಿ(70) ಶವವಾಗಿ ಪತ್ತೆ. ಆಗಸ್ಟ್ 4ರಂದು ಓಮ್ನಿ ಸಮೇತ ಕೊಚ್ಚಿ ಕುಮಾರಸ್ವಾಮಿ ಹೋಗಿದ್ದ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Sat, 6 August 22