ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಥಿಯೋಪಿಯಾದಿಂದ ಸಾಗಿಸ್ತಿದ್ದ 112 ಕೋಟಿ ರೂ ಮೌಲ್ಯದ ಹೆರಾಯಿನ್ ಜಪ್ತಿ

ಕಂದಾಯ ಗುಪ್ತಚರ ನಿರ್ದೇಶನಾಯದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಮಾದಕ ಸರಕಿನೊಂದಿಗೆ ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದು ನಂತರ, ದೆಹಲಿಗೆ ತೆರಳುತ್ತಿದ್ದ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಥಿಯೋಪಿಯಾದಿಂದ ಸಾಗಿಸ್ತಿದ್ದ 112 ಕೋಟಿ ರೂ ಮೌಲ್ಯದ ಹೆರಾಯಿನ್ ಜಪ್ತಿ
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಥಿಯೋಪಿಯಾದಿಂದ 112 ಕೋಟಿ ರೂ ಮೌಲ್ಯದ ಹೆರಾಯಿನ್ ಜಪ್ತಿ
TV9kannada Web Team

| Edited By: sadhu srinath

Aug 05, 2022 | 8:47 PM

ಬೆಂಗಳೂರು: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 112 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ. ಇಥಿಯೋಪಿಯಾದಿಂದ ದೆಹಲಿಗೆ ಸಾಗಿಸುತ್ತಿದ್ದ ವೇಳೆ ಅಪಾರ ಮೌಲ್ಯದ ಹೆರಾಯಿನ್ ಜಪ್ತಿಯಾಗಿದೆ. ಟ್ರಾಲಿ ಬ್ಯಾಗ್​ನಲ್ಲಿ 16 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ವಿದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಯದ ಅಧಿಕಾರಿಗಳು (Directorate of Revenue Intelligence -DRI) ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಮಾದಕ ಸರಕಿನೊಂದಿಗೆ ಇಥಿಯೋಪಿಯಾದಿಂದ ಬೆಂಗಳೂರಿಗೆ (ಕೆಐಎಬಿ) ಬಂದು ನಂತರ, ದೆಹಲಿಗೆ ತೆರಳುತ್ತಿದ್ದ.

ಮಗನ ಮೇಲೆ ಚಿರತೆ ದಾಳಿ; ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವು

ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಕೆ.ಹೆಚ್.ಖನಗಾವಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಾಂತಾ ಮಿರಜಕರ್(65) ಮೃತ ದುರ್ದೈವಿ. ಕಟ್ಟಡ ಕಾರ್ಮಿಕ ಜಾಧವ್​ನಗರದಲ್ಲಿ ಸಿದ್ದರಾಯಿ ಮಿರಜಕರ್ ಎಂಬುವರ ಮೇಲೆ ​ಚಿರತೆ ದಾಳಿ ಮಾಡಿತ್ತು. ಇದರಿಂದ ಗಾಯಗೊಂಡ ಸಿದ್ದರಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುತ್ತಿದ್ದರು. ಈ ವೇಳೆ ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವು

ಯಾದಗಿರಿ: ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗೂರು ಗ್ರಾಮದಲ್ಲಿ ನಡೆದಿದೆ. ಉಳ್ಳೇಸುಗೂರು ಗ್ರಾಮದಲ್ಲಿ ದೇವಪ್ಪ(40) ಮೃತ ದುರ್ದೈವಿ.

ಶ್ರಾವಣ ಮಾಸ ಹಿನ್ನೆಲೆ ಪ್ರತಿ ದಿನ ಗ್ರಾಮದ ಆಂಜನೇಯ ದೇಗುಲದ ಮುಂದೆ ಭಜನೆ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಬಜನೆ ಮಾಡುವಾಗ ದೇವಪ್ಪ ಮೈಮೇಲೆ ಕಲ್ಲಿನ ಕಂಬ ಬಿದ್ದಿದೆ. ಪರಿಣಾಮ ದೇವಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada