ಪತಿ ಲೈಂಗಿಕ ಆಸಕ್ತಿ ತೋರಿಸುತ್ತಿಲ್ಲ ಎಂದು ದೂರು ನೀಡಿದ ಪತ್ನಿ: ರಾಮನಗರದಲ್ಲೊಂದು ವಿಚಿತ್ರ ಕೇಸ್

ಕೆಲವರು ವರದಕ್ಷಿಣೆಗಾಗಿ ಹಲ್ಲೆ, ಟಾರ್ಚರ್, ಮನೆಯಿಂದ ಹೊರಹಾಕುವುದನ್ನು ನಾವು ನೋಡಿದ್ದೇವೆ. ಕೇಳಿದ್ದೇವೆ ಕೂಡ. ಅಲ್ಲದೇ ವರದಕ್ಷಿಣೆ ಆಸೆಗಾಗಿ ಕೊಲೆಯಾದ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಆದ್ರೆ, ರಾಮನಗರದಲ್ಲೊಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವರದಕ್ಷಿಣೆಗಾಗಿಯೇ ತನ್ನೊಂದಿಗೆ ಲೈಂಗಿಕ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಪತಿ ಲೈಂಗಿಕ ಆಸಕ್ತಿ ತೋರಿಸುತ್ತಿಲ್ಲ ಎಂದು ದೂರು ನೀಡಿದ ಪತ್ನಿ: ರಾಮನಗರದಲ್ಲೊಂದು ವಿಚಿತ್ರ ಕೇಸ್
ಪ್ರಾತಿನಿಧಿಕ ಚಿತ್ರ
Edited By:

Updated on: May 06, 2024 | 5:39 PM

ರಾಮನಗರ, (ಮೇ 06): ವರದಕ್ಷಿಣೆಗಾಗಿಯೇ ಕಳೆದ ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿಲ್ಲವೆಂದು ಆರೋಪಿಸಿ ಪತ್ನಿ(Wife), ತನ್ನ ಪತಿ(Husband) ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ವಿಚಿತ್ರ ಪ್ರಕರಣ ರಾಮನಗರದಲ್ಲಿ (Ramanagara) ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷದಿಂದ ಪತಿ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ. ವರದಕ್ಷಿಣೆಗಾಗಿಯೇ(dowry) ಈ ರೀತಿ ಮಾಡುತ್ತಿದ್ದಾರೆ ಎಂದು ಪತ್ನಿ, ತನ್ನ ಪತಿ ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್​​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ, ಆಕೆ ನೀಡಿದ ಹಿಂಸೆಯನ್ನು ಪಿನ್ ಟು ಪಿನ್​​​​ ವಿವರಿಸಿದ ಪತಿ

ಎರಡು ವರ್ಷದ ಗಂಡು ಮಗು ಇದೆ. ಮಗುವಿನ ಜನನ ಆದಾಗಿನಿಂದ ಲೈಂಗಿಕತೆಯಲ್ಲಿ ತೊಡಗಿಕೊಂಡಿಲ್ಲ. ಕಳೆದ ಎರಡು ವರ್ಷದಿಂದ ಪತಿ ತನ್ನೊಂದಿಗೆ ಸೆಕ್ಸ್ ಮಾಡುತ್ತಿಲ್ಲ. ವರದಕ್ಷಿಣೆಗಾಗಿಯೇ ಈ ರೀತಿ ಮಾಡುತ್ತಿದ್ದಾರೆ. ದಯವಿಟ್ಟು ವರದಕ್ಷಿಣೆ ಕೇಸ್ ಹಾಕಿ ಎಂದು ಮಹಿಳೆ ದೂರು ನೀಡಿದ್ದು, ಈ ದೂರಿನ ಮೇರೆಗೆ ರಾಮನಗರ ಮಹಿಳಾ ಠಾಣೆ ಪೊಲೀಸರು, ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ