ರಾಮನಗರ: ಬೆಟ್ಟದ ಕೊಳಕ್ಕೆ ಹಾರಿ ಯುವಕನೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಬಳಿ ನಡೆದಿದೆ. ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಜಿತ್ ತಡರಾತ್ರಿ ಮನೆಯಿಂದ ಹೋಗಿದ್ದ. ಪೋಷಕರು ನಾಪತ್ತೆ ದೂರಿನ ಹಿನ್ನೆಲೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಟವರ್ ಲೊಕೇಷನ್ ಆಧಾರದ ಮೇಲೆ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಸದ್ಯ ಈ ಪ್ರಕರಣ ಎಮ್ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಡಿವೈಡರ್ಗೆ ಡಿಕ್ಕಿ, ವಿಕಲಚೇತನ ಸಾವು:
ಕಾರವಾರ: ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಓರ್ವ ವಿಕಲಚೇತನ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ. ನಿಜಾಮುದ್ದಿನ್ (36) ಮೃತ ದುರ್ದೈವಿ. ನಿಯಂತ್ರಣ ತಪ್ಪಿದ ಕಾರು ಆಕಳಿಗೆ ಗುದ್ದಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಿಜಾಮುದ್ದಿನ್ ಹಾಗೂ ಅವರ ಸ್ನೇಹಿತ ಅಬಕಾರಿ ಇಲಾಖೆ ಜಪ್ತಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಾರು ಚಾಲಕ ಅಶೋಕ ಖೇಣಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಪತಿಯಿಂದ ಪತ್ನಿ ಹತ್ಯೆ:
ಮೈಸೂರು: ಮಾನಸಿಕ ಖಿನ್ನತೆಗೊಳಗಾಗಿದ್ದ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಉಸಿರುಗಟ್ಟಿಸಿ ಪತ್ನಿ ಸಂಧ್ಯಾ ಎಂಬುವವರನ್ನು ಪತಿ ಕಿರಣ್ ಹತ್ಯೆಗೈದಿದ್ದಾನೆ. ಜೋಡಿ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಿರಣ್ ಮಾನಸಿಕ ಖಿನ್ನತೆಗೊಳಗಾಗಿದ್ದ. ಮೂರು ತಿಂಗಳಿನಿಂದ ಪುನರ್ವಸತಿ ಕೇಂದ್ರದಲ್ಲಿದ್ದು ಬಂದಿದ್ದ. ಗಂಡ ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಪತ್ನಿ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಉದಯಗಿರಿ ಪೊಲೀಸರು ಕಿರಣ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಪ್ರಕರಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲುಲಾಗಿದೆ.
ಖಾಸಗಿ ಬಸ್ ಮರಕ್ಕೆ ಡಿಕ್ಕಿ:
ಕೋಲಾರ: ಪಾರ್ಶ್ವಗಾನಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಮರಕ್ಕೆ ಡಿಕ್ಕಿಯಾಗಿ ಸುಮಾರು 20 ಮಂದಿಗೆ ಗಾಯವಾಗಿದೆ. ಕೋಲಾರ ಹೊರವಲಯದ ಪ್ಲಿಪ್ ಕಾರ್ಟ್ ಕಂಪನಿಗೆ ಸೇರಿದ್ದ ಬಸ್, ಕೆಲಸ ನಿರ್ಮಿತ ತೆರಳುತ್ತಿದ್ದರು. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ
Published On - 10:41 am, Sun, 13 February 22