Viral Video : ಸಾಂತಾಕ್ಲಾಸ್ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ
ವ್ಯಕ್ತಿಯೊಬ್ಬ ಸಾಂತಾಕ್ಲಾಸ್ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್ಮಸ್ ಗಿಫ್ಟ್ ನೀಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗತ್ತಿನ ಹಲವು ದೇಶಗಳಲ್ಲಿ ಕ್ರಿಸ್ಮಸ್ ಈವ್ ಆರಂಭವಾಗಿದೆ. ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಮತ್ತು ವಿಶೇಷವಾದ ವರ್ಷದ ಏಕೈಕ ಹಬ್ಬ ಕ್ರಿಸ್ಮಸ್. ಈ ವೇಳೆ ಸಾಂತಾ ಕ್ಲಾಸ್ ಪರಿಕಲ್ಪನೆ ಮಕ್ಕಳಲ್ಲಿ ಹೆಚ್ಚಾಗಿಯೇ ಇರುತ್ತದೆ. ಅದೇ ರೀತಿಯಲ್ಲಿ ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎನ್ನುವ ಪರಿಕಲ್ಪನೆಯೊಂದಿಗೆ ಹಬ್ಬ ಶುರುವಾಗಿದೆ. ಅದೇ ಪರಿಕಲ್ಪನೆ ನಿಜವಾದರೆ ಮಕ್ಕಳ ಮುಖದಲ್ಲಿ ಕಾಣುವ ಖುಷಿ ಹೇಳತೀರದು. ಅಂಥಹದ್ದೇ ಒಂದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಸಾಂತಾಕ್ಲಾಸ್ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್ಮಸ್ ಗಿಫ್ಟ್ ನೀಡಿದ್ದಾರೆ.
ನೆಕ್ಸ್ಟ್ ಡೋರ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯುನೈಟೆಡ್ ಪಾರ್ಸಲ್ ಸರ್ವಿಸ್ ಎನ್ನುವ ಅಂತಾರಾಷ್ಟ್ರೀ ಕಂಪನಿಯೊಂದು ವಿಕಲಚೇತನಬಾಲಕನಿಗಾಗಿ ಗಾಡಿಯಲ್ಲಿ ಉಡುಗೊರೆಯನ್ನು ಕಳುಹುಸುದೆ. ಅದರಲ್ಲಿರುವ ವ್ಯಕ್ತಿ ಸಾಂತಾ ಕ್ಲಾಸ್ ನಂತೆಯೇ ಡ್ರೆಸ್ ಧರಿಸಿದ್ದರು.
View this post on Instagram
ಇದರಿಂದ ಖುಷಿಗೊಂಡ ಬಾಲಕ ಸಾಂತಾ ಕ್ಲಾಸ್ ಕ್ರಿಸ್ಮಸ್ ಈವ್ಗೆ ಉಡುಗೊರೆ ತಂದಿದ್ದಾರೆ ಎಂದು ಕುಣಿದು ಕುಪ್ಪಳಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಂತಾಕ್ಲಾಸ್ ಪರಿಕಲ್ಪನೆ ನಿಜವಾದರೆ ಎಲ್ಲಾ ಮಕ್ಕಳಿಗೂ ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್