AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಹೈದರಾಬಾದ್​ಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್​; ಶ್ರೀ ರಾಮಾನುಜಾಚಾರ್ಯರ ಚಿನ್ನದ ಪ್ರತಿಮೆ ಅನಾವರಣ

Ramanujacharya Sahasrabdi: ಶ್ರೀರಾಮಾನುಜಾಚಾರ್ಯರ 1003ನೇ ಜನ್ಮಜಯಂತಿ ನಿಮಿತ್ತ ಹೈದರಾಬಾದ್​ನ ಹೊರವಲಯದಲ್ಲಿರುವ ಮುಚ್ಚಿಂತಲ್​​ನಲ್ಲಿ ಫೆ.2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಇಂದು ಹೈದರಾಬಾದ್​ಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್​; ಶ್ರೀ ರಾಮಾನುಜಾಚಾರ್ಯರ ಚಿನ್ನದ ಪ್ರತಿಮೆ ಅನಾವರಣ
ರಾಷ್ಟ್ರಪತಿ ರಾಮನಾಥ್ ಕೋವಿಂದ್
TV9 Web
| Edited By: |

Updated on:Feb 13, 2022 | 8:23 AM

Share

ಹೈದರಾಬಾದ್​​ನ ಮುಚ್ಚಿಂತಲ್​​ನಲ್ಲಿ ನಡೆಯುತ್ತಿರುವ ಶ್ರೀರಾಮಾನುಜಾಚಾರ್ಯ ಜನ್ಮ ಸಹಸ್ರಾಬ್ದಿ (Sri Ramanuja Sahasrabdi) ಕಾರ್ಯಕ್ರಮದಲ್ಲಿ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಪಾಲ್ಗೊಳ್ಳಲಿದ್ದಾರೆ.  ರಾಮನಾಥ ಕೋವಿಂದ್​ ಅವರು ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಜೀವಾ ಆಶ್ರಮ (ಚಿನ್ನ ಜೀಯಾರ್​ ಸ್ವಾಮಿ ಆಶ್ರಮ) ತಲುಪುವರು. ಅಲ್ಲಿ ಶ್ರೀರಾಮಾನುಜಾಚಾರ್ಯರ ಸಮಾನತೆ ಪ್ರತಿಮೆ ಬಳಿಯೇ ಶ್ರೀರಾಮಾನುಜಾಚಾರ್ಯರ ಚಿನ್ನದ ಮೂರ್ತಿಯನ್ನು (ಪೂಜಿಸಲ್ಪಡುವ ಮೂರ್ತಿ) ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ  ಭಾಷಣ ಮಾಡಲಿದ್ದಾರೆ.

ಶ್ರೀರಾಮಾನುಜಾಚಾರ್ಯರ 1003ನೇ ಜನ್ಮಜಯಂತಿ ನಿಮಿತ್ತ ಹೈದರಾಬಾದ್​ನ ಹೊರವಲಯದಲ್ಲಿರುವ ಮುಚ್ಚಿಂತಲ್​​ನಲ್ಲಿ ಫೆ.2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ನಾಳೆ ಅಂದರೆ ಫೆ.14ರಂದು ಮುಕ್ತಾಯಗೊಳ್ಳಲಿದೆ. ಫೆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಮೂರ್ತಿಯನ್ನು ಅನಾವರಣಗೊಳಿಸಿದ್ದರು. ಇದನ್ನು ಸಮಾನತೆಯ ಮೂರ್ತಿ ಎಂದು ಕರೆಯಲಾಗಿದ್ದು, ವಿಶ್ವದಲ್ಲೇ ಅತ್ಯಂತ ಎತ್ತರದ ಮೂರ್ತಿಯಾಗಿದೆ.  ಹೈದರಾಬಾದ್​ನ ಹೊರವಲಯದಲ್ಲಿರುವ ಶ್ರೀರಾಮಾನುಜಾಚಾರ್ಯರ ಆಶ್ರಮದ 45 ಎಕರೆ ಸಂಕೀರ್ಣದಲ್ಲಿ ಈ ಪ್ರತಿಮೆ ಇದೆ. ಇದರ ನಿರ್ಮಾಣಕ್ಕೆ 2014ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. 1000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಣವೆಲ್ಲ ಬಹುತೇಕ ಭಕ್ತರು ನೀಡಿದ ದೇಣಿಗೆಯಿಂದಲೇ ಸಂಗ್ರಹವಾಗಿತ್ತು.

ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್​ ಶಾ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇನ್ನಿತರ ಸಭೆ-ಸಮಾರಂಭಗಳೂ ನಡೆದಿವೆ. ಶನಿವಾರ ನಟ ಚಿರಂಜೀವಿ, ಪತ್ನಿಯೊಂದಿಗೆ ಸಮಾನತೆಯ ಪ್ರತಿಮೆಯ ಸಹಿತ 108 ದಿವ್ಯ ದೇಶಗಳಿಗೆ ಭೇಟಿ ನೀಡಿದ್ದಾರೆ. ಮೈ ಹೋಮ್ ಗ್ರೂಪ್​ನ ಚೇರ್ಮನ್ ಡಾ. ರಾಮೇಶ್ವರ್ ರಾವ್ ಚಿರಂಜೀವಿ ದಂಪತಿಗಳಿಗೆ ಸಮಾನತೆಯ ಪ್ರತಿಮೆಯನ್ನು, ದಿವ್ಯದೇಶ ಪ್ರದೇಶವನ್ನು ವಿವರಣೆ ನೀಡಿದ್ದಾರೆ. ಅಲ್ಲದೆ, ಜ್ಯೂನಿಯರ್ ಎನ್‌ಟಿಆರ್ ಅವರ ಕುಟುಂಬ ಸದಸ್ಯರು ಕೂಡ ಸಮಾನತೆಯ ಮೂರ್ತಿ ಭವ್ಯ ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಜ್ಞಶಾಲೆಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಸಹಿತ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಿನ್ನೆ ಸಮತಾ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ; ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ

Published On - 8:23 am, Sun, 13 February 22