AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Statue of Equality: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿ

ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಮಾನತೆಯ ಪ್ರತಿಮೆ ವಿಶ್ವದಲ್ಲೇ ಎರಡನೇ ಅತ್ಯಂತ ಎತ್ತರದ ಕುಳಿತ ಭಂಗಿಯಲ್ಲಿ ಇರುವ ವಿಗ್ರಹ ಎಂದು ಖ್ಯಾತಿ ಪಡೆದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ (ಫೆಬ್ರವರಿ 13) ಮುಚ್ಚಿಂತಲ್​ಗೆ ಆಗಮಿಸಲಿದ್ದಾರೆ.

Statue of Equality: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿ
ಸಮಾನತೆಯ ಮೂರ್ತಿ
TV9 Web
| Updated By: ganapathi bhat|

Updated on:Feb 12, 2022 | 8:24 PM

Share

ಹೈದರಾಬಾದ್: ನಗರದ ಹೊರವಲಯದಲ್ಲಿ ಇರುವ ರಂಗಾರೆಡ್ಡಿ ಜಿಲ್ಲೆಯ ರಾಮನಗರದಲ್ಲಿ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ/ ಸಹಸ್ರಾಬ್ದಿ ಕಾರ್ಯಕ್ರಮವು ಕಳೆದ 11 ದಿನಗಳಿಂದ ನಡೆಯುತ್ತಿದೆ. ಸಮಾನತೆಯ ಮೂರ್ತಿ ಕ್ಷೇತ್ರ ಜೈ ಶ್ರೀಮನ್ನಾರಾಯಣ ನಾಮಸ್ಮರಣೆಯೊಂದಿಗೆ ಭಕ್ತಿಭಾವದಲ್ಲಿ ತುಂಬಿದೆ. ವೇದ ಮಂತ್ರಗಳು, ಅಷ್ಟೋತ್ತರ ನಾಮಗಳು ಮತ್ತು ಶ್ರೀ ಲಕ್ಷ್ಮೀನರಸಿಂಹನ ಸ್ತೋತ್ರಗಳಿಂದ ರಾಮನಗರವು ಧಾರ್ಮಿಕ ಕಳೆ ಇಮ್ಮಡಿಯಾಗಿದೆ. ಇದೀಗ ಇಲ್ಲಿಗೆ, ಶನಿವಾರ (ಫೆಬ್ರವರಿ 12) ಸಂಜೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಭೇಟಿ ನೀಡಿದ್ದಾರೆ.

ಅವರೆಲ್ಲರೂ ಸಮಾನತೆಯ ಮೂರ್ತಿಯ ವಿಗ್ರಹದೊಂದಿಗೆ 108 ದಿವ್ಯ ದೇಶಗಳನ್ನು ಭೇಟಿ ಮಾಡಿದ್ದಾರೆ. ರಾಮೇಶ್ವರ್ ರಾವ್ ಚಿರಂಜೀವಿ ದಂಪತಿಗಳಿಗೆ ಮಾನತೆಯ ಮೂರ್ತಿ ಸ್ಥಳವನ್ನು ವಿವರಿಸಿದ್ದಾರೆ. ಅಲ್ಲದೆ, ಜ್ಯೂನಿಯರ್ ಎನ್‌ಟಿಆರ್ ಅವರ ಕುಟುಂಬ ಸದಸ್ಯರು ಸಮಾನತೆಯ ಮೂರ್ತಿಯ ಭವ್ಯ ಪ್ರತಿಮೆಗೆ ಭೇಟಿ ನೀಡಿದ್ದಾರೆ. ಯಜ್ಞಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಜ್ಞಾನ, ಸಮಾನತೆ, ಆಧ್ಯಾತ್ಮಿಕ ಭಾವವನ್ನು ನೀಡುವ ಸಮಾನತೆಯ ಮೂರ್ತಿಯ ಪ್ರತಿಮೆಯ ಕಣ್ತುಂಬಿಕೊಳ್ಳಲು ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಅಲ್ಲಿಗೆ ಬರುತ್ತಿದ್ದಾರೆ. ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಮಾನತೆಯ ಪ್ರತಿಮೆ ವಿಶ್ವದಲ್ಲೇ ಎರಡನೇ ಅತ್ಯಂತ ಎತ್ತರದ ಕುಳಿತ ಭಂಗಿಯಲ್ಲಿ ಇರುವ ವಿಗ್ರಹ ಎಂದು ಖ್ಯಾತಿ ಪಡೆದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ (ಫೆಬ್ರವರಿ 13) ಮುಚ್ಚಿಂತಲ್​ಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: Ramanujacharya Sahasrabdi: ರಾಮಾನುಜಾಚಾರ್ಯರ ಬೋಧನೆಗಳು ಎಲ್ಲರಿಗೂ ಆದರ್ಶ: ಅಮಿತ್ ಶಾ

ಇದನ್ನೂ ಓದಿ: ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ

Published On - 8:23 pm, Sat, 12 February 22