ಆ.23ರಂದು ಸರ್ವಪಕ್ಷ ಸಭೆ: ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ ಎಂದ ಕುಮಾರಸ್ವಾಮಿ

ರಾಮನಗರದಲ್ಲಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ ಸರ್ಕಾರದಲ್ಲಿ ಕೆಲವು ಲಘುವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರಾಜ್ಯದ ಜನತೆ ಮೇಲೆ ಕೆಲ ದುಷ್ಪರಿಣಾಮ ಆಗುತ್ತಿದೆ. ವಿಪಕ್ಷದಲ್ಲಿರುವ ನಾವು ದುಷ್ಪರಿಣಾಮದ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಆ.23ರಂದು ಸರ್ವಪಕ್ಷ ಸಭೆ: ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ ಎಂದ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By: ಆಯೇಷಾ ಬಾನು

Updated on: Aug 20, 2023 | 3:00 PM

ರಾಮನಗರ, ಆ.20: ಕಾವೇರಿ, ಮಹದಾಯಿ, ಕೃಷ್ಣಾ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಆ.23ರಂದು ಬೆಳಗ್ಗೆ 11 ಗಂಟೆಗೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಬುಧವಾರ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಸದ್ಯ ಈ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ(HD Kumaraswamy), ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ನನ್ನ ಒತ್ತಾಯದ ಮೇಲೆ ಸರ್ವಪಕ್ಷ ಸಭೆ ಕರೆಯಲು ತೀರ್ಮಾನ ಮಾಡಲಾಗಿದೆ. ಸರ್ವಪಕ್ಷ ಸಭೆಗೆ ಈವರೆಗೆ ನಮ್ಮನ್ನೂ ಕರೆದಿಲ್ಲ, ಮುಂದೆ ನೋಡೋಣ. ರಾಜ್ಯ ಸರ್ಕಾರ ಕೆಲವು ಲಘುವಾದ ನಿರ್ಧಾರ ತೆಗೆದುಕೊಂಡಿದೆ. ವಿಪಕ್ಷದಲ್ಲಿರುವ ನಾವು ದುಷ್ಪರಿಣಾಮದ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದರು.

ರಾಮನಗರದಲ್ಲಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ ಸರ್ಕಾರದಲ್ಲಿ ಕೆಲವು ಲಘುವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರಾಜ್ಯದ ಜನತೆ ಮೇಲೆ ಕೆಲ ದುಷ್ಪರಿಣಾಮ ಆಗುತ್ತಿದೆ. ವಿಪಕ್ಷದಲ್ಲಿರುವ ನಾವು ದುಷ್ಪರಿಣಾಮದ ಬಗ್ಗೆ ಧ್ವನಿ ಎತ್ತಿದ್ದೇವೆ. ನನ್ನ ಒತ್ತಾಯದ ಮೇಲೆ ಸರ್ವಪಕ್ಷದ ಸಭೆ ಕರೆಯಲು ತಿರ್ಮಾನಿಸಿದ್ದಾರೆ. ಈಗಾಗಲೇ ಕೆಆರ್​ಎಸ್​ನಿಂದ ತಮಿಳುನಾಡಿಗೆ ನೀರು ಬಿಟ್ಟಾಗಿದೆ. ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿದ ತಕ್ಷಣ ಯಾಕೆ ನೀರು ಬಿಡಬೇಕಿತ್ತು? ಸುಪ್ರೀಂಕೋರ್ಟ್​​ನಲ್ಲಿ ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸಬೇಕಿತ್ತು. ಆ ಕೆಲಸವನ್ನ ಕಾಂಗ್ರೆಸ್ ನಾಯಕರು ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಬಿಜೆಪಿ ಪ್ರತಿಭಟನೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು

ನೀರಾವರಿ ವಿಚಾರದಲ್ಲಿ ಜನರ ರಕ್ಷಣೆ ಎಷ್ಟರ ಮಟ್ಟಿಗೆ ಆಗುತ್ತಿದೆ. ಮೇಕೆದಾಟು ಪಾದಯಾತ್ರೆ ವೇಳೆ ‘ನಮ್ಮ ನೀರು, ನಮ್ಮ ಹಕ್ಕು’ ‘ನಮ್ಮ ನೀರು, ನಮ್ಮ ಹಕ್ಕು’ ಅಂತಾ ಘೋಷಣೆ ಕೂಗಿದ್ದರು. ಈಗ ಗೊತ್ತಾಗಲಿದೆ ಅವರ ಹಕ್ಕು. ಮೇಕೆದಾಟು ಯೋಜನೆ ಡಿ.ಕೆ.ಶಿವಕುಮಾರ್ ಕನಸಿನ ಕೂಸಂತೆ. 50-60 ಕೋಟಿ ಇದ್ದ ಆಸ್ತಿನ 1,400 ಕೋಟಿ ಮಾಡಿಕೊಳ್ಳುವ ಕನಸು. 2ನೇ ಬಾರಿ ಸಿಎಂ, ಹಣಕಾಸು ಸಚಿವನಾಗಿ ನಾನು ಈ ಯೋಜನೆ ತಂದೆ. 450 ಕೋಟಿ ವೆಚ್ಚದಲ್ಲಿ ನೀರು ತರುವ ಯೋಜನೆ ತಂದಿದ್ದು ನಾನು. ಡಿ.ಕೆ.ಶಿವಕುಮಾರ್​​ ತಮ್ಮ ನೈಸ್ ವ್ಯವಹಾರ ಅಂತಾ ಹೇಳಿದ್ದಾನೆ. ಯಾವನ್ರೀ ನೈಸ್ ವ್ಯವಹಾರ ಮಾಡಿರೋನು. ರೈತರ ಭೂಮಿಯನ್ನು ನೀವು ಲೂಟಿ ಹೊಡೆದುಕೊಂಡಿದ್ದೀರಿ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ದಾಖಲೆ ಬಿಡುಗಡೆ ಮಾಡುವೆ ಎಂದು ಡಿಕೆ ಬ್ರದರ್ಸ್​ ವಿರುದ್ಧ ಏಕವಚನದಲ್ಲೇ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us