ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ: ಡಿಕೆ ಶಿವಕುಮಾರ್​​

ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ ಅಷ್ಟು ಮಂತ್ರಿಗಳೂ, ಸರ್ಕಾರ ಸರ್ವನಾಶ ಆಗಬೇಕಾ?. ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ: ಡಿಕೆ ಶಿವಕುಮಾರ್​​
ಡಿಕೆ ಶಿವಕುಮಾರ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2024 | 10:39 PM

ರಾಮನಗರ, ಜು.27: ಕನಕಪುರದ ಜನರಿಗೆ ನನ್ನನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಿಂಗಳಿನ 2ನೇ ಶನಿವಾರ ಹಾಗೂ ಕೊನೇ ಶನಿವಾರ ಅವರಿಗಾಗಿಯೇ ಮೀಸಲಿಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​(D. K. Shivakumar) ಹೇಳಿದರು. ಇಂದು(ಜು.27) ರಾಮನಗರ(Ramanagar)ದಲ್ಲಿ ಮಾತನಾಡಿದ ಅವರು, ‘ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ ಅಷ್ಟು ಮಂತ್ರಿಗಳೂ, ಸರ್ಕಾರ ಸರ್ವನಾಶ ಆಗಬೇಕಾ?. ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

‘ನಮ್ಮ ಕನಕಪುರದಲ್ಲಿ ಇರುವ ಕಾವೇರಿ ಉದ್ಯಾನವನ‌ ಇಡೀ ರಾಜ್ಯದಲ್ಲೂ ಇಲ್ಲ. ಇಲ್ಲಿನ ಮಕ್ಕಳ ಪ್ರತಿಭೆ ತೋರಿಸೋದಕ್ಕೂ ಜಾಗ ಇರಲಿಲ್ಲ. ಟೆಂಟ್‌ನಲ್ಲಿ ಮಕ್ಕಳ ಕಾರ್ಯಕ್ರಮ ನಡಿದಿತ್ತು. ಆಗ ಕನಕಪುರ ನನ್ನ ಬಳಿ ಇರಲಿಲ್ಲ. ನಾನು ಬಂದ ಮೇಲೆ ಕನಕಪುರ ಏನಾಗಿದೆ ಎಂಬುದು ನಿಮ್ಮ ಮುಂದಿದೆ. ದೇವೆಗೌಡರು ,ಜಾಫರ್ ಶರೀಫ್ ,‌ ಕುಮಾರಸ್ವಾಮಿ ಸಂಸದರಾಗಿದ್ದಾಗ ಕನಕಪುರ ಲೋಕಸಭೆ ಆಗಿತ್ತು. ಕನಕಪುರ ಹೆಸರು ತೆಗೆದು ಇದನ್ನು ಬೆಂಗಳೂರು ಗ್ರಾಮಾಂತರ ಎಂದು ಮಾಡಿದ್ದೇವು.

ಇದನ್ನೂ ಓದಿ:ಡಿಸಿಎಂ ಡಿಕೆ ಶಿವಕುಮಾರ್​​ರಿಂದಲೇ ಡ್ಯಾಂಗಳು ತುಂಬಿ ತುಳುಕುತ್ತಿವೆ: ಕುಮಾರಸ್ವಾಮಿ ವ್ಯಂಗ್ಯ

ಇದು ಬೆಂಗಳೂರು ಸಿಟಿ, ಕೆಂಪೇಗೌಡ ಕಟ್ಟಿದ್ದಂತಹ ಬೆಂಗಳೂರು ಜಿಲ್ಲೆ ಇದು. ಆನೇಕಲ್,‌ ದೇವನಹಳ್ಳಿ, ಮಾಗಡಿ, ರಾಮನಗರ ಇವೆಲ್ಲವೂ ಬೆಂಗಳೂರೇ. ನನ್ನ ಹೆಸರು ದೊಡ್ಡ ಆಲಹಳ್ಳಿ‌ ಕೆಂಪೇಗೌಡ ಶಿವಕುಮಾರ್. ನಾವು ಬೆಂಗಳೂರಿನವರು. ಎಚ್ ಡಿ ದೇವೇಗೌಡರ ಹೆಸರೇನು?, ಹರದನಹಳ್ಳಿ, ದೊಡ್ಡೇಗೌಡರು ದೇವೇಗೌಡರು. ತಂದೆ-ತಾಯಿ‌ ಮಾತ್ರ ಇಲ್ಲಿ ಕಷ್ಟದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅವರ ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಅದಕ್ಕೆ ಅವರ ಮಕ್ಕಳು ಇಲ್ಲೇ ಇರಲಿ, ಇಲ್ಲೇ‌ ಕೆಲಸ‌ ಮಾಡಲಿ ಎಂದು ನಾವು ಪ್ರಯತ್ನ‌ ಮಾಡುತ್ತಾ ಇದ್ದೇವೆ.

ಮಿಸ್ಟರ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೇಳಿದ ಮಾತಿದು, ‘ವಿಶ್ವದ ನಾಯಕರು ಮೊದಲು ದೆಹಲಿಗೆ ಬರುತ್ತಾ ಇದ್ದರೂ, ದೆಹಲಿ, ಕಲ್ಕತ್ತಾ, ಚೆನೈ, ಬೆಂಗಳೂರಿಂದ ಹೋಗುತ್ತಿದ್ದರು. ಬಹಳ‌ ದೂರದ ಆಲೋಚನೆ‌ ಮಾಡಿ, ಹೊಸ ರೂಪ ಕೊಟ್ಟು ಮಾಡುತ್ತಿದ್ದೇವೆ. ರಾಮನಗರ ಹಾಗೇ ಇರುತ್ತೆ. ಇದು‌ ಎಲ್ಲೂ ಹೋಗಲ್ಲ, ಮೊದಲು ಕ್ಲೋಸ್ ಪೇಟೆ ಎಂದು ಇತ್ತು. ಆಮೇಲೆ‌ ರಾಮನಗರ ಅಂತಾಯ್ತು. ರಾಮನಗರ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ