ಡಿಕೆಶಿಗೆ ಟಾಂಗ್ ಕೊಟ್ಟ ಸಹೋದರಿ ಪತಿ: ತವರು ಜಿಲ್ಲೆಯಲ್ಲೇ ಡಿಕೆ ಶಿವಕುಮಾರ್​ಗೆ ಮುಜುಗರ

ಕಾಂಗ್ರೆಸ್​​​​ನಲ್ಲಿ ಟಿಕೆಟ್ ನೀಡುವ ಹೈಕಮಾಂಡ್ ಸಂಸ್ಕೃತಿ ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ​ ಸಹೋದರಿ ಪತಿ ಶರತ್​ಚಂದ್ರ ಹೇಳಿದ್ದಾರೆ.

ಡಿಕೆಶಿಗೆ ಟಾಂಗ್ ಕೊಟ್ಟ ಸಹೋದರಿ ಪತಿ: ತವರು ಜಿಲ್ಲೆಯಲ್ಲೇ ಡಿಕೆ ಶಿವಕುಮಾರ್​ಗೆ ಮುಜುಗರ
ಶರತ್​ಚಂದ್ರ, ಡಿ.ಕೆ.ಶಿವಕುಮಾರ್
Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2023 | 5:40 PM

ರಾಮನಗರ: ಕಾಂಗ್ರೆಸ್​​​​ನಲ್ಲಿ ಟಿಕೆಟ್ ನೀಡುವ ಹೈಕಮಾಂಡ್ ಸಂಸ್ಕೃತಿ ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ (DK Shivakumar)​ ಸಹೋದರಿ ಪತಿ ಶರತ್​ಚಂದ್ರ (Sarathchandra) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್​​ ಪಕ್ಷಕ್ಕೆ ಉತ್ತಮ ಭವಿಷ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್​ಗೆ ಟಾಂಗ್ ನೀಡಿದರು. ಚನ್ನಪಟ್ಟಣ ಟಿಕೆಟ್ ನೀಡುವುದಾಗಿ ಹೇಳಿ ವಂಚನೆ ಮಾಡಿದ್ದರು. ಹಾಗಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಆಪ್​​ಗೆ ಉತ್ತಮ ಭವಿಷ್ಯ ಇದೆ. ಚನ್ನಪಟ್ಟಣ ಕ್ಷೇತ್ರ ಜಿದ್ದಾ ಜಿದ್ದಿನ ಕ್ಷೇತ್ರ. ನಾನು ಚಿರಪರಿಚಿತ ಇರುವ ಕಾರಣ ಕ್ಷೇತ್ರದಲ್ಲಿ ಕಚೇರಿ ತೆರೆದು ಸಂಘಟನೆ ಮಾಡುತ್ತೇನೆ ಎಂದು
ಡಿ.ಕೆ.ಶಿವಕುಮಾರ್​​ ಭಾವ ಶರತ್​​​ಚಂದ್ರ ಹೇಳಿದರು.

ಸಿದ್ದರಾಮಯ್ಯಗೆ ಬೆಂಬಲವಾಗಿ ನಾವೆಲ್ಲರೂ ನಿಲ್ಲುತ್ತೇವೆ: ಡಿ.ಕೆ.ಶಿವಕುಮಾರ್

ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಂಬಲವಾಗಿ ನಾವೆಲ್ಲರೂ ನಿಲ್ಲುತ್ತೇವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತೇನೆ ಎಂದು ಆಸೆ ಪಡ್ತಾರೋ ಅದಕ್ಕೆ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಕ್ಷೇತ್ರವೇ ನಮ್ಮ ಕ್ಷೇತ್ರ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.​

ಇದನ್ನೂ ಓದಿ: Kichcha Sudeep: ಕಾಂಗ್ರೆಸ್​ ಸೇರ್ತಾರಾ ಸುದೀಪ್​​? ಕಿಚ್ಚ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್

ಕಾಂಗ್ರೆಸ್​ ಭಿನ್ನಮತ ವಿಚಾರ

ಕಾಂಗ್ರೆಸ್​ ಭಿನ್ನಮತ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ ಪಕ್ಷದಲ್ಲಿ ದಿನ ಮಾತನಾಡುತ್ತಲೇ ಇರ್ತೀವಿ. ದಿನಾ ಮಾತುಕತೆ ಮಾಡ್ತಾ ಇರ್ತೀವೆ. ಪ್ರತಿದಿನ ಅವರ ಭಾವನ ಕೇಳ್ತೀವಿ. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗ ವೇದಿಕೆ ಹಂಚಿಕೊಂಡು ಸಂಧಾನ ಮುಗಿದಿದೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅವರ ನಿರ್ಧಾರ ಅಚಲ ಎಂದರು.

ಇದನ್ನೂ ಓದಿ: ನಾವು ಅಧಿಕಾರಕ್ಕೆ ಬರ್ತೇವೆ, ನಾನೇ ಅನುಭವ ಮಂಟಪ ಉದ್ಘಾಟಿಸ್ತೇನೆ ಎಂದ ಸಿದ್ದರಾಮಯ್ಯ

ನನಗೆ ಕಾಂಗ್ರೆಸ್​​ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಮುಖ್ಯ

ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ರಮೇಶ್​ ಕುಮಾರ್​ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಅಭಿಪ್ರಾಯ ತಿಳಿಸಿದ್ದಾರೆ. ಆ ವಿಚಾರ ಸಿದ್ದರಾಮಯ್ಯ ಹಾಗೂ ರಮೇಶ್​ ಕುಮಾರ್​ ಅವರನ್ನು ಕೇಳಿ. ನನ್ನದು ಕಾಂಗ್ರೆಸ್​​ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಮುಖ್ಯ.​ ಕಾಂಗ್ರೆಸ್​​ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಗೆ ಕರೆದುಕೊಂಡು ಹೋಗುವುದು, ನನ್ನ ಪಕ್ಷದ ಕಾರ್ಯಕರ್ತರನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವುದು ಮುಖ್ಯ. ನನ್ನ ಜೊತೆ ಇಡೀ ರಾಜ್ಯದ ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರು ಕೋವಿಡ್​ ಸಂದರ್ಭದಲ್ಲೂ ಕೂಡ ನಿಂತಿದ್ದಕ್ಕೆ ನಮ್ಮ ಪಕ್ಷದ ಸಿಎಂ ವಿಚಾರ ಬಿಜೆಪಿಯವರು ಮಾತಾಡ್ತಾ ಇದ್ದಾರೆ. ಬಿಜೆಪಿಯವರಿಗೆ ಗೊತ್ತಾಗಿದೆ ನಮ್ಮ ತಕ್ಕಡಿ 60ರ ಮೇಲೆ ಏಳಲ್ಲ ಅನ್ನೋದು. ನಮ್ಮದು 130 ಮೇಲೆ ಏರಿ ಹೋಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.