ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ ಸಿ.ಪಿ ಯೋಗೇಶ್ವರ್: ಮತದಾರರ ಮುಂದೆ ಸ್ವಾಭಿಮಾನದ ಅಸ್ತ್ರ ಬಳಸಲು ಪ್ಲ್ಯಾನ್​​

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ಮಣಿಸಲು ಹವಣಿಸುತ್ತಿರೋ ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ಕ್ಷೇತ್ರದ ಮತದಾರರ ಮುಂದೆ ಸ್ವಾಭಿಮಾನದ ಅಸ್ತ್ರವನ್ನ ಪ್ರಯೋಗಿಸುತ್ತಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ ಸಿ.ಪಿ ಯೋಗೇಶ್ವರ್: ಮತದಾರರ ಮುಂದೆ ಸ್ವಾಭಿಮಾನದ ಅಸ್ತ್ರ ಬಳಸಲು ಪ್ಲ್ಯಾನ್​​
ಸಿ.ಪಿ ಯೋಗೇಶ್ವರ್, ಹೆಚ್. ಡಿ. ಕುಮಾರಸ್ವಾಮಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 02, 2023 | 6:07 PM

ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನೂ ಕೆಲವು ತಿಂಗಳು ಬಾಕಿ ಇದೆ. ಬೊಂಬೆನಗರಿ ಚನ್ನಪಟ್ಟಣದಲ್ಲಿ ಈಗಾಗಲೇ ಚುನಾವಣೆ ಕಾವು ರಂಗೇರಿದೆ. ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ (HD Kumaraswamy) ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ಮಣಿಸಲು ಹವಣಿಸುತ್ತಿರೋ ಮಾಜಿ ಸಚಿವ ಸಿ.ಪಿ ಯೋಗೇಶ್ವರ್(CP Yogeshwar), ಕ್ಷೇತ್ರದ ಮತದಾರರ ಮುಂದೆ ಸ್ವಾಭಿಮಾನದ ಅಸ್ತ್ರವನ್ನ ಪ್ರಯೋಗಿಸುತ್ತಿದ್ದಾರೆ. ಹಾಗಾದ್ರೆ ಏನದು ಸ್ವಾಭಿಮಾನಿ ಅಸ್ತ್ರ. ಈ ಸ್ಟೋರಿ ಓದಿ. ಎಲೆಕ್ಷನ್ ಕಾವು ರಂಗು ಪಡೆಯುತ್ತಿದೆ. ಅದರಲ್ಲೂ ಇಬ್ಬರು ಮದಜಗಗಳ ಕಾಳಗಕ್ಕೂ ಕೂಡ ಬೊಂಬೆನಗರಿ ಚನ್ನಪಟ್ಟಣ ಈ ಬಾರಿ ಸಾಕ್ಷಿಯಾಗಲಿದೆ. ಏನಾದರೂ ಮಾಡಿ ಈ ಬಾರಿ ಕ್ಷೇತ್ರವನ್ನ ತಮ್ಮದಾಗಿಸಿಕೊಳ್ಳಲು ಮುಂದಾಗಿರೋ ಸೈನಿಕ, ದಳಪತಿಗೆ ಸರಿಯಾಗಿ ಟಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದು, ಕ್ಷೇತ್ರದ ಮತದಾರರನ್ನ ಭಾವನಾತ್ಮಕವಾಗಿ ಸೆಳೆಯಲು ಕ್ಷೇತ್ರದಲ್ಲಿ ಫಿಲ್ಡ್​ಗೆ ಇಳಿದಿದ್ದು, ಕ್ಷೇತ್ರದಾದ್ಯಂತ ಸ್ವಾಭಿಮಾನ ಸಂಕಲ್ಪ ನಡಿಗೆ ಆರಂಭಿಸಿದ್ದಾರೆ.

ಜನರನ್ನು ಪ್ರಶ್ನಿಸಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್

ಅದರ ಅಂಗವಾಗಿ ಇವತ್ತು ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ನಡಿಗೆ ಆರಂಭಿಸಿದ್ರು. ನಾನು ಶಾಸಕನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೆ. ಈ ಕ್ಷೇತ್ರಕ್ಕೆ ನೀರಾವರಿ ತಂದವನು ನಾನು. ನನ್ನನ್ನು ಚುನಾವಣೆಯಲ್ಲಿ ಯಾಕೆ ಸೊಲಿಸಿದ್ರೆ ಎಂದು ಜನರನ್ನು ಪ್ರಶ್ನೆ ಮಾಡಬೇಕಿದೆ. ಜನರ ಬಳಿ ಉತ್ತರ ಪಡೆಯಲು ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದೇನೆ. ಎರಡು ತಿಂಗಳ ಕಾಲ ಇಡೀ ಕ್ಷೇತ್ರದ ಮನೆ ಮನೆಗೆ ತೆರಳುತ್ತೇನೆ. ಕುಮಾರಸ್ವಾಮಿ ಅವರ ದುರಾಡಳಿತದ ಬಗ್ಗೆ ಮನವರಿಕೆ ಮಾಡುತ್ತೇನೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರೈತರ ಪ್ರತಿಭಟನೆ ಹಿನ್ನಲೆ ನಿಷೇಧಾಜ್ಞೆ ಜಾರಿಗೊಳಿಸಿದ ತಹಶೀಲ್ದಾರ್

ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ

ಅಂದಹಾಗೆ 2018 ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿದ್ದ ಸಿ ಪಿ ಯೋಗೇಶ್ವರ್, ಕೆಲ ದಿನಗಳ ಕಾಲ ಸೈಲೆಂಟಾಗಿ ಇದ್ದರು. ಆನಂತರ ಕ್ಷೇತ್ರದತ್ತ ತಲೆ ಹಾಕಿರಲಿಲ್ಲ. ಆದರೆ ಪೆಟ್ಟು ತಿಂದಿದ್ದ ಯೋಗೇಶ್ವರ್, ಕುಮಾರಸ್ವಾಮಿಗೆ ಸರಿಯಾಗಿ ಗುನ್ನಾ ಕೊಟ್ಟಿದ್ರು. ಆಪರೇಷನ್ ಕಮಲ ನಡೆಸಿ ಸಮ್ಮಿಶ್ರ ಸರ್ಕಾರವನ್ನ ಕೆಡವಲು ಕಾರಣಿಕರ್ತರಾಗಿದ್ರು. ಆನಂತರ ಕ್ಷೇತ್ರದಲ್ಲಿ ಫುಲ್ ಆಕ್ಷೀವ್ ಆಗಿ ಕ್ಷೇತ್ರದಲ್ಲಿ ಸಂಚಾರಿಸಿದ್ರು. ಅಲ್ಲದೆ ದಳಪತಿ ವಿರುದ್ದ ಬುಸುಗುಟ್ಟುತ್ತಲೇ ಇದ್ದರು. ಇವತ್ತು ಮುಂದುವರೆದು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ರು.

ಕಳೆದ ಐದು ವರ್ಷಗಳಲ್ಲಿ ‌ಚನ್ನಪಟ್ಟಣ ತಾಲೂಕಿನಲ್ಲಿ ‌ಅರಾಜುಕತೆ ಸೃಷ್ಠಿಯಾಗಿದೆ. ಭ್ರಷ್ಟಾಚಾರ, ಗೂಂಡಾಗಿರಿ, ಅರಾಜುಕತೆ, ದೌರ್ಜನ್ಯ ನಡೆಯುತ್ತಿದೆ. ನಾಯಕನಿಲ್ಲದ ತಾಲೂಕಾಗಿ ಸೃಷ್ಟಿಯಾಗಿದೆ. ತಾಲೂಕಿನ ಜನಪ್ರತಿನಿಧಿಯಾದರೂ ಕಳಕಳಿಯಿಂದ ಕೆಲಸ‌ ಮಾಡಿಲ್ಲ. ಶಾಸಕರಾಗಿ ತಾಲೂಕಿಗೆ ಎಷ್ಟು ಸಾರಿ ಬಂದು ಹೋಗಿದ್ದಾರೆ. ಜನರ ನೋವಿಗೆ ಸ್ವಂದಿಸಿದ್ದಾರಾ. ಚನ್ನಪಟ್ಟಣ ತಾಲೂಕನ್ನ ಒಂದು ಏರಿಯಾ ಮಾಡಿಕೊಂಡಿದ್ದಾರೆ, ಹೊರತು ಜನಸಾಮಾನ್ಯರ ಕಣ್ಣೀರು ಹೊರಸಲಿಲ್ಲ. ಕುಮಾರಸ್ವಾಮಿ ಯಾರ‌ ಮನೆಯ ಬಳಿ‌ ಹೋಗಿ ‌ಕಷ್ಟಸುಖ ಕೇಳಿದ್ದಾರೆ.

ಇದನ್ನೂ ಓದಿ: ಅಮಿತ್​ ಶಾ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಸಿ.ಪಿ.ಯೋಗೇಶ್ವರ್​​

ಮಂಕುಬೂಧಿ ಎರಚಿ ಚುನಾವಣೆ ಗೆದ್ದರು

ಪ್ರತಿ ಚುನಾವಣೆಯಲ್ಲಿ ಮಂಕುಬೂಧಿ ಎರಚಿದ್ರು. ಕುಮಾರಸ್ವಾಮಿ ‌ಕಳೆದ ಬಾರಿ ವಾಮಮಾರ್ಗ, ಸುಳ್ಳು ಭರವಸೆಕೊಟ್ಟು ಚುನಾವಣೆ ಗೆದ್ದಿದ್ದು. ಕಣ್ಣೀರು ಹಾಕಿ‌, ಮೋಸ ಮಾಡಿ ಚುನಾವಣೆಯಲ್ಲಿ ಗೆದ್ದರು. ನನಗೆ ಹೃದಯ ವೀಕ್ ಆಗಿದೆ ಎಂದು‌‌ ಕಣ್ಣೀರು ಹಾಕಿದ್ರು ಎಂದು ವಾಗ್ದಾಳಿ ಮಾಡಿದ್ದಾರೆ. ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೊಂಬೆನಗರಿಯಲ್ಲಿ ಚುನಾವಣೆ ಕಾವು ರಂಗು ಪಡೆಯುತ್ತಿದ್ದು, ಹೇಗಾದರೂ ಮಾಡಿ ದಳಪತಿ ವಿರುದ್ದ ತೊಡೆ ತಟ್ಟಲು ಮುಂದಾಗಿರೋ ಸೈನಿಕ ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಮತದಾರರ ಮನಸ್ಸು ಗೆಲ್ಲಲು ಮುಂದಾಗುತ್ತಿದ್ದಾರೆ. ಮತದಾರ ಸೈನಿಕನ ಕೈ ಹಿಡಿಯುತ್ತಾರಾ ಕಾದು ನೋಡಬೇಕಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ. 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:03 pm, Thu, 2 February 23

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್