ನಾವು ಅಧಿಕಾರಕ್ಕೆ ಬರ್ತೇವೆ, ನಾನೇ ಅನುಭವ ಮಂಟಪ ಉದ್ಘಾಟಿಸ್ತೇನೆ ಎಂದ ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬರ್ತೇವೆ, ನಾನೇ ಅನುಭವ ಮಂಟಪ ಉದ್ಘಾಟಿಸ್ತೇನೆ. ಇದರಿಂದ ನನಗೆ ಪುಣ್ಯ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೀದರ್: ನಾವು ಅಧಿಕಾರಕ್ಕೆ ಬರ್ತೇವೆ, ನಾನೇ ಅನುಭವ ಮಂಟಪ ಉದ್ಘಾಟಿಸ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿರುವ ಅನುಭವ ಮಂಟಪದ ಬಳಿ ಮಾತನಾಡಿ, ಅನುಭವ ಮಂಟಪ ಉದ್ಘಾಟನೆ ಮಾಡಿದರೆ ನನಗೆ ಪುಣ್ಯ ಬರುತ್ತದೆ. ಬಸವ ಜಯಂತಿ ದಿನ ನಾನು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಪ್ರಮಾಣವಚನ ಸ್ವೀಕರಿಸಿದ ಕೆಲ ಹೊತ್ತಲ್ಲಿ ಅನ್ನಭಾಗ್ಯ, ದಾಸೋಹದ ಪರಿಕಲ್ಪನೆ ಇಟ್ಟುಕೊಂಡು ಈ ಯೋಜನೆ ಜಾರಿಗೆ ತಂದಿದ್ದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕೆಂದು ಅನ್ನಭಾಗ್ಯ ಯೋಜನೆ ತರಲಾಯಿತು. ನಾನು ಬಸವಣ್ಣನ ತತ್ವದ ಮೇಲೆ ನಂಬಿಕೆ ಇಟ್ಟವನು. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಸಮಾನ ಅವಕಾಶ ಸಿಗಬೇಕು. ಸರ್ಕಾರಿ ಕಚೇರಿಯಲ್ಲಿ ಬಸವಣ್ಣ ಫೋಟೋ ಇಡಲು ಆದೇಶ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಲೂಟಿ ಹೊಡೆಯುವುದು ಬಿಟ್ರೆ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ
ಪ್ರಜಾಧ್ವನಿ ಮೂಲಕ ಬಿಜೆಪಿ ಭ್ರಷ್ಟಾಚಾರವನ್ನು ಜನರ ಮುಂದಿಟ್ಟಿದ್ದೇವೆ. ಬಿಜೆಪಿ ಸರ್ಕಾರದ ಪಾಪ ಮತ್ತು ಕರ್ಮಕಾಂಡವನ್ನು ಜನರ ಮುಂದಿಟ್ಟಿದ್ದೇವೆ. ಲೂಟಿ ಹೊಡೆಯುವುದು ಬಿಟ್ರೆ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ವಿಧಾನಸೌಧದ ಗೋಡೆಗೆ ಕಿವಿಕೊಟ್ಟರೆ ಬರೀ ಲಂಚ ಅಂತಾ ಕೇಳಿಸುತ್ತೆ. ವಿಧಾನಸೌಧದ ಪ್ರತಿ ಗೋಡೆಗಳು ಲಂಚದ ಬಗ್ಗೆ ಪಿಸುಗುಟ್ಟುತ್ತಿವೆ. ಬಿಜೆಪಿ ಕಮಿಷನ್ ದಂಧೆಗೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಾನಂದ ಎಂಬುವರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಪ್ರತಿ ಕಚೇರಿಯಲ್ಲೂ ಲಂಚ ತಾಂಡವವಾಡುತ್ತಿದೆ. ವರ್ಗಾವಣೆ ಹಾಗೂ ಬಡ್ತಿ ಪಡೆಯುವುದಕ್ಕೂ ಲಂಚ ನಡೀತಾ ಇದೆ ಎಂದು ಹೇಳಿದರು.
ಶಾಸಕ ರಾಜಶೇಖರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ಜಿಲ್ಲೆಯ ಹುಮ್ನಾಬಾದ್ ಶಾಸಕ ರಾಜಸೇಖರ್ ಪಾಟೀಲ್ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಚಹಾ ನೀರು ಸೇವಿಸಿದರು. ನಂತರ ಬಸವಕಲ್ಯಾಣ ಪ್ರಜಾ ಧ್ವನಿ ಸಮಾವೇಶಕ್ಕೆ ಹೊರಟರು. ಸಿದ್ದರಾಮಯ್ಯಗೆ, ಎಂಬಿ ಪಾಟೀಲ್, ಜಮೀರ್ ಅಹ್ಮದ್, ಈಶ್ವರ ಖಂಡ್ರೆ ಸಾಥ್ ಕೊಟ್ಟರು.
ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್-ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ; ಇಲ್ಲಿದೆ ಕಾರಣ
ಸಿದ್ದರಾಮಯ್ಯ ಜೀವನಾಧಾರಿತ ಗೀತೆ ಬಿಡುಗಡೆಗೆ ಸಜ್ಜು..!
ಇನ್ನು ಸಿದ್ದರಾಮಯ್ಯ ಜೀವನಾಧಾರಿತ ಗೀತೆ ಬಿಡುಗಡೆಗೆ ಸಜ್ಜಾಗಿದೆ. ಮಾಜಿ ಮುಖ್ಯ ಮಂತ್ರಿ ಬಾಲ್ಯ ಹಾಗೂ ಅವರು ಬೆಳೆದು ಬಂದ ಹಾದಿಯನ್ನ ಈ ಹಾಡು ಪರಿಚಯಿಸಲಿದೆ. ಆಂದ್ರ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಲಾಗಿದೆ. ಮನೋಜ್ ಹಾಗೂ ಅವರ ತಂಡ ಇಂತಹ ಪ್ರಯತ್ನ ಮಾಡಿದ್ದು, ಕನ್ನಡ, ತೆಲುಗು, ತಮಿಳಿನಲ್ಲಿ ನಾಳೆ ಸಾಂಗ್ ರಿಲೀಸ್ ಆಗಲಿದೆ. ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಡು ಬಿಡುಗಡೆಗೆ ಭರ್ಜರಿ ಯೋಜನೆ ಮಾಡಿದ್ದಾರೆ. ಹೈದರಾಬಾದ್ ಮೂಲದ ಶ್ರೀಧರ್ ಅವರ ಪರಿಕಲ್ಪನೆ ನಿರ್ಮಾಣದಲ್ಲಿ ಸಾಂಗ್ ಮೂಡಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.