AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parliament: ಅದಾನಿ ವಿಚಾರ: ಸಂಸತ್​ನಲ್ಲಿ ಮತ್ತೆ ಗದ್ದಲ; ಕಲಾಪ ಮುಂದೂಡಿಕೆ

Opposition Parties Ruckus: ಇಂದು ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳ ವೇಳೆ ವಿಪಕ್ಷಗಳ ಸದಸ್ಯರು ಅದಾನಿ ವಿಚಾರವನ್ನು ಪ್ರಸ್ತಾಪಿಸಿ ಗದ್ದಲ ನಡೆಸಿದ್ದಾರೆ. ಅದಾನಿ ವಿರುದ್ಧ ತನಿಖೆಗೆ ಆದೇಶಿಸಬೇಕೆಂಬ ವಿಪಕ್ಷಗಳ ಒತ್ತಾಯಕ್ಕೆ ಸರ್ಕಾರ ಇನ್ನೂ ಒಪ್ಪಿಲ್ಲ.

Parliament: ಅದಾನಿ ವಿಚಾರ: ಸಂಸತ್​ನಲ್ಲಿ ಮತ್ತೆ ಗದ್ದಲ; ಕಲಾಪ ಮುಂದೂಡಿಕೆ
ವಿಪಕ್ಷಗಳ ಪ್ರಮುಖ ನಾಯಕರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 03, 2023 | 12:58 PM

Share

ನವದೆಹಲಿ: ಸಂಸತ್​ನ ಎರಡೂ ಸದನಗಳಲ್ಲಿ ಶುಕ್ರವಾರವೂ ಗದ್ದಲ ಜೋರಾಗಿ ನಡೆದಿದೆ. ಅದಾನಿ ಗ್ರೂಪ್ ಸಂಸ್ಥೆ ವಿರುದ್ಧ ಹಿಂಡನ್ಬರ್ಗ್ ರೀಸರ್ಚ್ ವರದಿ (Hindenburg Research report on Adani Group companies) ಪ್ರಕಟವಾಗಿರುವ ವಿಚಾರ ಇಟ್ಟುಕೊಂಡು ವಿಪಕ್ಷಗಳು ಸಂಸತ್​ನಲ್ಲಿ ಜೋರು ಪ್ರತಿಭಟನೆಗಳನ್ನು ಮಾಡಿ, ಅದಾನಿ ಕಂಪನಿಗಳ ವಿರುದ್ಧ ತನಿಖೆಗೆ ಆದೇಶ ಕೊಡಬೇಕು ಎಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಒತ್ತಾಯ ಮುಂದುವರಿಸಿವೆ. ಇಂದು ಬೆಳಗ್ಗೆ ಕಲಾಪ ಆರಂಭಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಪ್ರಮುಖ ನಾಯಕರು (Opposition Parties Led by Mallikarjuna Kharge) ಸಭೆ ಸೇರಿ ಇವತ್ತಿನ ಕಾರ್ಯತಂತ್ರಗಳು ಹೇಗಿರಬೇಕೆಂದು ನಿರ್ಧಾರ ಮಾಡಿದ್ದರು. ಒಂದು ವೇಳೆ ಅದಾನಿ ವಿರುದ್ಧ ತನಿಖೆಗೆ ಸರ್ಕಾರ ಒಪ್ಪದಿದ್ದರೆ ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆಗಳನ್ನು ನಡೆಸುವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಂದು ಕೂಡ ವಿಪಕ್ಷಗಳ ವಿವಿಧ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆಗೆ ಮನವಿಗಳನ್ನು ಮಾಡಿದರಾದರೂ ಸ್ಪೀಕರ್ ಪುರಸ್ಕಾರ ಸಿಗಲಿಲ್ಲ. ಬೆಳಗಿನ ಅವಧಿಯನ್ನು ಸದ್ಯ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ರಾಜ್ಯಸಭೆಯಲ್ಲಿ ಭಾರತ್ ರಾಷ್ಟ್ರ ಸಮಿತಿಯ ಸಂಸದ ಕೆ ಕೇಶವ ರಾವ್, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಡಿಎಂಕೆ ಸಂಸದ ತಿರುಚಿ ಶಿವ, ಕಾಂಗ್ರೆಸ್ ಸಂಸದರಾದ ಪ್ರಮೋದ್ ತಿವಾರಿ, ಡಾ. ಸಯದ್ ನಾಸೀರ್ ಹುಸೇನ್, ಸಿಪಿಐಎಂ ಸಂಸದ ಇಳಮಾರಂ ಕರೀಮ್ ಅವರು ರೂಲ್ ನಂಬರ್ 267 ಅಡಿಯಲ್ಲಿ ನೋಟೀಸ್ ಜಾರಿ ಮಾಡಿದ್ದರು. ರಾಜ್ಯಸಭಾಧ್ಯಕ್ಷರು ಬೇರೆ ಬೇರೆ ಕಾರಣಗಳನ್ನು ನೀಡಿ ವಿಪಕ್ಷ ಸದಸ್ಯರ ಮನವಿ ತಿರಸ್ಕರಿಸಿದರು.

ಇದನ್ನೂ ಓದಿ: Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೂರ್ ಕೂಡ ಅಡ್ಜರ್ನ್ಮೆಂಟ್ ಮೋಶನ್ ನೋಟೀಸ್ ಕೊಟ್ಟು ಹಿಂಡಲ್ಬರ್ಗ್ ರೀಸರ್ಚ್ ವರದಿ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡುತ್ತಾರೆ. ಆದೂ ಕೂಡ ತಿರಸ್ಕೃತವಾಗುತ್ತದೆ. ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆಗಳನ್ನು ನಡೆಸಿದರು. ನಂತರ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾದರೆ, ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಲಾಯಿತು.

ನಿನ್ನೆ ಗುರುವಾರ ಕೂಡ ಸಂಸತ್ತಿನ ಎರಡೂ ಸದನಗಳಲ್ಲಿ ಕಲಾಪ ಸರಿಯಾಗಿ ನಡೆಯಲಿಲ್ಲ. ವಿಪಕ್ಷಗಳು ಅದಾನಿ ಕಂಪನಿಗಳ ವಿರುದ್ಧ ತನಿಖೆ ಆಗಬೇಕೆಂದು ಹಿಡಿದ ಪಟ್ಟಿಗೆ ಸರ್ಕಾರ ಬಗ್ಗಲಿಲ್ಲ. ಇದರಿಂದ ವಿಪಕ್ಷ ಸದಸ್ಯರು ಗದ್ದಲ ನಡೆಸಿದರು. ಪರಿಣಾಮವಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಲಾಪಗಳನ್ನು ಬಹುತೇಕ ಇಡೀ ದಿನ ಸ್ಥಗಿತಗೊಳಿಸಲಾಯಿತು.

ಇದನ್ನೂ ಓದಿ: ಮುಂಬೈನಲ್ಲಿ ಉಗ್ರ ದಾಳಿ ನಡೆಸುವುದಾಗಿ ಎನ್ಐಎಗೆ ಬೆದರಿಕೆ ಇಮೇಲ್; ವಿವಿಧ ನಗರಗಳಲ್ಲಿ ಕಟ್ಟೆಚ್ಚರ

ಮೊನ್ನೆಯಷ್ಟೇ ಬಜೆಟ್ ಮಂಡನೆಯಾಗಿದ್ದು, ವಿಪಕ್ಷಗಳು ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ಬದಲು ಹಿಂಡನರ್ಬರ್ಗ್ ಅದಾನಿ ಪ್ರಕರಣವನ್ನು ಕೈಗೆತ್ತಿಕೊಂಡು ಸರ್ಕಾರಕ್ಕೆ ಚಾಟಿ ಬೀಸುವ ಪ್ರಯತ್ನ ಮಾಡುತ್ತಿದೆ.

ಏನಿದು ಹಿಂಡನ್ಬರ್ಗ್ ವರದಿ?

ಗೌತಮ್ ಅದಾನಿ ಮಾಲೀಕತ್ವದ ಕಂಪನಿಗಳು ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಕೆ ಮತ್ತು ಇಳಿಕೆ ಮಾಡಿ ವಂಚನೆ ಎಸಗಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯ ವಾಸ್ತವದ್ದಲ್ಲ ಎಂದು ಹಿಂಡನ್ಬರ್ಗ್ ರೀಸರ್ಚ್​ನ ವರದಿ ಹೇಳಿದೆ. ಈ ಸ್ಫೋಟಕ ವರದಿ ಬೆಳಕಿಗೆ ಬರುತ್ತಲೇ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬೀಳತೊಡಗಿವೆ. ಪರಿಣಾಮವಾಗಿ ಲಕ್ಷಾಂತರ ಕೋಟಿಯಷ್ಟು ಹಣವನ್ನು ಅದಾನಿ ಕಳೆದುಕೊಂಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!