ರಾಮನಗರ: ಸರ್ಕಾರವೇ ನಮ್ಮ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ. ಡಿ.ಕೆ. ಶಿವಕುಮಾರ್ ಬಳಿಗೆ ಕೊರೊನಾ ಸೋಂಕಿತನನ್ನ ಕಳಿಸಿದ್ರು. ಡಿ.ಕೆ. ಶಿವಕುಮಾರ್ಗೆ ಸೋಂಕು ಅಂಟಿಸುವ ಕೆಲಸ ಮಾಡ್ತಿದ್ದಾರೆ. ಪಾದಯಾತ್ರೆಯಲ್ಲಿರುವವರಿಗೆ ಸೋಂಕು ಅಂಟಿಸುವ ಕೆಲಸ ಆಗುತ್ತಿದೆ. ಜತೆಗೆ ಈ ಭಾಗದಲ್ಲಿ ಕೊರೊನಾ ಸೋಂಕು ಅಂಟಿಸುವ ಹುನ್ನಾರ ಇದೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾದಪ್ಪನದೊಡ್ಡಿಯಲ್ಲಿ ಟಿವಿ9ಗೆ ಸಂಸದ ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಪರೀಕ್ಷೆ ಮಾಡಲು ಕೊರೊನಾ ಸೋಂಕಿತ ವ್ಯಕ್ತಿ ಕಳುಹಿಸಿದ್ದಾರೆ. ಸೋಂಕು ಉಲ್ಬಣವಾದರೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತೆ. ಇದು ರಾಜಕೀಯ ಷಡ್ಯಂತ್ರವೆಂದು ಸರ್ಕಾರದ ವಿರುದ್ಧ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ. ನಿನ್ನೆ ಡಿ.ಕೆ. ಶಿವಕುಮಾರ್ ಬಳಿಗೆ ಬಂದಿದ್ದ ಅಧಿಕಾರಿ ಕೊರೊನಾ ಸೋಂಕಿತ ಆಗಿದ್ದಾರೆ. ಡಿಕೆಶಿ ತಂಗಿದ್ದ ಟೆಂಟ್ಗೆ ಬಂದಿದ್ದ ಹಿರಿಯ ಅಧಿಕಾರಿ ಸೋಂಕಿತರು ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.
ಡಿಕೆಶಿ ಗಂಟಲುದ್ರವ ಪರೀಕ್ಷೆಗೆ ಬಂದಿದ್ದ ಅಧಿಕಾರಿ ಸೋಂಕಿತ ಎಂದು ಪರೀಕ್ಷೆಗೆ ಬಂದಿದ್ದ ಅಧಿಕಾರಿಯ ಬಗ್ಗೆ ಸುರೇಶ್ ಮಾಹಿತಿ ಪಡೆದಿದ್ದಾರೆ. ಕೊರೊನಾ ಪಾಸಿಟಿವ್ ಅಧಿಕಾರಿ ಬಂದಿದ್ದ ಬಗ್ಗೆ ಸುರೇಶ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ, ಮಧು ಬಂಗಾರಪ್ಪ ವಿಶ್ವಾಸ
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ಎಂಪಿ ರೇಣುಕಾಚಾರ್ಯ; ಬಳಿಕ ಕ್ಷಮೆಯಾಚನೆ
Published On - 4:00 pm, Mon, 10 January 22