Doddaalahalli: ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸರಕಾರಿ ಅರಣ್ಯ ಪ್ರದೇಶ ಗುಳುಂ; ಪ್ರಭಾವಿಗಳ ‘ಕೈ’ವಾಡ ಆರೋಪ

ಕೃಷ್ಣಪ್ಪ ಅವರು ಖರೀದಿ ಮಾಡಿದ ಜಮೀನುಗಳ ಪಕ್ಕದಲ್ಲಿಯೆ ಇರುವ ದೊಡ್ಡಾಲಹಳ್ಳಿ ಗ್ರಾಮದ ಸರ್ವೇ ನಂ 174 ಹಾಗೂ ಚೀಲಂದವಾಡಿ ಅರಣ್ಯದ ಸರ್ವೇ ನಂ 1ರಲ್ಲಿ 4 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿ ಈ ಪ್ರದೇಶದಲ್ಲಿ ಇದ್ದ ಲಕ್ಷಾಂತರ ರೂ ಬೆಲೆ ಬಾಳುವ ಮರಗಳನ್ನು ಕಡಿದು ಸಮತಟ್ಟು ಮಾಡಿ, ಬೋರ್‌ವೆಲ್ ಕೊರೆದು, ಸರಕಾರದ ವಿವಿಧ ಇಲಾಖೆಗಳಿಂದ ಅನುದಾನ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ನಂತರ ಅಕ್ರಮವಾಗಿ ರೆಸಾರ್ಟ್ ಆಗಿ ಪರಿವರ್ತನೆ ಮಾಡಲಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Doddaalahalli: ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸರಕಾರಿ ಅರಣ್ಯ ಪ್ರದೇಶ ಗುಳುಂ; ಪ್ರಭಾವಿಗಳ  ‘ಕೈ’ವಾಡ ಆರೋಪ
ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸರಕಾರಿ ಗೋಮಾಳದಲ್ಲಿ ಅರಣ್ಯ ಪ್ರದೇಶ ಗುಳುಂ; ಪ್ರಭಾವಿಗಳ ‘ಕೈ’ವಾಡ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 14, 2022 | 7:27 PM

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಸರ್ವೇ ನಂ. 174 ಸರಕಾರಿ ಗೋಮಾಳದಲ್ಲಿನ 15 ಎಕರೆ ಮತ್ತು ಚೀಲಂದವಾಡಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಮನವಿ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಕೊಳ್ಳೇಗಾಲ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ದೊಡ್ಡಾಲಹಳ್ಳಿ ಗ್ರಾಮದ ಸರ್ವೇ ನಂ 174 ಹಾಗೂ ಚೀಲಂದವಾಡಿ ಅರಣ್ಯದ ಸರ್ವೇ ನಂ 1ರಲ್ಲಿ 4 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಮರಗಳನ್ನು ಕಡಿದು, ಸಮತಟ್ಟು ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದ್ದು, ತನ್ನ ಜಮೀನಿನಲ್ಲಿ 12.10 ಎಕರೆ ಸೇರಿ ಒಟ್ಟು 31.10 ಎಕರೆ ವಿಸ್ತೀರ್ಣದಲ್ಲಿ ನರೇಗಾ ಯೋಜನೆಯಲ್ಲಿ 90 ಲಕ್ಷ ರೂಪಾಯಿ ದುರಪಯೋಗ ಪಡಿಸಿಕೊಂಡು, ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ (Doddaalahalli Forest encroachment).

ರಸ್ತೆಗಾಗಿ ಕೆರೆಯ ಏರಿ ಒಡೆದು ಕ್ರಿಮಿನಲ್ ಅಪರಾಧವೆಸಗಿರುವ ಕನಕಪುರ ತಾಲೂಕು ಪಂಚಾಯಿತಿ ಹಾಗೂ ದೊಡ್ಡಾಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಇವರ ಮಗ ಪಂಚಾಯತಿ ಸದಸ್ಯ ದೇವರಾಜು, ಮತ್ತು ಪತ್ನಿ ಶಾಂತಮ್ಮ, ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಒತ್ತುವರಿ ಮಾಡಿಕೊಂಡಿರುವ ಸರಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶವನ್ನು ತೆರವುಗೊಳಿಸಬೇಕು. ಅಕ್ರಮಕ್ಕೆ ಸಹಕಾರ ನೀಡುತ್ತಿರುವ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕನಕಪುರ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರು ರಾಜಕೀಯ ಪ್ರವೇಶಕ್ಕೂ ಮುನ್ನಾ ಪಿತ್ರಾರ್ಜಿತವಾಗಿ ಬಂದ 5 ಎಕರೆಯಲ್ಲಿ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಶಾಸಕ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಕೃಪಾಕಟಾಕ್ಷದಿಂದ ರಾಜಕೀಯ ಪ್ರವೇಶದ ಬಳಿಕ, ದೊಡ್ಡಾಲಹಳ್ಳಿ ಹಾಗು ಕನಕಪುರ ತಾಲೂಕು ಅಧ್ಯಕ್ಷರಾದರು. ಈ ಸಮಯದಲ್ಲಿ ದೊಡ್ಡಾಲಹಳ್ಳಿ ಗ್ರಾಮದ ಸ. ನಂ 318/15 5 ಎಕರೆ 34 ಗುಂಟೆ, ಸ. ನಂ. 319ರಲ್ಲಿ 2 ಎಕರೆ 4 ಗುಂಟೆ, ಸ. ವೆ. ನಂ 319/11ರಲ್ಲಿ 1 ಎಕರೆ 25 ಗುಂಟೆ, ತನ್ನ ಹೆಸರಿಗೆ ಮತ್ತು ಸ. ನಂ. 319/4ರಲ್ಲಿ 25 ಗುಂಟೆ, ಸ. ನಂ 319/8ರಲ್ಲಿ 2 ಎಕರೆ 2 ಗುಂಟೆ ಸೇರಿ ಒಟ್ಟು 31 ಎಕರೆ 10 ಗುಂಟೆ ವಿಸ್ತೀರ್ಣದ ಜಮೀನು ಖರೀದಿ ಮಾಡಿದ್ದಾರೆ.