AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ

ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
TV9 Web
| Edited By: |

Updated on: Apr 30, 2022 | 10:21 PM

Share

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, 24 ಗಂಟೆ ಒಳಗೆ ಇಬ್ಬರು ತಹಶೀಲ್ದರ್ ವರ್ಗಾವಣೆಯಾಗಿದೆ. (Transfer)  ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವೇ ಮೇಗಾ ಫೈಟ್ ನಡೆಯುತ್ತಿದ್ದು, ನೆನ್ನೆ ಹೆಚ್​.ಡಿ ಕುಮಾರಸ್ವಾಮಿ ಅಪ್ತರಾಗಿದ್ದ ತಹಶೀಲ್ದರ್ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸಿ.ಪಿ ಯೋಗೇಶ್ವರ್ ಆಪ್ತ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಹೀಗಾಗಿ ಸುದರ್ಶನ್ ನೆನ್ನೆ ತಹಶೀಲ್ದರ್ ಆಗಿ ವರದಿ ಮಾಡಿಕೊಂಡಿದ್ದರು. ಇಂದು ಸುದರ್ಶನ್ ಬಿ.ಕೆ ರನ್ನ ವರ್ಗಾವಣೆ ಮಾಡಿ ಹರ್ಷಾವರ್ಧನ ಜಿ.ಪಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ‌ಜಿಲ್ಲೆ ಕೆ.ಎಸ್.ಎಫ್​.ಸಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ ಜಿ ಪಿ, ಸುದರ್ಶನ್ ರನ್ನ ಕುಟುಂಬ ಇ-ಆಡಳಿತ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಏಪ್ರೀಲ್ 8 ರಂದು ಚನ್ನಪಟ್ಟಣ ತಹಶೀಲ್ದರ್ ಆಗಿದ್ದ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸುದರ್ಶನ್ ನೇಮಕ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ.

10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಪೊಲೀಸ್​ ಮಹಾನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.

ಹೋಳೆಪ್ಪಗೌಡ ಆರ್​​. ಪಾಟೀಲ್-ರಾಯಚೂರು ಪಶ್ಚಿಮ ಗಿರೀಶ್​ ಬಿ.ಸಿ.-ಶಿವಮೊಗ್ಗ ಜಿಲ್ಲೆಯ ಹೊಸನಗರ ಪ್ರವೀಣ್ ಕುಮಾರ್​​-ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಭೀಮಣ್ಣ ಎಂ.ಸೂರಿ-ಬಾಗಲಕೋಟೆ ಗ್ರಾಮಾಂತರ ಧರ್ಮಪ್ಪ ಎನ್.ಜಿ-ಬೆಂಗಳೂರಿನ ಕೆ.ಜಿ.ಹಳ್ಳಿ ಸಂಚಾರಿ ಠಾಣೆ ಅಂಜನ್​ ಕುಮಾರ್​.ಕೆ-ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ ಮಂಜುನಾಥ್​ ಬಿ-ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ ಹರೀಶ್​.ಕೆ ಪಾಟೀಲ್​-ರಾಜ್ಯ ಗುಪ್ತವಾರ್ತೆ ದೀಪಕ್​ ಎಂ.ಎಸ್-ಶಿವಮೊಗ್ಗ ಜಿಲ್ಲೆ ಸಿಇಎನ್​​​​ ಪೊಲೀಸ್ ಠಾಣೆ ರಮೇಶ್​.ಆರ್-ಕರ್ನಾಟಕ ಲೋಕಾಯುಕ್ತ

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ