ನನ್ನ ಮೇಲೆ ಮಧುಗಿರಿ ಋಣ ಇದೆ: ವೀರಭದ್ರಯ್ಯ ಟಿಕೆಟ್ ತಪ್ಪಿಸುವ ವಿಚಾರ ಇಲ್ಲ -ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ

| Updated By: ಆಯೇಷಾ ಬಾನು

Updated on: Oct 09, 2022 | 2:00 PM

ಹೆಚ್​ಡಿ ಕುಮಾರಸ್ವಾಮಿ ಅವರು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ JDS ಟಿಕೆಟ್ ಗೊಂದಲ ಸಂಬಂಧ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದು, ತಾವು ಸ್ಪರ್ಧೆಯಿಂದ ಇಳಿದು ಎಂ.ವೀರಭದ್ರಯ್ಯ ಅವರಿಗೆಯೇ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ.

ನನ್ನ ಮೇಲೆ ಮಧುಗಿರಿ ಋಣ ಇದೆ: ವೀರಭದ್ರಯ್ಯ ಟಿಕೆಟ್ ತಪ್ಪಿಸುವ ವಿಚಾರ ಇಲ್ಲ -ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ
ಹೆಚ್ ಡಿ ಕುಮಾರಸ್ವಾಮಿ
Follow us on

ರಾಮನಗರ: ನನ್ನ ಮೇಲೆ ಮಧುಗಿರಿ ಋಣ ಇದೆ, ಇನ್ನೂ ಋಣ ತೀರಿಸಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಕೆಲಸ ಮಾಡುವುದಕ್ಕೆ ಬಿಡಲಿಲ್ಲ. ನಾನಲ್ಲಿ ಚುನಾವಣೆಗೆ ನಿಲ್ಲಲ್ಲ, ಆರೋಗ್ಯ ಸರಿಯಿಲ್ಲ. ವೀರಭದ್ರಯ್ಯ(MV Veerabhadraiah) ಅವರಿಗೆ ಅಲ್ಲಿ ಟಿಕೆಟ್ ತಪ್ಪಿಸುವ ವಿಚಾರ ಇಲ್ಲ ಎಂದು ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಕನಕಪುರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಭೂಮಿ ಹುಣ್ಣಿಮೆ ಹಿನ್ನೆಲೆ ಹೆಚ್​ಡಿ ಕುಮಾರಸ್ವಾಮಿ ಅವರು ಇಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದಾರೆ. ಕುಮಾರಸ್ವಾಮಿ ಅವರಿಗೆ ಕೆಲ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಈ ವೇಳೆ ಹೆಚ್​ಡಿ ಕುಮಾರಸ್ವಾಮಿ ಅವರು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ JDS ಟಿಕೆಟ್ ಗೊಂದಲ ಸಂಬಂಧ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದು, ತಾವು ಸ್ಪರ್ಧೆಯಿಂದ ಇಳಿದು ಎಂ.ವೀರಭದ್ರಯ್ಯ ಅವರಿಗೆಯೇ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ.

ನನ್ನ ಮೇಲೆ ಮಧುಗಿರಿ ಋಣ ಇದೆ, ಇನ್ನೂ ಋಣ ತೀರಿಸಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಕೆಲಸ ಮಾಡುವುದಕ್ಕೆ ಬಿಡಲಿಲ್ಲ. ಅಲ್ಲಿ ಯಾರು ಉಸ್ತುವಾರಿ ಸಚಿವರಿದ್ರು ಅಂತ ಗೊತ್ತು ನಿಮಗೆ. ಅಲ್ಲಿನ ಸಮಸ್ಯೆ ಬಗೆಹರಿಸುತ್ತೇನೆ, ನೀವು ಗೆದ್ದು ಬರಬೇಕಷ್ಟೇ. ವೀರಭದ್ರಯ್ಯ ಟಿಕೆಟ್ ತಪ್ಪಿಸುವ ವಿಚಾರ ಇಲ್ಲ. ಎಂ.ವೀರಭದ್ರಯ್ಯ ಅವರೇ ಬಂದು ನಿಲ್ಲಲ್ಲ ಎಂದು ಹೇಳಿದರು. ನಾನು ಚುನಾವಣೆಗೆ ನಿಲ್ಲಲ್ಲ, ಆರೋಗ್ಯ ಸರಿಯಿಲ್ಲ. ಮಗ ಮತ್ತು ಪತ್ನಿ ಚುನಾವಣೆಗೆ ನಿಲ್ಲುವುದು ಬೇಡ ಅಂತ ಹೇಳ್ತಾ ಇದ್ದಾರೆ. ಆದರೆ ಈಗ ಗೊಂದಲ ಯಾಕೆ ಆಯ್ತು ಎಂದು ಗೊತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಕೊಡ್ತೇನೆ, ಎಲ್ಲ ಸಮಸ್ಯೆ ಬಗೆಹರಿಸ್ತೇನೆ ಎಂದು ಹೆಚ್​​ಡಿಕೆ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಗ್ರಾಮದಲ್ಲಿ ಸಾಲು ಸಾಲು ಸಾವು: ಅಷ್ಟಮಂಗಲ ಪ್ರಶ್ನೆಯಲ್ಲಿ ದೇಗುಲ ಜೀರ್ಣೋದ್ಧಾರ ಮಾಡುವಂತೆ ದೈವ ನುಡಿ

ರೋಗ ಪತ್ತೆ ಮಾಡಿ ಲಸಿಕೆ ಕೊಡಬೇಕು

ಇನ್ನು ಬೆಂಗಳೂರಿನಲ್ಲಿ ಹೆಚ್​ಡಿಕೆ ಗಂಟು ಚರ್ಮ ರೋಗದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಂಟು ಚರ್ಮ ರೋಗದಿಂದ ಹಸುಗಳು ಸಾಯುತ್ತಿವೆ. ಹಸುಗಳು ಸಾವಿನ‌ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಸು ಸತ್ತರೆ 20 ಸಾವಿರ ಕೊಡುತ್ತೇವೆ ಎಂದು ಹೇಳಿದ್ರು. ಆದ್ರೆ, ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರಿಲ್ಲ. ಇನ್ನು ಹೇಗೆ ನೀವು ರೋಗ ಪತ್ತೆ ಹಚ್ಚುತ್ತೀರಾ? ರೋಗ ಪತ್ತೆ ಮಾಡಿ ಲಸಿಕೆ ಕೊಡಬೇಕು. ಅಲ್ಲದೆ 50 ಸಾವಿರ ಪರಿಹಾರ ಕೊಟ್ಟು ರೈತರಿಗೆ ನೆರವಾಗಿ. ಈ ವಿಚಾರವಾಗಿ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ