ಗ್ರಾಮದಲ್ಲಿ ಸಾಲು ಸಾಲು ಸಾವು: ಅಷ್ಟಮಂಗಲ ಪ್ರಶ್ನೆಯಲ್ಲಿ ದೇಗುಲ ಜೀರ್ಣೋದ್ಧಾರ ಮಾಡುವಂತೆ ದೈವ ನುಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಅಸಹಜ ಸಾವು ಸಂಭವಿಸಿದ್ದು, ಜನರು ಆತಂಕ್ಕೀಡಾಗಿದ್ದಾರೆ, ಹೀಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಅಸಹಜ ಸಾವು ಸಂಭವಿಸಿದ್ದು, ಜನರು ಆತಂಕ್ಕೀಡಾಗಿದ್ದಾರೆ, ಹೀಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಿದ್ದಾರೆ. ದೇಗುಲವನ್ನು ಜೀರ್ಣೋದ್ಧಾರ ಮಾಡುವಂತೆ ದೈವ ನುಡಿದಿದೆ ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿ ಜನರು ಪದೇ ಪದೇ ಸಾವು ಸಂಭವಿಸುತ್ತಿರುವ ಕಾರಣ ಜನರು ಅಷ್ಟಮಂಗಲ ಪ್ರಶ್ನೆ ಕೇಳಿಸಿದ್ದರು.
ಅಸಹಜ ಸಾವು, ನಾಗರಹಾವುಗಳ ಮರಣ, ಗ್ಯಾಸ್ ಸ್ಫೋಟದ ದುರಂತದಲ್ಲಿ ಗ್ರಾಮದ 11 ಮಂದಿ ಮೃತಪಟ್ಟಿದ್ದರು, ಈ ದುರಂತಗಳ ಕುರಿತು ಗ್ರಾಮದ ಜನತೆ ತಲೆ ಕೆಡಿಸಿಕೊಂಡಿತ್ತು. ಅಷ್ಟಮಂಗಲ ಪ್ರಶ್ನೆ ಪ್ರಕಾರ ದೇಗುವ ಜೀರ್ಣೋದ್ಧಾರ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.
ಇದೇ ರೀತಿಯ ಕಥಾ ಹಂದರವಿಟ್ಟುಕೊಂಡು ರಿಷಬ್ ಶೆಟ್ಟಿ ಕಾಂತಾರಾ ಸಿನಿಮಾ ಮಾಡಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಹೊಸ ಛಾಪು ಮೂಡಿಸಿದೆ ಕಾಂತಾರ ಚಿತ್ರ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಕ್ಕೆ ಎಲ್ಲಡೆ ಭಾರಿ ಬೆಂಬಲ ಸಿಗುತ್ತಿದೆ. ಕರಾವಳಿಯ ನಂಬಿಕೆಯ ದೈವಗಳನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಇದೇ ರೀತಿಯ ಕಥೆಯನ್ನು ನೆನಪಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿದೆ.
ಕಾಂತಾರದ ಚರ್ಚೆ ಹಸಿಯಾಗಿರುವಾಗಲೇ ಜಿಲ್ಲೆಯಲ್ಲಿ ಶುರುವಾಗಿದೆ ಈ ಘಟನೆಯ ಚರ್ಚೆ. ಬಂಟ್ವಾಳ ತಾಲೂಕಿನ ಪೆರ್ನೆ ಎನ್ನುವ ಊರಿನಲ್ಲಿ ಈ ಘಟನೆ ನಡೆದಿದೆ. ಕಳೆದ ಸುಮಾರು 500 ವರ್ಷಗಳ ಹಿಂದೆ ಆರಾಧಿಸಲ್ಪಡುತ್ತಿದ್ದ ದೈವಗಳ ನಿರ್ಲಕ್ಷ್ಯವೇ ಈ ದುರಂತಗಳಿಗೆ ಕಾರಣ.
ಅಷ್ಟಮಂಗಲ ಪ್ರಶ್ನೆ ಯಲ್ಲಿ ಹಲವು ಕಡೆಗಳಲ್ಲಿ ಪತ್ತೆ ದೈವಕ್ಕೆ ಸಂಬಂಧಿಸಿದ ಮೂರ್ತಿ, ಕತ್ತಿಗಳು ಪತ್ತೆಯಾಗಿವೆ. ಕಾಡು ತುಂಬಿದ ಸ್ಥಳದಲ್ಲಿ ಮರೆಯಾಗಿದ್ದ ದೇವಸ್ಥಾನವನ್ನು ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಹಾಗೆಯೇ ದೈವದ ಕೋಪವನ್ನು ತಣಿಸಲು ಮುಂದಾಗಿದ್ದಾರೆ.
ದೈವದ ಕುರುಹುಗಳು ಸಿಕ್ಕದ ಜಾಗದಲ್ಲೇ ದೈವಸ್ಥಾನ ಕಟ್ಟಲು ತಯಾರಿ ನಡೆಸಿದ್ದಾರೆ. ಈಗಾಗಲೇ ಎಲ್ಲಾ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ. ಬರುವ ಫೆಬ್ರವರಿ ತಿಂಗಳಿನಲ್ಲಿ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ. ಸಾರ್ವಜನಿಕರಲ್ಲಿ ಚಂದಾ ಎತ್ತಿ ಜೀರ್ಣೋದ್ಧಾರ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ದೈವಸ್ಥಾನದ ಕಾರ್ಯ ಆರಂಭಗೊಂಡ ಬಳಿಕ ನಿಂತ ದುರಂತಗಳು ಕಡಿಮೆಯಾಗಿವೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ