ಹಲಾಲ್ ವಿರುದ್ಧದ ಹೋರಾಟಕ್ಕೆ ಸಮಿತಿ ಸ್ಥಾಪನೆ, ಇಂದು ಮುಂಬೈನಲ್ಲಿ ಹಲಾಲ್ ವಿರೋಧಿ ಸಮಾವೇಶ

ಹಲಾಲ್ ವಿರುದ್ಧ ಜನಜಾಗೃತಿ ಮೂಡಿಸುವುದು ಹಾಗೂ ಹಲಾಲ್ ಮಾಂಸವನ್ನು ಜನರು ಬಹಿಷ್ಕರಿಸುವಂತೆ ಮಾಡುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ.

ಹಲಾಲ್ ವಿರುದ್ಧದ ಹೋರಾಟಕ್ಕೆ ಸಮಿತಿ ಸ್ಥಾಪನೆ, ಇಂದು ಮುಂಬೈನಲ್ಲಿ ಹಲಾಲ್ ವಿರೋಧಿ ಸಮಾವೇಶ
ಸಂಗ್ರಹ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 09, 2022 | 12:45 PM

ಬೆಂಗಳೂರು: ಹಲಾಲ್ ವಿರುದ್ಧದ ಹೋರಾಟವು ಮತ್ತೊಂದು ಮಜಲಿಗೆ ತಲುಪಿದ್ದು, ಮುಂಬೈನಲ್ಲಿ ಇಂದು (ಅ 9) ಸಮಿತಿಯು ಲೋಕಾರ್ಪಣೆಯಾಗಲಿದೆ. ಸಮಿತಿಯು ಇದೇ ಅಕ್ಟೋಬರ್ 16ರಂದು ಕರ್ನಾಟಕದಲ್ಲೂ ಕಾರ್ಯಾರಂಭ ಮಾಡಲಿದೆ. ಹಲಾಲ್ ವಿರುದ್ಧ ಜನಜಾಗೃತಿ ಮೂಡಿಸುವುದು ಹಾಗೂ ಹಲಾಲ್ ಮಾಂಸವನ್ನು ಜನರು ಬಹಿಷ್ಕರಿಸುವಂತೆ ಮಾಡುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ. ನ 10ರಿಂದ 12 ರವರೆಗೆ ಮುಂಬೈನಲ್ಲಿ ರಾಷ್ಟ್ರಮಟ್ಟದ ಹಲಾಲ್ ಸಮಾವೇಶ ನಡೆಯಲಿದೆ. ಮುಸ್ಲಿಂ ಸಂಘಟನೆಗಳು ಆಯೋಜಿಸಿರುವ ಸಮಾವೇಶಕ್ಕೆ ಪ್ರತಿಯಾಗಿ ಇದಕ್ಕೆ ಪ್ರತಿಯಾಗಿ ಹಲಾಲ್ ವಿರೋಧಿ ಹೋರಾಟ ಸಮಿತಿ ರಚಿಸಲಾಗಿದೆ. ಕರ್ನಾಟಕದಲ್ಲಿ ಆರಂಭವಾಗಿದ್ದ ಹಲಾಲ್ ವಿರೋಧಿ ಪ್ರತಿಭಟನೆಯು ಇದೀಗ ರಾಷ್ಟ್ರಮಟ್ಟಕ್ಕೆ ವಿಸ್ತರಿಸಿದೆ. ಇತ್ತೀಚೆಗೆಷ್ಟೇ ಮಹಾನವಮಿ ಸಂದರ್ಭದಲ್ಲಿಯೂ ಹಲಾಲ್​ ವಿರೋಧಿ ಆಂದೋಲನ ಕರ್ನಾಟಕದಲ್ಲಿ ನಡೆದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಹಲಾಲ್ ಸಮಾವೇಶಕ್ಕೆ ಅವಕಾಶ ನೀಡಬಾರದು: ಹಿಂದೂ ಜನಜಾಗೃತಿ ಸಮಿತಿ

ಇಸ್ಲಾಮ್ ಹೆಸರಿನಲ್ಲಿ ದೇಶದಲ್ಲಿ ಪರ್ಯಾಯ ಆರ್ಥಿಕತೆಯನ್ನು ಸೃಷ್ಟಿಸಲಾಗಿದೆ. ಭಾರತದಂಥ ಜಾತ್ಯತೀತ ದೇಶದಲ್ಲಿ ಸರ್ಕಾರವು ‘ಹಲಾಲ್’ ಸಮಾವೇಶವನ್ನು ನಡೆಸಲು ಅವಕಾಶ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯ (Hindu Janajagruti Samiti – HJS) ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಹೇಳಿದರು. ಹಲಾಲ್ ಸಮಾವೇಶ ವಿರೋಧಿಸಿ ಅ 9ರಂದು ಸಂಜೆ 5.30ಕ್ಕೆ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ’ದಲ್ಲಿ ಪರ್ಯಾಯ ಸಮಾವೇಶ ನಡೆಸಲಾಗುವುದು. ಎಲ್ಲ ಹಿಂದೂಗಳೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮುಂಬೈನಲ್ಲಿ ನವೆಂಬರ್ 12 ಮತ್ತು 13ರಂದು ಆಯೋಜಿಸಿರುವ ಹಲಾಲ್ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯು ವಿರೋಧಿಸುತ್ತದೆ. ಈ ಹಿಂದೆ ಹಲಾಲ್​ ಅನ್ನು ಕೇವಲ ಮಾಂಸ ಮಾರಾಟದ ವೇಳೆ ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಹಲಾಲ್ ಪ್ರಮಾಣಪತ್ರವನ್ನು ವಸತಿ ಸಂಕೀರ್ಣಗಳು, ಹೌಸಿಂಗ್ ಸೊಸೈಟಿಗಳು, ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳಿಗೂ ನೀಡಲಾಗುತ್ತಿದೆ. ಹಲಾಲ್ ಪ್ರಮಾಣಪತ್ರಕ್ಕಾಗಿ ಹಿಂದೂಗಳು ಸಾವಿರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

ಆಹಾರ ಪದಾರ್ಥಗಳ ಸುರಕ್ಷತೆ ಖಾತ್ರಿಪಡಿಸಲು ಹಲವು ಏಜೆನ್ಸಿಗಳು ಇವೆ. ಹೀಗಿರುವಾಗ ಖಾಸಗಿ ಸಂಸ್ಥೆಗಳು ಕೊಡುವ ಹಲಾಲ್ ಪ್ರಮಾಣಪತ್ರದ ಅವಶ್ಯಕತೆಯಾದರೂ ಏನಿದೆ? ಹಲಾಲ್ ಸರ್ಟಿಫಿಕೇಶನ್ ಭಾರತ ಸರ್ಕಾರಕ್ಕೇ ಸವಾಲು ಹಾಕಿದೆ. ಇದು ದೇಶದಲ್ಲಿ ಪರ್ಯಾಯ ಆರ್ಥಿಕತೆಯನ್ನು ರೂಪಿಸುತ್ತಿದೆ. ದೇಶದಲ್ಲಿ ಹಲಾಲ್ ಪ್ರಮಾಣದ ಅವಶ್ಯಕತೆಯಾದರೂ ಏನಿದೆ? ಹಲಾಲ್ ಸಮಾವೇಶಕ್ಕೆ ಅವಕಾಶ ನೀಬಾರದು ಎಂದು ಆಗ್ರಹಿಸಿದರು.

ಹಲಾಲ್ ಸಮಾವೇಶ ಆಯೋಜಿಸುವುದಲ್ಲಿ ಎಲ್ಲ ಹಿಂದೂ ಪರ ಸಂಘಟನೆಗಳೂ ವಿರೋಧಿಸಿವೆ. ಹಲಾಲ್ ವಿರೋಧಿ ಸಮಾವೇಶವನ್ನು ಸಾವರ್ಕರ್ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹಲಾಲ್ ವಿರುದ್ಧದ ಹೋರಾಟ ಹೇಗಿರಬೇಕು ಎಂಬ ಬಗ್ಗೆ ಈ ಸಮಾವೇಶದಲ್ಲಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ಘೋಷಿಸಿದರು.