AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ : ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಸಸ್ಪೆಂಡ್

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಸ್ಪೆಂಡ್ ಮಾಡಿದ್ದಾರೆ.

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ : ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಸಸ್ಪೆಂಡ್
ಬದಾಮಿ ಸಿಪಿಐ ಸಸ್ಪೆಂಡ್​​
TV9 Web
| Updated By: ವಿವೇಕ ಬಿರಾದಾರ|

Updated on:Oct 09, 2022 | 4:33 PM

Share

ಬಾಗಲಕೋಟೆ: ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಸ್ಪೆಂಡ್ ಮಾಡಿದ್ದಾರೆ. ಸೆ.6ರಂದು ಕೆರೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದರು. ಇದರಿಂದ ಜಗದೀಶ್ ಕಾರಂತ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಿಪಿಐ ವಿರುದ್ಧ ಕೆರೂರು ಚಲೋ ನಡೆಸಿದರು. ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಗೆ ಮಣಿದು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಿಪಿಐನ್ನು ಅಮಾನತುಗೊಳಿಸಿದ್ದಾರೆ.

ಯಶಸ್ಸಿನ ಕೀರ್ತಿಯನ್ನು, ಒಟ್ಟು ಸಮಾಜಕ್ಕೆ ಸಮರ್ಪಿಸುವದಕ್ಕೆ ಇಷ್ಟಪಡುತ್ತೇನೆ: ಜಗದೀಶ ಕಾರಂತ್  

ಈ ಕುರಿತು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತದ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಬಾಗಲಕೋಟೆಯಲ್ಲಿ ಜಗದೀಶ ಕಾರಂತ್  ಮಾತನಾಡಿ ಈಗ ಸಿಕ್ಕಿರುವ ಭಾಗಶಃ ಯಶಸ್ಸಿನ ಕೀರ್ತಿಯನ್ನು, ಒಟ್ಟು ಸಮಾಜಕ್ಕೆ ಸಮರ್ಪಿಸುವದಕ್ಕೆ ಇಷ್ಟಪಡುತ್ತೇನೆ.  ಇಡೀ ಸಮಾಜ ಒಂದಾಗಿ, ಅದರಲ್ಲೂ ವಿಶೇಷವಾಗಿ ಕೆರೂರಿನ ಜನತೆ  ಮತ್ತು ಹಿಂದೂ ಸಮಾಜ ಪಕ್ಷಾತೀತವಾಗಿ ಹಾಗೂ ವರ್ಗ ರಹಿತವಾಗಿ ಹೋರಾಟದ ರಣರಂಗಕ್ಕೆ ಧುಮುಕಿದ್ದು ಈಗ ಇತಿಹಾಸ. ವಿಶೇಷವಾಗಿ ಕೆರೂರಿನ ನೂರಾರು ಮಹಿಳೆಯರು ಸಹ, ತಮ್ಮೂರಿನ ಯುವಕರ ಮೇಲೆ ನಡೆದ ದೌರ್ಜನ್ಯದ ವಿರುದ್ದ, ಧ್ವನಿಯನ್ನು ಎತ್ತಿರುವುದು ನಮ್ಮ ಹೋರಾಟಕ್ಕೆ ಪ್ರಭಲ ಶಕ್ತಿ ಸಿಕ್ಕಿದೆ ಎಂದು ಹೇಳಿದರು.

ಜಿಲ್ಲೆಯ ಜನತೆ ಯಾವುದೇ ರಾಜಕೀಯ ಅಪಸ್ವರಗಳಿಗೆ, ಒಳಗಾಗದೇ ಅಪಸ್ವರ ವ್ಯಕ್ತಪಡಿಸದೇ, ಒಟ್ಟಾಗಿ ಈ ಹೋರಾಟವನ್ನು ಬೆಂಬಲಿಸಿರುವುರು ಕಂಡುಬಂತು. ಜಿಲ್ಲೆಯ ವಿಧಾನಸಭಾ, ವಿಧಾನಪರಿಷತ್‌ನ ಸದಸ್ಯರು, ಭಾರತೀಯ ಜನತಾ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಸರ್ಕಾರದ ಮೇಲೆ, ನಿರಂತರ ಒತ್ತಡ ಹೇರಿ, ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿ, ತಪ್ಪಿತಸ್ಥ ಅಧಿಕಾರಿಯನ್ನ ಶಿಕ್ಷಿಸುವ ದಿಕ್ಕಿನಲ್ಲಿ, ದಿಟ್ಟ ಕ್ರಮಕ್ಕೆ ಕೈ ಹಾಕಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಾಗಾಗಿ ಈ ಹೋರಾಟದ ಯಶಸ್ಸಿನ ಎಲ್ಲಾ ಹಿರಿಮೆಯನ್ನು, ಈ ರೀತಿ ಹೋರಾಟವನ್ನ ಬೆಂಬಲಿಸಿದಂತಹ ಸರ್ವರಿಗೂ ಒಪ್ಪಿಸಿ, ಅವರೆಲ್ಲರಿಗೂ ಹಿಂದೂ ಜಾಗರಣ ವೇದಿಕೆ ಕೃತಜ್ಞತೆ ಸಲ್ಲಿಸುತ್ತದೆ. ಅದೇ ರೀತಿ ನಮ್ಮ ಉಳಿದಿರುವ ಬೇಡಿಕೆಗಳು, ಯಾವ ಯಾವ ಅಧಿಕಾರಿ ಮತ್ತು  ಸಿಬ್ಬಂಧಿ ಅಮಾಯಕ ಯುವಕರ ಮೇಲೆ, ಅಮಾನುಷವಾದ ದೌರ್ಜನ್ಯ ಎಸಗಿದರೂ, ಆ ಎಲ್ಲಾ ಅಧಿಕಾರಿಗಳ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯುವಕರ ಕೈಯಿಂದ ಸುಮಾರು ೧೦ ಸಾವಿರ ರೂ ನಗದು, ಮೊಬೈಲ್ ಒಂದು ಬೆಳ್ಳಿ ಚೈನ್ ಹಾಗೂ ಬೆಳ್ಳಿ ಕಡಗ ಠಾಣೆಯಲ್ಲಿ ತೆಗೊಂಡಿದ್ದಾರೆ. ಯಾರು ತಗೊಂಡಿದ್ದಾರೆ ಅದು ಗೊತ್ತಿಲ್ಲ. ಅದನ್ನ ದೂರಿನಲ್ಲಿ ಹೆಸರಿಸಿದ್ದಾರೆ. ಆ ಯುವಕರಿಗೆ ನಗದು ಹಾಗೂ ಮೋಬೈಲ್,ಚೈನ್, ಕಡಗವನ್ನ, ಜಿಲ್ಲಾ ಪೊಲೀಸ್ ಅಧಿಕಾರಿಗಳು ತಕ್ಷಣ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಹಿನ್ನೆಲೆ

ಸೆ. 6 ರಂದು  ಗಣೇಶ ಮೂರ್ತಿ ವಿಜಸರ್ಜನೆ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು.  ಮೆರವಣಿಗೆ ವೇಳೆ ಸಿಪಿಐ ಕರಿಯಪ್ಪ ಬನ್ನೆ ಮತ್ತು ಕಾನ್ಸ್​​ಟೇಬಲ್​ ಸುರೇಶ್​ ಮತ್ತು ರಮೇಶ್ ಮೇಲೆ ಹಲ್ಲೆ ಮಾಡಿದ್ದರು.  ಬೇಗ ಗಣೇಶ ಮೆರವಣಿಗೆ ಸಾಗಿಸಿ ಎಂದು ಹೇಳಿದ್ದಕ್ಕೆ ಸಿಪಿಐ ಸೇರಿದಂತೆ ಇಬ್ಬರು ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಶರಣು ಸಜ್ಜನ, ಮಹಾಂತೇಶ್ ಪಟ್ಟಣಶೆಟ್ಟಿ, ಸಿದ್ದೇಶ್, ಸಚಿನ್, ಗಂಗಾಧರ, ಬಸವರಾಜ ಸೇರಿದಂತೆ 11 ಜನರ ವಿರುದ್ಧ ಹಲ್ಲೆ ನಡೆಸಿದ ಆರೋಪವಿತ್ತು. ಪ್ರಕರಣ ಸಂಬಂಧ ಆರು ಆರೋಪಿಗಳನ್ನ  ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿ ಬಾದಾಮಿ ಠಾಣೆಗೆ ಕರೆ ತಂದು, ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಗಳು ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ದೂರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Sun, 9 October 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?