ರಾಮನಗರ: ಅನೈತಿಕ ಸಂಬಂಧ ಆರೋಪ ಹಿನ್ನೆಲೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತೇರಿನದೊಡ್ಡಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಜಗದೀಶ್ ಹತ್ಯೆಯಾದ ಯುವಕ.
ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಜಗದೀಶ್, ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ವೇಳೆ ಕೊಲೆ ಮಾಡಲಾಗಿದೆ. ಇದೇ ಗ್ರಾಮದ ರಾಮು ಎಂಬ ವ್ಯಕ್ತಿಯ ಪತ್ನಿ ಜೊತೆ ಜಗದೀಶ್ ಅನೈತಿಕ ಸಂಬಂಧ ಹೊಂದಿದ್ದನಂತೆ. ಹೀಗಾಗಿ ರಾಮು(32) ಜಗದೀಶ್ ಬೆಂಗಳೂರಿನಿಂದ ಗ್ರಾಮಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಕೊಲೆ ಮಾಡಲು ಮುಂದಾಗಿದ್ದಾನೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ನಿನ್ನೆ ರಾತ್ರಿ ಕಿಚ್ಚು ಹಾಯಿಸಿದ ನಂತರ ಜಗದೀಶ್ನನ್ನು ರಾಮು ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4-5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
4-5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ತಬ್ರೇಜ್ ಪಾಷಾ ಅಲಿಯಾಸ್ ಛೋಟಾ ಟೈಗರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ, ಸುಲಿಗೆ, ದರೋಡೆ ಪ್ರಕರಣಗಳ ಆರೋಪಿ ತಬ್ರೇಜ್ ಪಾಷಾ ವಿರುದ್ಧ 16 ಪ್ರಕರಣಗಳು ಇವೆ. ಹಾಗೂ ಈತ 2 ಮದುವೆ ಸಹ ಆಗಿದ್ದಾನೆ. ಹೆಲ್ಮೆಟ್ ಹಾಕಿಕೊಂಡು ಸುಲಿಗೆ ಮಾಡೋದು ಈತನ ಸ್ಟೈಲ್.
ಆರೋಪಿ ತಬ್ರೇಜ್ ಡಿಸೆಂಬರ್ 17ರಂದು ಬೇಕರಿಗೆ ನುಗ್ಗಿ ಸುಲಿಗೆ ಮಾಡಿದ್ದ. ಫೈನಾನ್ಸ್ ಹಣ ಕಲೆಕ್ಟ್ ಮಾಡಲು ಬಂದಿದ್ದ ಏಜೆಂಟ್ ನಿಂದ 28 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದ. 2017 ರಲ್ಲಿ ಆರ್.ಟಿ ನಗರದಲ್ಲಿ ಅರೆಸ್ಟ್ ಅಗಿದ್ದ. ಆ ನಂತರದಿಂದ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡಿದ್ದ. ರಾಬರಿ ಯಾರನ್ನು ಬಳಸಿಕೊಳ್ಳದೇ ಒಬ್ಬನೆ ಮಾಡ್ತಾನೆ. ಮಾಹಿತಿಗೆ ಮಾತ್ರ ಬೇರೆ ಹುಡುಗರ ಬಳಸಿಕೊಳ್ತಾನೆ. ನಗರದ ಕೆ.ಜಿ ಹಳ್ಳಿ , ಡಿ.ಜೆ ಹಳ್ಳಿ, ಜೆಸಿ ನಗರ ಭಾಗದಲ್ಲಿ ಮೈಕ್ರೊ ಫೈನಾನ್ಸ್ ಗಳನ್ನೆ ಟಾರ್ಗೆಟ್ ಮಾಡ್ತಿದ್ದ. ಇಪ್ಪತೈದು ಮೂವತ್ತು ಫೈನಾನ್ಸ್ ಗಳ ಬಳಿ ಮಂತ್ಲಿ ಫಿಕ್ಸ್ ಮಾಡಿಕೊಂಡಿದ್ದ. ಮಂತ್ಲಿ ಕೊಡಲ್ಲಾ ಅಂದವರ ಮೇಲೆ ಅಟ್ಯಾಕ್ ಮಾಡ್ತಿದ್ದ. ಡಿಸೆಂಬರ್ 17 ರಂದು ಮಂಜುನಾಥ್ ಎಂಬ ಕಲೆಕ್ಷನ್ ಏಜೆಂಟ್ ಗೆ ಹೆದರಿಸಿ ಹಣ ಕಿತ್ತುಕೊಂಡಿದ್ದ. ಚಾಕು ತೋರಿಸಿ ಅವನ ಬಳಿ ಇದ್ದ ಇಪ್ಪತ್ತೇಳು ಸಾವಿರ ಹಣ ದೋಚಿದ್ದ. ಹೆಬ್ಬಾಳ, ವಿದ್ಯಾರಣ್ಯಪುರ, ಯಶವಂತಪುರ ಸೇರಿ ಹಲವೆಡೆ ಇದೇ ರೀತಿ ಕೃತ್ಯ ಎಸಗಿದ್ದ. ನಗರದಲ್ಲಿ ಪೊಲೀಸರು ಬೆನ್ನು ಹತ್ತಿದ್ದಾರೆ ಅಂದ್ರೆ ಮೈಸೂರು ಹೋಗ್ತಿದ್ದ. ಸದ್ಯ ಈಗ ಪೊಲೀಸರು ಆರೋಪಿ ತಬ್ರೇಜ್ನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ