2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ: ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ ಸಿ.ಪಿ.ಯೋಗೇಶ್ವರ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2022 | 3:15 PM

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಅವರು ಬಿಜೆಪಿಗೆ ಧನ್ಯವಾದ ಹೇಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ಮಾಡಿದರು.  

2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ: ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ ಸಿ.ಪಿ.ಯೋಗೇಶ್ವರ್
ಹೆಚ್​​.ಡಿ.ಕುಮಾರಸ್ವಾಮಿ ,ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್
Follow us on

ರಾಮನಗರ: ನನಗೆ ಮಾತೃ ಪಕ್ಷ ಬಿಜೆಪಿ(BJP). ನಾನು 2023ಕ್ಕೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇನೆ. ನಮ್ಮ ಕ್ಷೇತ್ರ ಅಭಿವೃದ್ಧಿ ಆಗಿರೋದು ಬಿಜೆಪಿಯಿಂದ. ನನಗೆ ವೈಯಕ್ತಿಕವಾಗಿ ಬಿಜೆಪಿ ಪಕ್ಷದಿಂದ ಹೆಸರುಗಳಿಸಿದ್ದೇನೆ. 2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಪಕ್ಷ ಅಧಿಕಾರಕ್ಕೆ ತಂದ ಬಳಿಕ ಮಂತ್ರಿ ಆಗಬೇಕು ಎಂದು ಸಿ.ಪಿ.ಯೋಗೇಶ್ವರ್ (C P Yogeshwar) ತಿಳಿಸಿದರು. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಕುಮಾರಸ್ವಾಮಿ ಕೂಡ ಬಿಜೆಪಿಗೆ ಧನ್ಯವಾದ ಹೇಳಬೇಕು. ಬಿಜೆಪಿಯಿಂದ ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ಆಗಿದ್ದು ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ಹೇಳಿದರು. ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಹೆಚ್​ಡಿಕೆ ಮುಂದಾಗಿದ್ದಾರೆ. ಹೆಚ್​​ಡಿಕೆ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಮತ ಹಾಕಿಸಿಕೊಂಡಿದ್ದಾರೆ. ನನ್ನನ್ನು ತೀರಿಸುವವರು, ಉಳಿಸುವವರು ನನ್ನ ಕ್ಷೇತ್ರದ ಮತದಾರರು. 2023ಕ್ಕೆ ರಾಮನಗರ, ಚನ್ನಪಟ್ಟಣ ಕ್ಷೇತ್ರ ಜನ ತಕ್ಕ ಉತ್ತರ ಕೊಡುತ್ತಾರೆ. ಚುನಾವಣೆ ಬಂದರೆ ಕಣ್ಣೀರು ಹಾಕಿ, ಇದೇ ಕೊನೆ ಚುನಾವಣೆ ಅಂತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಪೂರ್ಣಾವಧಿ ಸರ್ಕಾರ ನಡೆಸಿದ ಬಳಿಕ ನಡೆದಿರುವ ಚುನಾವಣೆಗಳಲ್ಲೆಲ್ಲ ಕಾಂಗ್ರೆಸ್ ದಯನೀಯವಾಗಿ ನೆಲಕಚ್ಚಿದೆ: ಹೆಚ್ ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಅವರು ಹಗಲುಕನಸು ಕಾಣೋದು ಬಿಡಬೇಕು

ನೀವು ಪಂಚರತ್ನ ಮಾಡ್ತಾ ಇದ್ದೀರಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರ್​ಟಿಇನಲ್ಲಿ ಅವಕಾಶ ಇತ್ತು. ಅದನ್ನು ತೆಗೆದುಹಾಕಿದ್ದೇ ಇದೇ ಕುಮಾರಸ್ವಾಮಿ. ಇವಾಗ ಏನೋ ಪುಂಗ್ತಾ ಇದ್ದಾರಲ್ಲ ಅದೆಲ್ಲಾ ಸುಳ್ಳು. ಚುನಾವಣೆ ಬಂದರೆ ಕಣ್ಣೀರು ಹಾಕಿ, ಇದೇ ಕೊನೆ ಚುನಾವಣೆ ಅಂತಾ ಹೇಳುತ್ತಾರೆ. ಕುಮಾರಸ್ವಾಮಿ ಅವರು ಹಗಲುಕನಸು ಕಾಣೋದು ಬಿಡಬೇಕು ಎಂದರು. ಕುಮಾರಸ್ವಾಮಿ ಕೆಲವೊಂದು ಕಮಿಟ್ ಮೆಂಟ್​ಗಳಿಗೆ ಫಿಕ್ಸ್ ಆಗಿದ್ದಾರೆ. ಅದನ್ನು ಅವರು ಬದಲಾವಣೆ ಮಾಡಿಕೊಳ್ಳೊದಿಲ್ಲ. ಚನ್ನಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಒಂದೇ ಒಂದು ಹಾರ ಹಾಕೋದಿಲ್ಲ ಗೌರವ ನೀಡೊದಿಲ್ಲ. ಕಳೆದ ವಾರ ಬಿಎಸ್​ಪಿ ಜೊತೆ ಸೇರಿಕೊಂಡು ದಲಿತ ಮತಗಳನ್ನು ಹಾಕಿಸಿಕೊಂಡಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಡಿ.19ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ನಿಖಿಲ್, ಜಿಟಿಡಿ ಕುಟುಂಬಕ್ಕೆ 2 ಟಿಕೆಟ್ ಸಿಗುತ್ತಾ?

ವಂಶಪಾರಂಪರ್ಯಕ್ಕೆ ತೀಲಾಂಜಲಿ ಹಾಕೋದೆ ಬಿಜೆಪಿ

ಕುಟುಂಬ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವಂಶಪಾರಂಪರ್ಯಕ್ಕೆ ತೀಲಾಂಜಲಿ ಹಾಕೋದೆ ಬಿಜೆಪಿಯ ಅಜೆಂಡಾ. ನಮ್ಮ ಪಕ್ಷದಲ್ಲೂ ಕೆಲವೊಂದು ಸಂದರ್ಭಕ್ಕೆ ಯೋಗ್ಯತೆ ಅನುಗುಣವಾಗಿ ಟಿಕೆಟ್ ಕೊಡುತ್ತಾರೆ. ಆದರೆ ಜೆಡಿಎಸ್ ಪಕ್ಷದಲ್ಲಿ ರಾಜ ಮನೆತನ ರೀತಿ, ಅವರದೇ ಕುಟುಂಬವನ್ನು ಜೆಡಿಎಸ್ ಪಕ್ಷದಲ್ಲಿ ಮುಂದುವರಿಸುತ್ತಾರೆ. ಮುಸ್ಲಿಂ ಮುಖಂಡರು ಬಿಜೆಪಿಗೆ ಧಿಕ್ಕಾರ ಕೂಗಿದ ವಿಚಾರಕ್ಕೆ ನಮ್ಮ‌ ಪಕ್ಷ ಏನು ಮುಸ್ಲಿಂ ವಿರೋಧಿ ಅಲ್ಲ. ನಾವೆಲ್ಲಾ ಭಾರತೀಯರು ಎಲ್ಲಾ ಸಮುದಾಯದವರನ್ನು ನಾವು ಒಗ್ಗೂಡಿಸುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Thu, 22 December 22