ಪಿಎಫ್​ಐನ ಸಮಾಜಘಾತುಕ ಕೃತ್ಯವನ್ನು ಜನತೆ ಮುಂದಿಡಿ: ಇಲ್ಲವೆಂದರೆ ಸರ್ಕಾರದ ಮೇಲೆ ಅಪನಂಬಿಕೆ ಬರುತ್ತೆ: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ 150ಕ್ಕೂ ಹೆಚ್ಚು PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಬಂಧಿತರ ಹಿನ್ನೆಲೆ, ಸಮಾಜ ವಿರೋಧಿ ಕೃತ್ಯದ ಬಗ್ಗೆ ತಿಳಿಸಿ. ಕಾನೂನು ಬಾಹಿರ ಚಟುವಟಿಕೆ ಜನರ ಮುಂದೆ ಇಡಬೇಕು.

ಪಿಎಫ್​ಐನ ಸಮಾಜಘಾತುಕ ಕೃತ್ಯವನ್ನು ಜನತೆ ಮುಂದಿಡಿ: ಇಲ್ಲವೆಂದರೆ ಸರ್ಕಾರದ ಮೇಲೆ ಅಪನಂಬಿಕೆ ಬರುತ್ತೆ: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 28, 2022 | 3:23 PM


ರಾಮನಗರ: ಇಂದು ಬೆಳಗ್ಗೆ ಕೇಂದ್ರ ಸರ್ಕಾರ ಪಿಎಫ್​ಐ ಬ್ಯಾನ್ (PFI Ban)​ ಮಾಡಿದೆ. ಸಂಘಟನೆ ನಿಷೇಧಿಸಿದ್ರೆ ಸಮಾಜ ಘಾತುಕ ಕೆಲಸಗಳು ನಿಲ್ಲಲ್ಲ. ಸಮಾಜ ಘಾತುಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು ಎಂದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ರಾಜ್ಯದಲ್ಲಿ 150ಕ್ಕೂ ಹೆಚ್ಚು PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಬಂಧಿತರ ಹಿನ್ನೆಲೆ, ಸಮಾಜ ವಿರೋಧಿ ಕೃತ್ಯದ ಬಗ್ಗೆ ತಿಳಿಸಿ. ಕಾನೂನು ಬಾಹಿರ ಚಟುವಟಿಕೆ ಜನರ ಮುಂದೆ ಇಡಬೇಕು. ಜನರ ಮುಂದೆ ನೀವು ಇಡಲಿಲ್ಲ ಅಂದರೆ ಸರ್ಕಾರದ ಮೇಲೆ ಅಪನಂಬಿಕೆ ಬರುತ್ತದೆ. ಯಾವುದೇ ಸಂಘ ಸಂಸ್ಥೆಗಳು ಈ ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಜವಾಬ್ದಾರಿ. ಪಿಎಫ್​ಐನ ಕಾರ್ಯಕರ್ತರ ಬಂಧನ ಏನಿದೆ. ಅವರ ಬ್ಯಾಗ್ ಗ್ರೌಂಡ್, ಆಂಟಿ ಸೋಷಿಯಲ್ ಆಕ್ಟಿವಿಟಿ ಏನಿದೆ ಎಂಬುದನ್ನ ಜನರ ಮುಂದೆ ಇಡಬೇಕು. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಗಳನ್ನು 5 ವರ್ಷ ಬ್ಯಾನ್  ಮಾಡಿದ್ದೀವಿ ಅಂತಾ ಸರ್ಕಾರ ಹೇಳಬಹುದು. ಸಮಾಜ ಘಾತುಕ ಶಕ್ತಿಗಳ ಹಿನ್ನೆಲೆ ಏನಿದೆ ಅಲ್ವಾ ಎಂದು ಪ್ರಶ್ನಿಸಿದರು. ಈ ರೀತಿಯ ವಾತಾವರಣ ನಿರ್ಮಾಣ ಆಗೋಕೆ ಕಾರಣ ಏನಿದೆ ಎಂಬುದನ್ನು ತಿಳಿಯಬೇಕು. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಈ ರಾಜ್ಯದಲ್ಲಿ ಯಾವುದೇ ರೀತಿಯ ಸಂಘರ್ಷಗಳು ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲರ ವಿಶ್ವಾಸಗಳಿಸಿ ಎಲ್ಲರ ಪರವಾಗಿ ನಾವು ಇದ್ದೇವೆ ಎಂಬ ಸಂದೇಶ ಸಾರಬೇಕು.

ಈ ದೇಶ ಯಾವಾಗ ಛಿದ್ರ ಆಗಿದೆ ಅಂತಾ ಗೊತ್ತಿಲ್ಲ:

ಭಾರತ ಯಾವಾಗ ಒಡೆದು ಹೋಗಿದೆ ಅನ್ನೋದು ನನಗೆ ಗೊತ್ತಿಲ್ಲ. ಭಾರತ ಜೋಡೊ ಮುಖಾಂತರ ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಯಾವಾಗ ಈ ದೇಶ ಛಿದ್ರ ಆಗಿದೆ ಅಂತಾ ಗೊತ್ತಿಲ್ಲ. ಛಿದ್ರ ಆಗಿದ್ರೆ ಈ ಕಾರ್ಯಕ್ರಮದ ಮುಖಾಂತರ ಅದನ್ನು ಯಾವ ರೀತಿ ಸರಿಪಡಿಸುತ್ತಾರೋ ಅನ್ನೋದನ್ನ ಜನರ ಮುಂದೆ ಇಡಬೇಕು. ನಮಗೆ ಬೇಕಾಗಿರೋದು, ನಮ್ಮ ಜನರ ಬದುಕನ್ನು ಕಟ್ಟಿಕೊಡಬೇಕು. ಕಳೆದ ಮಳೆಯ ಅನಾಹುತದಿಂದಾಗಿ ನಮ್ಮ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಬೇಕು. ಇವರು ಕೊಡುವ ಪರಿಹಾರದಿಂದ ಅವರು ಬದುಕಲು ಸಾಧ್ಯಾನಾ? ನಗರ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ತೊಂದರೆಗಳು, ಕೈಗಾರಿಕೆಗಳಿಗೆ ಆಗಿರುವ ತೊಂದರೆಯಿಂದ ಎಲ್ಲರೂ ಬೀದಿಗೆ ಬಿದ್ದಿದ್ದಾರೆ. ಇಂತಹ ವಿಷಯಗಳಲ್ಲಿ‌ ಸರ್ಕಾರ ಕ್ರಮ ವಹಿಸಬೇಕು, ರೈತರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ ಅದರ ವಿರುದ್ದ ನಾವು ಹೋರಾಡಬೇಕು. ಪೇ ಸಿಎಂ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯನಾ ಎಂದು ಪ್ರಶ್ನಿಸಿದರು.


ದಾಖಲೆ ನೀಡಿದರು ಒಬ್ಬರು ಮಾತನಾಡಲಿಲ್ಲ:

ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಭ್ರಷ್ಟಾಚಾರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದನದ ಮುಂದೆ ಎಲ್ಲಾ ದಾಖಲೆಗಳನ್ನು ಇಟ್ಟಿದ್ದೇನೆ. ಭಂಡ ಬಿದ್ದಿರೋ‌ ಸರ್ಕಾರ. ಮುಖ್ಯಮಂತ್ರಿಗಳ‌ ಸಮೇತ, ಒಬ್ಬ ಮಂತ್ರಿ ಕೂಡ ಮಾತನಾಡಿಲಿಲ್ಲ. ದಾಖಲೆ ನೀಡಿದ್ರೆ ಒಬ್ಬರು ಮಾತನಾಡಲಿಲ್ಲ. ಅವರಿಗೆ ನೈತಿಕತೆ ಇಲ್ಲ. ಎಲ್ಲರೂ ತಲೆ ತಗ್ಗಿಸಿಕೊಂಡು ಕೂತಿದ್ರು. ಅದಕ್ಕೆ ನಾನು ಒಂದು ಉದಾಹರಣೆ ಕೊಟ್ಟಿದ್ದೆ. ಪಗಡೆ ಆಟದಲ್ಲಿ ಪಣ ಇಟ್ಟು ಧರ್ಮರಾಯ ಸೋತ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯ ಸೇರಿದಂತೆ ಎಲ್ಲರೂ ಮೂಕವಿಸ್ಮಿತವಾಗಿ ಕೂತಿದ್ರಲ್ಲ, ಅದೇ ಪರಿಸ್ಥಿತಿ ನಾನು ಅವತ್ತು ದಾಖಲೆ ಬಿಡುಗಡೆ ಮಾಡಿದ್ದಾಗ ಸದನದಲ್ಲಿ ಕಂಡಿತ್ತು. ಪಬ್ಲಿಕ್ ಟ್ರಸ್ಟ್​ನ್ನು ಸರ್ಕಾರದ ಆಸ್ತಿಯನ್ನು ಯಾರೊ ಒಬ್ಬರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಅದೆಷ್ಟು ಕೋಟಿ ತಗೊಂಡಿದ್ದಾರೋ ಗೊತ್ತಿಲ್ಲ ತನಿಖೆ ಮಾಡಿದ್ರೆ ಗೊತ್ತಾಗುತ್ತದೆ. ನಾನು ಇಟ್ಟಂತಹ ಯಾವುದೇ ದಾಖಲೆಗಳಿಗೂ ಸರ್ಕಾರ ಸಮಜಾಯಿಷಿ ಕೊಡಲಿಲ್ಲಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada