ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ತಪ್ಪೊಪ್ಪಿಕೊಂಡ ಡಾ.ಮೃತ್ಯುಂಜಯಶ್ರೀ

| Updated By: ಆಯೇಷಾ ಬಾನು

Updated on: Nov 03, 2022 | 11:01 AM

ಮಾಗಡಿ ಠಾಣೆ ಪೊಲೀಸರು ಕಳೆದ 3 ದಿನದಿಂದ ಮೃತ್ಯುಂಜಯಶ್ರೀ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ.

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ತಪ್ಪೊಪ್ಪಿಕೊಂಡ ಡಾ.ಮೃತ್ಯುಂಜಯಶ್ರೀ
ಯುವತಿ ನೀಲಾಂಬಿಕೆ ಮತ್ತು ಕಣ್ಣೂರು ಮಠದ ಸ್ವಾಮೀಜಿ
Follow us on

ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ(Bande Mutt Swamiji) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಮಠದ ಡಾ.ಮೃತ್ಯುಂಜಯ ಸ್ವಾಮೀಜಿಯವರು ತಪ್ಪೊಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ಡಾ.ಮೃತ್ಯುಂಜಯಶ್ರೀ ತಪ್ಪೊಪ್ಪಿಕೊಂಡಿದ್ದಾರೆ.

ಮಾಗಡಿ ಠಾಣೆ ಪೊಲೀಸರು ಕಳೆದ 3 ದಿನದಿಂದ ಮೃತ್ಯುಂಜಯಶ್ರೀ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಬೇರೆ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ 2ನೇ ಆರೋಪಿ ನೀಲಾಂಬಿಕೆ ಅಲಿಯಾಸ್ ಚಂದು ಮೊಬೈಲ್ ಜ್ಞಾನಕ್ಕೆ ಪೊಲೀಸರೇ ಶಾಕ್​ ಆಗಿದ್ದಾರೆ. ನೀಲಾಂಬಿಕೆ ಮೊಬೈಲ್ ಫೋನ್​​ ಬಗ್ಗೆ ಅಪಾರ ಜ್ಞಾನಹೊಂದಿದ್ದರು. ಈಕೆ 6 ತಿಂಗಳ ಮೊಬೈಲ್ ಡೇಟಾ ಡಿಲೀಟ್​ ಮಾಡಿದ್ದಾಳೆ. ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ನಾಶಪಡಿಸಿರುವ ಅನುಮಾನ ಕೂಡ ವ್ಯಕ್ತವಾಗಿದೆ. ಪ್ರಸ್ತುತ ಹೊಸ ಮೊಬೈಲ್​ ಉಪಯೋಗಿಸುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಮಾಗಡಿ: ಬಂಡೆಮಠದ ಬಸವಲಿಂಗಶ್ರೀ ಶಿವಗಣಾರಾಧನೆ ಇಂದು; ಸಿದ್ದಗಂಗಾಶ್ರೀಗಳ ನೇತೃತ್ವ, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ

ಕಣ್ಣೂರು ಮಠದಲ್ಲಿ ಮಹಜರು ಮಾಡುವ ಮಾಗಡಿ ಠಾಣೆ ಪೊಲೀಸರು

ಮಾಗಡಿ ಠಾಣೆ ಪೊಲೀಸರು ಆರೋಪಿ ಡಾ.ಮೃತ್ಯುಂಜಯ ಸ್ವಾಮೀಜಿ ಅವರನ್ನು ಸ್ಥಳ ಮಹಜರು ಮಾಡಲು ಕಣ್ಣೂರು ಮಠಕ್ಕೆ ಕರೆದೊಯ್ದಿದ್ದಾರೆ.

ಕೆಲ ದಿನಗಳ ಹಿಂದೆ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್​ (Honeytrap) ಮಾಡಿಸಿದ್ದ ಆರೋಪದ ಮೇಲೆ ಮಾಗಡಿ ತಾಲ್ಲೂಕು ಕಣ್ಣೂರು ಮಠದ ಸ್ವಾಮೀಜಿ ಹಾಗೂ ಹನಿಟ್ರ್ಯಾಪ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ಆರೋಪ ಹೊತ್ತ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಇವರ ಸುದೀರ್ಘ ವಿಚಾರಣೆ ನಡೆಸಲಾಗಿತ್ತು. ಸದ್ಯ ಈಗ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಈಗ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯೆತೆ ಇದೆ.

ಅತ್ಯಾಚಾರಕ್ಕೂ ಹನಿಟ್ರ್ಯಾಪ್​ಗೂ ವ್ಯತ್ಯಾಸವಿದೆ, ಕೆಲ ಮಠಗಳಲ್ಲಿ ಕಾಮ ವ್ಯಾಪಾರದ ಸರಕಾಗಿದೆ; ಲೈಂಗಿಕ ಚಿಕಿತ್ಸಕ ಡಾ ವಿನೋದ್ ಛಬ್ಬಿ

ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಮತ್ತು ಆತ್ಮಹತ್ಯೆ ಬಗ್ಗೆ ಕರ್ನಾಟಕದ ಖ್ಯಾತ ಲೈಂಗಿಕ ಚಿಕಿತ್ಸಕ ಮತ್ತು ಮನಃಶಾಸ್ತ್ರಜ್ಞ ಡಾ ವಿನೋದ್ ಛಬ್ಬಿ ಈ ರೀತಿ ವಿಶ್ಲೇಷಿಸಿದ್ದಾರೆ. ‘ಟಿವಿ9 ಕನ್ನಡ ಸುದ್ದಿವಾಹಿನಿಗೆ ಗುರುವಾರ (ನ 3) ವಿಶೇಷ ಸಂದರ್ಶನ ನೀಡಿದ ವೇಳೆ ‘ಕಾವಿಧಾರಿಗಳ ಕಾಮ ಜಂಜಡ’ದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಪುರುಷ-ಸ್ತ್ರೀಯರ ನಡುವೆ ಆಕರ್ಷಣೆ ಸಹಜ. ಹನಿಟ್ರ್ಯಾಪ್ ಏಕೆ ನಡೆಯುತ್ತದೆ ಎನ್ನುವುದು ನಾವು ಪರಿಶೀಲಿಸಬೇಕಾದ ಮಹತ್ವದ ಪ್ರಶ್ನೆ. ಹನಿಟ್ರ್ಯಾಪ್​ಗಳಿಂದ ಮಹನೀಯರ, ಗೌರವಾನ್ವಿತರ ಹೆಸರು ಕೆಡುತ್ತೆ. ಒಟ್ಟಾರೆ ಸಂಚಿನಲ್ಲಿ ಅಂಥವರ ಸ್ಥಾನಮಾನಗಳನ್ನು ಅಭದ್ರಪಡಿಸುವ ಕಾರಸ್ಥಾನ ಕಾಣಿಸುತ್ತದೆ. ಈ ಥರ ಏಕೆ ನಡೆಯುತ್ತೆ ಎನ್ನುವುದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಕಾಮವನ್ನು ಬಯಸುವ ಜನರು ಇರುವ ಕಡೆ ಅದಕ್ಕೆ ತಕ್ಕಂತೆ ಅನುಕೂಲ ಕಲ್ಪಿಸುವವರು ಇದ್ದೇ ಇರುತ್ತಾರೆ. ಇಂಥ ಸಂದರ್ಭಗಳಲ್ಲಿ ಕಾಮ ಎನ್ನುವುದು ವ್ಯಾಪಾರ, ಬ್ಯಾಕ್​​ಮೇಲ್ ಸರಕಾಗಿ ಉಪಯೋಗಿಸಲ್ಪಡುತ್ತೆ.

ಇದನ್ನೂ ಓದಿ: Tv9 Exclusive: ಅತ್ಯಾಚಾರಕ್ಕೂ ಹನಿಟ್ರ್ಯಾಪ್​ಗೂ ವ್ಯತ್ಯಾಸವಿದೆ, ಕೆಲ ಮಠಗಳಲ್ಲಿ ಕಾಮ ವ್ಯಾಪಾರದ ಸರಕಾಗಿದೆ; ಲೈಂಗಿಕ ಚಿಕಿತ್ಸಕ ಡಾ ವಿನೋದ್ ಛಬ್ಬಿ

Published On - 10:43 am, Thu, 3 November 22