AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ; ಹಾರೋಹಳ್ಳಿ ಕಾರ್ಯಕ್ರಮದಲ್ಲಿ ಹೌಹಾರಿದ ಅನಿತಾ ಕುಮಾರಸ್ವಾಮಿಗೆ ಅಶ್ವತ್ಥ್ ಟಾಂಗ್

ಕೆಲಸವನ್ನೇ ಮಾಡದೆ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನಗಿಲ್ಲ. ನೇರ ನುಡಿ, ಅಭಿವೃದ್ಧಿ ಪರ ರಾಜಕಾರಣ ನನ್ನದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ ಟ್ವೀಟ್​ ಮಾಡಿದ್ದಾರೆ.

ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ; ಹಾರೋಹಳ್ಳಿ ಕಾರ್ಯಕ್ರಮದಲ್ಲಿ ಹೌಹಾರಿದ ಅನಿತಾ ಕುಮಾರಸ್ವಾಮಿಗೆ ಅಶ್ವತ್ಥ್ ಟಾಂಗ್
ಸಚಿವ ಅಶ್ವತ್ಥ್ ನಾರಾಯಣ ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ
ಆಯೇಷಾ ಬಾನು
|

Updated on:Feb 22, 2023 | 7:13 AM

Share

ರಾಮನಗರ: ರಾಮನಗರ ಜಿಲ್ಲೆಯ ಐದನೇ ತಾಲೂಕಾಗಿ ಹಾರೋಹಳ್ಳಿ ರಚನೆ ಆಗಿದ್ದು ನಿನ್ನೆ(ಫೆ.21) ತಾಲೂಕು ಉದ್ಘಾಟನೆ ಅದ್ಧೂರಿಯಾಗಿ ನೆರವೇರಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ(Ashwath Narayana) ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ(Anitha Kumaraswamy) ನಡುವೆ ಜಟಾಪಟಿ ನಡೆದಿತ್ತು. ಸದ್ಯ ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹಾರೋಹಳ್ಳಿ ತಾಲೂಕು ರಚನೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಕೊಡುಗೆ ಬಗ್ಗೆ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ. ಕೆಲಸವನ್ನೇ ಮಾಡದೆ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನಗಿಲ್ಲ. ನೇರ ನುಡಿ, ಅಭಿವೃದ್ಧಿ ಪರ ರಾಜಕಾರಣ ನನ್ನದು ಎಂದು ಅಶ್ವಥ್​ ಟ್ವೀಟ್ ಮಾಡಿದ್ದಾರೆ.

ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ

ಹಾರೋಹಳ್ಳಿ ತಾಲೂಕು ರಚನೆಯಲ್ಲಿ ಹೆಚ್​ಡಿಕೆ ಕೊಡುಗೆ ಬಗ್ಗೆ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ. ಕೆಲಸವನ್ನೇ ಮಾಡದೆ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನಗಿಲ್ಲ. ನೇರ ನುಡಿ, ಅಭಿವೃದ್ಧಿ ಪರ ರಾಜಕಾರಣ ನನ್ನದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ ಟ್ವೀಟ್​ ಮಾಡಿದ್ದಾರೆ.

ನಮ್ಮ ರಾಮನಗರ ಜಿಲ್ಲೆಯ ಜನತೆಯ ಶ್ರೇಯವೇ ನನ್ನ ಆದ್ಯತೆ. ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ. ಬಿಜೆಪಿ ಸರ್ಕಾರ ಬರುವ ಮೊದಲು ಅಭಿವೃದ್ಧಿ ಹೇಗೆ ಕುಂಠಿತವಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ. ಅಭಿವೃದ್ಧಿ ಕೆಲಸ ಆಗಿರುವುದು ಜನರಿಗೆ ಗೊತ್ತಿದೆ, ದಾಖಲೆ ಹೇಳುತ್ತಿವೆ. ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಅನಿತಾಗೆ ಅವಮಾನಿಸಲಾಗಿದೆ ಎಂಬ ಮಾತು ಕೇಳಿ ಆಶ್ಚರ್ಯವಾಯಿತು. ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭಾ ಕ್ಷೇತ್ರದ JDS ಶಾಸಕಿ. ಶಿಷ್ಟಾಚಾರದ ಪ್ರಕಾರವೇ ಕಾರ್ಯಕ್ರಮ ಜರುಗಿದರೂ ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ನಿಗದಿತ ಸಮಯಕ್ಕೆ ಕಾರ್ಯಕ್ರಮಕ್ಕೆ ಬರದೆ ಹೀಗೆ ಹೇಳುವುದು ಎಷ್ಟು ಸರಿ. ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟ್ವೀಟ್​ ಮೂಲಕ ಅನಿತಾ ಕುಮಾರಸ್ವಾಮಿಗೆ ಅಶ್ವತ್ಥ್​ ನಾರಾಯಣ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: Ramanagara: ಹಾರೋಹಳ್ಳಿ ತಾಲೂಕು ಉದ್ಘಾಟನೆ; ವೇದಿಕೆಯಲ್ಲೇ ಅಶ್ವಥ್ಥನಾರಾಯಣ – ಅನಿತಾ ಕುಮಾರಸ್ವಾಮಿ ವಾಕ್ಸಮರ

ನಿನ್ನೆ ಹಾರೋಹಳ್ಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದದ್ದೇನು?

ನಿನ್ನೆ ಹಾರೋಹಳ್ಳಿ ಉದ್ಘಾಟನಾ ಕಾರ್ಯಕ್ರಮವಿತ್ತು. ಆದ್ರೆ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಬರೋ ಮೊದಲೇ ಉದ್ಘಾಟನೆ ನೆರವೇರಿಸಿದ್ದರು. ಅಲ್ಲದೆ ವೇದಿಕೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ, ರಾಮನಗರಕ್ಕೆ ಕುಡಿಯವ ನೀರಿನ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಅನಿತಾ ಕುಮಾರಸ್ವಾಮಿ ಅವರು ಅಶ್ವತ್ಥ್ ಮಾತಿಗೆ ಆಕ್ಷೇಪ ಹೊರಹಾಕಿದರು.

ಸಚಿವ ಅಶ್ವತ್ಥ್ ನಾರಾಯಣ ಕಾರ್ಯಕ್ರಮದಲ್ಲಿ ರಾಮನಗರಕ್ಕೆ ಬಿಜೆಪಿ ಸರ್ಕಾರ ಏನೇನ್ ಮಾಡಿದೆ ಅಂತಾ ಮಾತಾಡಿದರು. ಅಶ್ವತ್ಥ್ ಬಳಿಕ ಬಂದು ಮಾತನಾಡಿದ ಅನಿತಾ ಕುಮಾರಸ್ವಾಮಿ, ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು. ಈ ತಾಲೂಕಾಗಲು ನನ್ನ ಶ್ರಮ, ಹೆಚ್​ಡಿಕೆ ಶ್ರಮ ಇದೆ, ಈಗ ಬಂದು ಇವರು ನಾವ್ ಮಾಡಿದ್ದು ಅಂದ್ರೆ ಹೇಗೆ ಅಂತಾ ಪ್ರಶ್ನಿಸಿದರು. ಇಲ್ಲಿಗೆ ಇವತ್ತೇನಾದ್ರೂ ಕುಮಾರಸ್ವಾಮಿ ಬಂದಿದ್ರೆ ಇವ್ರೆಲ್ಲ ಇಷ್ಟು ಮಾತಾಡೋಕೆ ಆಗ್ತಿರಲಿಲ್ಲ. ಅಷ್ಟೇ ಅಲ್ಲ ಸಚಿವ ಅಶ್ವತ್ಥ್ ನಾರಾಯಣ ಮೊದಲು ಅವರ ಮಲ್ಲೇಶ್ವರಂ ಕ್ಷೇತ್ರವನ್ನ ಅಭಿವೃದ್ಧಿ ಮಾಡ್ಲಿ ಅಂತಾ ಟಾಂಗ್ ಕೊಟರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:13 am, Wed, 22 February 23

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ