ಬೊಂಬೆನಗರಿಯಲ್ಲಿ 100 ವರ್ಷ ಹಳೆಯ ಪಾರಂಪರಿಕ ಕಟ್ಟಡ ತೆರವಿಗೆ ಮುಂದಾದ ನಗರಸಭೆ; ಸ್ಥಳೀಯರ ತೀವ್ರ ವಿರೋಧ

ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಇರುವ ಪುರಭವನ ನಿರ್ಮಾಣ 100 ವರ್ಷಗಳ ಹಿಂದೆಯೇ ನಡೆದಿದೆ. ಈ ಜಾಗವನ್ನು ಜನರಲ್ಲಿ ಮತೀಯ ಸಾಮರಸ್ಯ, ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಮುಸ್ಲಿಂ ದಾನಿಯೊಬ್ಬರು ಪುರಭವನ ನಿರ್ಮಾಣಕ್ಕಾಗಿ ದಾನವಾಗಿ ಕೊಟ್ಟಿದ್ದಾರೆ.

ಬೊಂಬೆನಗರಿಯಲ್ಲಿ 100 ವರ್ಷ ಹಳೆಯ ಪಾರಂಪರಿಕ ಕಟ್ಟಡ ತೆರವಿಗೆ ಮುಂದಾದ ನಗರಸಭೆ; ಸ್ಥಳೀಯರ ತೀವ್ರ ವಿರೋಧ
100 ವರ್ಷ ಹಳೆಯ ಪಾರಂಪರಿಕ ಕಟ್ಟಡ ತೆರವಿಗೆ ಮುಂದಾದ ಚನ್ನಪಟ್ಟಣ ನಗರಸಭೆ
Edited By: ಸಾಧು ಶ್ರೀನಾಥ್​

Updated on: Dec 06, 2022 | 11:33 AM

ಬೊಂಬೆನಗರಿ ಚನ್ನಪಟ್ಟಣದಲ್ಲಿ (Channapatna) ಸದಾ ಒಂದಿಲ್ಲೊಂದು ವಿಚಾರಕ್ಕೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಇದೀಗ ಪಾರಂಪರಿಕ ಕಟ್ಟಡದ ವಿಚಾರವಾಗಿ ನಗರಸಭೆ ಹಾಗೂ ಸಾರ್ವಜನಿಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ನೂರಾರು ವರ್ಷಗಳ ಹಳೆಯದಾದ ಪಾರಂಪರಿಕ ಕಟ್ಟಡ (Channapatna City Municipal Council)  ತೆರವು ಮಾಡಲು (Demolition) ನಗರಸಭೆ ಮುಂದಾಗಿದ್ದು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ಕಟ್ಟಡ ತೆರವಿಗೆ ಮುಂದಾಗಿರೋ ನಗರಸಭೆ

ಹೌದು ಬೊಂಬೆನಗರಿ ಚನ್ನಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಒಂದಿಲ್ಲೊಂದು ವಿಚಾರವಾಗಿ ಜಟಾಪಟಿ ನಡೆಯುತ್ತಲೇ ಇದೆ. ಕಾಮಗಾರಿ, ಅನುದಾನ, ಶಂಕುಸ್ಥಾಪನೆ ವಿಚಾರವಾಗಿಯೂ ಫೈಟ್ ನಡೆಯುತ್ತಲೆ ಇದೆ. ಈ ಮಧ್ಯೆ ಇದೀಗ ನಗರಸಭೆ ಹಾಗೂ ಸಾರ್ವಜನಿಕರ ನಡುವೆ ಪೈಪೋಟಿ ಏರ್ಪಟ್ಟಿದೆ.

ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಇರುವ ನೂರಾರು ವರ್ಷಗಳ ಹಳೆಯದಾದ ಪಾರಂಪರಿಕ ಕಟ್ಟಡವಾದ ಪುರಭವನವನ್ನ ನೆಲಸಮಗೊಳಿಸಿ, ನೂತನವಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ಹೊಸ ಕಟ್ಟಡವನ್ನ ಕಟ್ಟಲು ನಗರಸಭೆ ಮುಂದಾಗಿದೆ. ಇದಕ್ಕೆ ಚನ್ನಪಟ್ಟಣ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಾರಂಪರಿಕ ಕಟ್ಟಡವನ್ನ ಯಾವುದೇ ಕಾರಣಕ್ಕೂ ನೆಲಸಮ ಮಾಡಬಾರದು ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನುತ್ತಾರೆ ಗೊ ರಾ ಶ್ರೀನಿವಾಸ್, ಸ್ಥಳೀಯರು.

City Municipal Council wants to demolish more than 100 years old building in Channapatna

ಅಂದಹಾಗೆ ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಇರುವ ಪುರಭವನ ನಿರ್ಮಾಣ 100 ವರ್ಷಗಳ ಹಿಂದೆಯೇ ನಡೆದಿದೆ. ಈ ಜಾಗವನ್ನು ಜನರಲ್ಲಿ ಮತೀಯ ಸಾಮರಸ್ಯ, ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಮುಸ್ಲಿಂ ದಾನಿಯೊಬ್ಬರು ಪುರಭವನ ನಿರ್ಮಾಣಕ್ಕಾಗಿ ದಾನವಾಗಿ ಕೊಟ್ಟಿದ್ದಾರೆ. ಈ ಜಾಗದಲ್ಲಿ ಭವನ ನಿರ್ಮಾಣಕ್ಕೆ 27 ಜೂನ್ 1916ರಲ್ಲಿ ಆಗಿನ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ. ಚಾಂಡಿ ಅವರು ಅಸ್ಥಿಭಾರ ಹಾಕಿದ್ದಾರೆ.

ಅದಾದ ನಂತರ ಆಗಿನ ಮೈಸೂರು ರಾಜರ ಆಡಳಿತದಲ್ಲಿ ದಿವಾನರಾಗಿದ್ದ ಅಮೀನ್ ಉಲ್ ಮುಲ್ಕ್ ಸರ್ ಮಿರ್ಜಾ ಇಸ್ಮಾಯಿಲ್ ಅವರು 7 ಏಪ್ರಿಲ್ 1930ರಲ್ಲಿ ಪುರಭವನ ಉದ್ಘಾಟನೆ ಮಾಡಿದ್ರು. ಈ ಪುರಭವನವು ದಾನಿಗಳ ಆಶಯದಂತೆ 1952ರ ವರೆಗೆ ನಡೆಯುತ್ತಾ ಬಂದಿದೆ. ಅದಾದ ಮೇಲೆ ಪುರಸಭೆಯ ಆಡಳಿತಕ್ಕೆ ಎಲ್ಲಿಯೂ ಜಾಗವಿಲ್ಲದೆ ಪುರಭವನವನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದರು.

ಆನಂತರ ಲಕ್ಷಾಂತರ ಖರ್ಚು ಮಾಡಿ ಕಟ್ಟಡವನ್ನ ಅಭಿವೃದ್ದಿ ಸಹಾ ಮಾಡಲಾಗಿದೆ. ಆದರೆ ಇದೀಗ ಕಟ್ಟಡ ಹಳೆಯದಾಗಿದೆ. ನಗರಸಭೆಗೆ ಜಾಗವಿಲ್ಲವೆಂದು ಪುರಭವನ್ನ ನೆಲಸಮ ಮಾಡಲು ನಗರಸಭೆ ಮುಂದಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರಸಭೆ ಆಯುಕ್ತ, ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎನ್ನುತ್ತಿದ್ದಾರೆ ನಗರಸಭೆ ಆಯುಕ್ತ ಪುಟ್ಟಸ್ವಾಮಿ.

ಒಟ್ಟಾರೆ ಪುರಸಭೆಯ ವಿಚಾರವಾಗಿ ನಗರಸಭೆ ಹಾಗೂ ಸಾರ್ವಜನಿಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ಪಾರಂಪರಿಕ ಕಟ್ಟಡವನ್ನ ಉಳಸಿಕೊಳ್ಳಲು ಸಾರ್ವಜನಿಕರು ಮುಂದಾಗಿದ್ದಾರೆ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)

ರಾಜ್ಯ ಮತ್ತಷ್ಟು ಸುದ್ದಿ ಓದಲು  ಇಲ್ಲಿ ಕ್ಲಿಕ್  ಮಾಡಿ

Published On - 11:27 am, Tue, 6 December 22

TV9 Web

TV9 Kannada

Read More
Loading...
Unable to load recommendations.
Follow Us