ಬಿಡದಿ ಅಂದ್ರೆ ತಟ್ಟೆ ಇಡ್ಲಿ ಮಾತ್ರವಲ್ಲ: ನಲ್ಲಿಗುಡ್ಡೆ ಕೆರೆಯಲ್ಲಿ ಜಲಕ್ರೀಡೆ ವೈಭವ; ವೀಕೆಂಡ್ ಪ್ಲಾನ್‌ಗೆ ಬೆಸ್ಟ್ ಪ್ರವಾಸಿ ತಾಣ

ಬಿಡದಿ ಸಮೀಪದ ನಲ್ಲಿಗುಡ್ಡೆ ಕೆರೆ ಈಗ ಬೆಂಗಳೂರಿಗರಿಗೆ ಹೊಸ ಜಲಕ್ರೀಡಾ ಕೇಂದ್ರವಾಗಿ ಹೊರಹೊಮ್ಮಿದೆ. ರಮಣೀಯ ಪರಿಸರದಲ್ಲಿ ಕಯಾಕಿಂಗ್, ಸ್ಪೀಡ್ ಬೋಟಿಂಗ್ ಸೇರಿದಂತೆ ಹಲವು ಸಾಹಸಮಯ ಜಲಕ್ರೀಡೆಗಳನ್ನು ಇಲ್ಲಿ ಆನಂದಿಸಬಹುದು. ವಾರಾಂತ್ಯದ ಏಕದಿನ ಪ್ರವಾಸಕ್ಕೆ, ಟ್ರಾಫಿಕ್‌ನಿಂದ ವಿರಾಮ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದ್ದು, ಪ್ರಕೃತಿ ಪ್ರಿಯರು ಮತ್ತು ಛಾಯಾಗ್ರಾಹಕರಿಗೂ ಮೆಚ್ಚಿನ ತಾಣ.

ಬಿಡದಿ ಅಂದ್ರೆ ತಟ್ಟೆ ಇಡ್ಲಿ ಮಾತ್ರವಲ್ಲ: ನಲ್ಲಿಗುಡ್ಡೆ ಕೆರೆಯಲ್ಲಿ ಜಲಕ್ರೀಡೆ ವೈಭವ; ವೀಕೆಂಡ್ ಪ್ಲಾನ್‌ಗೆ ಬೆಸ್ಟ್ ಪ್ರವಾಸಿ ತಾಣ
ನಲ್ಲಿಗುಡ್ಡೆ ಕೆರೆ
Edited By:

Updated on: Sep 29, 2026 | 8:26 PM

ಬಿಡದಿ, ಸೆ.29: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿ ಎಂದರೆ ತಕ್ಷಣ ನೆನಪಾಗುವುದು ಬೃಹತ್ ಕೈಗಾರಿಕಾ ಪ್ರದೇಶ ಹಾಗೂ ಬಿಸಿಬಿಸಿಯಾದ ಫೇಮಸ್ ‘ತಟ್ಟೆ ಇಡ್ಲಿ’. ಆದರೆ, ಇದೀಗ ಬಿಡದಿ ತನ್ನ ಮುಖಪುಟವನ್ನು ಬದಲಾಯಿಸಿಕೊಂಡಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರಮುಖ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ‘ನಲ್ಲಿಗುಡ್ಡೆ ಕೆರೆ’ (Nalligudda Lake) ಈಗ ಜಲಕ್ರೀಡೆಗಳ ಹೊಸ ಹಬ್ ಆಗಿ ಮಾರ್ಪಟ್ಟಿದೆ. ಸುತ್ತಲೂ ಪ್ರಕೃತಿಯ ಮಡಿಲು, ಮನಸ್ಸಿಗೆ ಮುದ ನೀಡುವ ರಮಣೀಯ ಪರಿಸರ ಮತ್ತು ಸಾಹಸಮಯ ಜಲಕ್ರೀಡೆಗಳ ಸಮ್ಮಿಲನವೇ ಈ ನಲ್ಲಿಗುಡ್ಡೆ ಕೆರೆಯ ಮುಖ್ಯ ಆಕರ್ಷಣೆ.

ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಈ ವಿಶಾಲ ಕೆರೆಯ ದಂಡೆ ಪ್ರಕೃತಿ ಪ್ರಿಯರಿಗೆ ಹಾಗೂ ಛಾಯಾಗ್ರಾಹಕರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಕಳೆದ ಕೆಲ ತಿಂಗಳುಗಳಿಂದ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಇಲ್ಲಿ ವಿವಿಧ ಮಾದರಿಯ ಜಲಕ್ರೀಡೆಗಳನ್ನು ಆರಂಭಿಸಲಾಗಿದೆ. ಇಲ್ಲಿ ಕಯಾಕಿಂಗ್, ಸ್ಪೀಡ್ ಬೋಟಿಂಗ್, ವಾಟರ್ ಬೈಕ್, ಪೆಡಲ್ ಬೋಟ್ ಇನ್ನು ಅನೇಕ ಆಟಗಳನ್ನಾಡುವ ಅವಕಾಶ ಕುಡ ಇದೆ.

ಕೆರೆಯ ನಡುವೆ ಸೂರ್ಯಾಸ್ತ ಹಾಗೂ ಸೂರ್ಯೋದಯದ ವೇಳೆಯ ಸುಂದರ ದೃಶ್ಯಗಳು ಸಾಮಾಜಿಕ ಜಾಲತಾಣ ಪ್ರಿಯರಿಗೆ ಮತ್ತು ‘ರೀಲ್ಸ್’ (Reels) ತಯಾರಕರಿಗೆ ನೆಚ್ಚಿನ ಸ್ಪಾಟ್ ಆಗಿ ಬದಲಾಗಿದೆ. “ಕಳೆದ ಕೆಲ ತಿಂಗಳುಗಳಿಂದ ಜಲಕ್ರೀಡೆಗಳನ್ನು ಆರಂಭಿಸಿದ್ದು, ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಬೆಂಗಳೂರಿನಿಂದ ಅತ್ಯಂತ ಹತ್ತಿರದಲ್ಲಿರುವುದರಿಂದ ವಾರಾಂತ್ಯದಲ್ಲಿ ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಜನರು ಲಗ್ಗೆ ಇಡುತ್ತಿದ್ದಾರೆ.” ಎಂದು ಜಲಕ್ರೀಡೆ ನಿರ್ವಾಹಕ ಕಿರಣ್ ಹೇಳಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2026: 4x400m ರಿಲೇಯಲ್ಲಿ ಭಾರತೀಯ ವನಿತೆಯರಿಗೆ ಬಂಗಾರ: ಈ ಸಾಧನೆಗೆ ಸಾಕ್ಷಿಯಾದ ಕರ್ನಾಟಕದ ಪೂವಮ್ಮ

ಬೆಂಗಳೂರಿನ ಟ್ರಾಫಿಕ್ ಹಾಗೂ ಕೆಲಸದ ಒತ್ತಡದಿಂದ ಕೊಂಚ ವಿರಾಮ ಬಯಸುವ ರಾಜಧಾನಿಯ ಜನರಿಗೆ ವೀಕೆಂಡ್‌ನಲ್ಲಿ ಒಂಡೇ ಟ್ರಿಪ್ (One-day trip) ಮಾಡಲು ನಲ್ಲಿಗುಡ್ಡೆ ಕೆರೆ ಅತ್ಯುತ್ತಮ ಆಯ್ಕೆಯಾಗಿದೆ. ಪ್ರಕೃತಿಯ ಶಾಂತ ವಾತಾವರಣದ ಜೊತೆಗೆ ವಾಟರ್ ಸ್ಪೋರ್ಟ್ಸ್ ಮಜಾ ಅನುಭವಿಸಲು ಪ್ರವಾಸಿಗರು ಸಾಲಾಗಿ ಆಗಮಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us